Pan Aadhaar Link Deadline: ಪ್ಯಾನ್-ಆಧಾರ್ ಲಿಂಕ್ ಮಾಡಲು ಹೊಸ ಗಡುವು, ಈ ಬಾರಿ ತಪ್ಪಿಸಿದರೆ 10,000 ದಂಡ.. ಸರ್ಕಾರ ಎಚ್ಚರಿಕೆ
Pan Aadhaar Link Deadline: ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಹೊಸ ಗಡುವು 30 ಜೂನ್ 2023 ಆಗಿದೆ. ರೂ 1000 ದಂಡದೊಂದಿಗೆ ಈ ಗಡುವಿನವರೆಗೆ ನೀವು ಪ್ಯಾನ್-ಆಧಾರ್ ಲಿಂಕ್ ಅನ್ನು ಮಾಡಬಹುದು.
Pan Aadhaar Link Deadline: ಪ್ಯಾನ್ ಕಾರ್ಡ್ (Pan Card) ಮತ್ತು ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡಲು ಹೊಸ ಗಡುವು (New Deadline) 30 ಜೂನ್ 2023 ಆಗಿದೆ. ರೂ 1000 ದಂಡದೊಂದಿಗೆ ಈ ಗಡುವಿನವರೆಗೆ ನೀವು ಪ್ಯಾನ್-ಆಧಾರ್ ಲಿಂಕ್ (Pan Aadhaar Link) ಅನ್ನು ಮಾಡಬಹುದು. ಪ್ಯಾನ್-ಆಧಾರ್ ಲಿಂಕ್ ಮಾಡಲು ಹೊಸ ಗಡುವು ನೀಡಲಾಗಿದ್ದು ನೀವು ಈ ಬಾರಿ ತಪ್ಪಿಸಿಕೊಂಡರೆ, 10,000 ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹಣಕಾಸು ಸಚಿವರು ಎಚ್ಚರಿಸಿದ್ದಾರೆ.
ಗಡುವು ಮೀರಿದ ನಂತರ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಇತ್ತೀಚೆಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಜೂನ್ 30 ರ ನಂತರ ಲಿಂಕ್ ಮಾಡಲು ಹೆಚ್ಚಿನ ದಂಡವನ್ನು ಪಾವತಿಸಬೇಕಾಗಬಹುದು ಎಂದು ಹೇಳಿದ್ದಾರೆ.
Credit Card Upgrade: ನಿಮ್ಮ ಕ್ರೆಡಿಟ್ ಕಾರ್ಡ್ ಅಪ್‌ಗ್ರೇಡ್ ಮಾಡುವ ಮುನ್ನ ಈ ವಿಷಯಗಳು ತಿಳಿಯಿರಿ
ಈ ಹಿಂದೆ, ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡದಿದ್ದಕ್ಕಾಗಿ ದಂಡವನ್ನು ಸಮರ್ಥಿಸಿಕೊಂಡ ನಿರ್ಮಲಾ ಸೀತಾರಾಮನ್, ಈ ಸೌಲಭ್ಯವು ಮಾರ್ಚ್ 31, 2022 ರವರೆಗೆ ಉಚಿತತವಾಗಿತ್ತು ಎಂದು ಹೇಳಿದರು. ಕಳೆದ ವರ್ಷ, ಏಪ್ರಿಲ್ 1 ರಿಂದ 500 ರೂಪಾಯಿ ವಿಳಂಬ ಶುಲ್ಕವನ್ನು ವಿಧಿಸಲಾಗುತ್ತಿತ್ತು, ನಂತರ ಅದನ್ನು ಜುಲೈ 1 ರಿಂದ 1,000 ಕ್ಕೆ ಹೆಚ್ಚಿಸಲಾಯಿತು. ಜೂನ್ 30, 2023 ರ ಮೊದಲು ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರಿಯವಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. ಅದೇ ಸಮಯದಲ್ಲಿ, ಇದರ ನಂತರ ಲಿಂಕ್ ಮಾಡುವ ಮೇಲಿನ ದಂಡದ ಮೊತ್ತವು ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.
ಎಷ್ಟು ದಂಡ ವಿಧಿಸಲಾಗುತ್ತದೆ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಪ್ರಕಾರ, 10,000 ರೂ.ವರೆಗೆ ದಂಡ ವಿಧಿಸಬಹುದು. ಪ್ಯಾನ್ ನಿಷ್ಕ್ರಿಯಗೊಂಡರೆ, ನೀವು ಹಣಕಾಸಿನ ವಹಿವಾಟುಗಳನ್ನು ಮಾಡಲು ಸಾಧ್ಯವಿಲ್ಲ ಎಂದು ವಿವರಿಸಿದರು. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಅಥವಾ ಬ್ಯಾಂಕ್ ಖಾತೆ ತೆರೆಯುವುದು ಎಲ್ಲವೂ ಪರಿಣಾಮ ಬೀರುತ್ತದೆ ಜೊತೆಗೆ ಹಲವಾರು ಸಮಸ್ಯೆ ಇರುತ್ತದೆ ಎಂದರು.
ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಮೇಘಾಲಯದ ನಿವಾಸಿಗಳಿಗೆ ಪ್ಯಾನ್-ಆಧಾರ್ ಲಿಂಕ್ ಮಾಡುವ ಅಗತ್ಯವಿಲ್ಲ ಎಂದು ವಿವರಿಸಿದ ಅವರು, ಅನಿವಾಸಿ ಕೂಡ ಆಧಾರ್-ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಬದ್ಧರಾಗಿರುವುದಿಲ್ಲ.ಇದಲ್ಲದೆ, 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅಥವಾ ಭಾರತದ ನಾಗರಿಕರಲ್ಲದವರಿಗೆ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದರು.
New deadline for PAN-Aadhaar linking, If you miss this time, you have to pay fine of Rs 10000
Follow us On
Google News |