ಒಮ್ಮೆ ಚಾರ್ಜ್ ಮಾಡಿದ್ರೆ 212 ಕಿಮೀ ಮೈಲೇಜ್! ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು
Electric Scooters: ಟಿವಿಎಸ್ ಮತ್ತು ಹೀರೋ ಕಂಪನಿಗಳ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ತಮ ಮೈಲೇಜ್ ಮತ್ತು ಶೈಲಿಯ ವಿನ್ಯಾಸದಲ್ಲಿ ಗ್ರಾಹಕರ ಗಮನ ಸೆಳೆದಿವೆ. ಒಂದು ಚಾರ್ಜ್‌ನಲ್ಲಿ 200 ಕಿಮೀ ಮೀರಿದ ರೇಂಜ್ ನೀಡುತ್ತಿವೆ.

Electric Scooters: ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಸ್ಪರ್ಧೆ ದಿನೇದಿನೇ ಹೆಚ್ಚುತ್ತಿದೆ. ಇದೀಗ ಟಿವಿಎಸ್, ಹೀರೋ ಮತ್ತು ಕೈನೆಟಿಕ್ ಕಂಪನಿಗಳು ಬಿಡುಗಡೆ ಮಾಡಿದ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗ್ರಾಹಕರ ಮನ ಗೆದ್ದಿವೆ.
ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಹಾಗೂ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವುದರಿಂದ, ಈ ಸ್ಕೂಟರ್‌ಗಳು ನಗರ ಪ್ರಯಾಣಕ್ಕೆ ಸೂಕ್ತ ಆಯ್ಕೆಯಾಗಿ ಪರಿಣಮಿಸುತ್ತಿವೆ.
ಟಿವಿಎಸ್ iQube : ಟಿವಿಎಸ್ ಮೋಟಾರ್‌ನಿಂದ ಬಂದ ಈ ಸ್ಟೈಲಿಷ್ ಎಲೆಕ್ಟ್ರಿಕ್ ಸ್ಕೂಟರ್ ₹96,422 (ಎಕ್ಸ್-ಶೋರೂಮ್) ದರದಿಂದ ಲಭ್ಯ. ಇದು 2.2kWh ರಿಂದ 5.3kWh ಬ್ಯಾಟರಿ ಆಯ್ಕೆಗಳಲ್ಲಿ ಬರುತ್ತದೆ. ಪ್ರತಿ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ರೇಂಜ್ ಬದಲಾಗುತ್ತದೆ, ಕಡಿಮೆ ಸಾಮರ್ಥ್ಯದಲ್ಲಿ 94 ಕಿಮೀ ಮತ್ತು ಗರಿಷ್ಠ ಸಾಮರ್ಥ್ಯದಲ್ಲಿ 212 ಕಿಮೀ ಪ್ರಯಾಣಿಸಬಹುದು.
ಹೀರೋ Vida V2 Plus : ಹೀರೋ ಮೋಟೋಕಾರ್ಪ್‌ನಿಂದ ಬಿಡುಗಡೆಯಾದ ಈ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ₹92,800 ದರದಿಂದ ಆರಂಭವಾಗುತ್ತದೆ. 3.4kWh ರಿಮೂವೇಬಲ್ ಬ್ಯಾಟರಿ ಹೊಂದಿರುವ ಇದು ಒಂದು ಬಾರಿ ಪೂರ್ಣ ಚಾರ್ಜ್‌ನಲ್ಲಿ ಸುಮಾರು 143 ಕಿಮೀ ಓಡುತ್ತದೆ. ಆಕರ್ಷಕ ವಿನ್ಯಾಸ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ವೈಶಿಷ್ಟ್ಯದಿಂದ ಯುವ ಪೀಳಿಗೆಗೆ ಈ ಮಾದರಿ ಹೆಚ್ಚು ಇಷ್ಟವಾಗುತ್ತಿದೆ.
ಕೈನೆಟಿಕ್ ಗ್ರೀನ್ ಜಿಂಗ್ : ಕಡಿಮೆ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿರುವವರಿಗೆ ಇದು ಒಳ್ಳೆಯ ಆಯ್ಕೆ. ₹67,990 (ಎಕ್ಸ್-ಶೋರೂಮ್) ಬೆಲೆಯಲ್ಲಿ ಲಭ್ಯವಿರುವ ಈ ಮಾದರಿ ಒಂದು ಚಾರ್ಜ್‌ನಲ್ಲಿ 70 ಕಿಮೀ ರೇಂಜ್ ನೀಡುತ್ತದೆ. ಇದರ ತೂಕ ಕಡಿಮೆ ಹಾಗೂ ನಗರ ಪ್ರಯಾಣಕ್ಕೆ ಸುಲಭವಾದ ವಿನ್ಯಾಸ ಹೊಂದಿದೆ.
ವಿದ್ಯುತ್ ವಾಹನಗಳ ಬೆಲೆಗಳು ಕ್ರಮೇಣ ಕುಸಿಯುತ್ತಿರುವುದರಿಂದ, ಸಾಮಾನ್ಯ ಗ್ರಾಹಕರಿಗೂ ಈ ಸ್ಕೂಟರ್‌ಗಳು ಸುಲಭವಾಗಿ ಲಭ್ಯವಾಗುತ್ತಿವೆ. ಪರಿಸರ ಸ್ನೇಹಿ, ಶಬ್ದರಹಿತ ಮತ್ತು ಇಂಧನದ ಖರ್ಚು ಕಡಿಮೆ ಎಂಬುದರಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆ ಇನ್ನಷ್ಟು ಹೆಚ್ಚುತ್ತಿದೆ.
New Electric Scooters with 200 Plus km Range



