ಯುಪಿಐನಲ್ಲಿ ಹೊಸ ಫೀಚರ್, ಇನ್ಮುಂದೆ ದೊಡ್ಡ ಪಾವತಿಗೂ ಸುಲಭ ಮಾರ್ಗ
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಯುಪಿಐ (UPI) ಮೂಲಕ EMI ಪಾವತಿ ಸೌಲಭ್ಯವನ್ನು ತರಲು ಯೋಜನೆ ಮಾಡಿದೆ. ಇದರಿಂದ ಗ್ರಾಹಕರು QR ಕೋಡ್ ಸ್ಕ್ಯಾನ್ ಮೂಲಕ ಪಾವತಿಗಳನ್ನು ಮಾಡಬಹುದು

ನಮ್ಮ ದೇಶದ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ (UPI) ಇದೀಗ ಮತ್ತೊಂದು ಅದ್ಭುತ ನವೀಕರಣಕ್ಕೆ ಸಿದ್ಧವಾಗುತ್ತಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಯುಪಿಐ ಪ್ಲಾಟ್ಫಾರ್ಮ್ನಲ್ಲಿ EMI ಸೌಲಭ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ವ್ಯವಸ್ಥೆಯು ಗ್ರಾಹಕರಿಗೆ ದೊಡ್ಡ ಮೊತ್ತದ ಪಾವತಿಗಳನ್ನು ಹಂತವಾಗಿ ಮಾಡುವ ಅವಕಾಶ ನೀಡಲಿದೆ.
ಈ EMI ಆಯ್ಕೆಯು ಕ್ಯೂಆರ್ ಕೋಡ್ (QR code) ಸ್ಕ್ಯಾನ್ ಮಾಡುವ ಮೂಲಕ ಲಭ್ಯವಾಗುವ ಸಾಧ್ಯತೆ ಇದೆ. ಕ್ರೆಡಿಟ್ ಕಾರ್ಡ್ ಮೂಲಕ POS ಮೆಷೀನ್ನಲ್ಲಿ ವಹಿವಾಟು ಮಾಡುವ ರೀತಿಯಂತೆಯೇ, ಯುಪಿಐ ಪಾವತಿಗಳನ್ನೂ EMI ಆಧಾರದ ಮೇಲೆ ವಿಭಜಿಸುವ ಕ್ರಮ ಜಾರಿಯಾಗಬಹುದು. NPCI ಪ್ರಕಾರ, EMI ಸೇವೆ ಬಳಕೆದಾರರಿಂದ ಸುಮಾರು 1.5% ಇಂಟರ್ಮಿಟೆಂಟ್ ಶುಲ್ಕವನ್ನು ವಿಧಿಸುವ ಯೋಜನೆ ಇದೆ.
ಈ ಹೊಸ ಫೀಚರ್ನಿಂದ ಫಿನ್ಟೆಕ್ ಆಪ್ಗಳು ಹಾಗೂ ಬ್ಯಾಂಕ್ಗಳಿಗೆ ಹೊಸ ಆದಾಯದ ಮಾರ್ಗ ತೆರೆದುಕೊಳ್ಳಲಿದೆ. ಪ್ರಸ್ತುತ ಯುಪಿಐ ಪಾವತಿಗಳ ಪ್ರಮಾಣ ಹೆಚ್ಚಾದರೂ, ಅದರ ಮೂಲಕ ನೇರ ಆದಾಯ ಸಿಗದಿರುವ ಹಿನ್ನೆಲೆಯಲ್ಲಿ ಈ EMI ಆಯ್ಕೆಯು ಉಪಯುಕ್ತ ಮಾರ್ಗವಾಗಿ ಪರಿಣಮಿಸಲಿದೆ.
ಪೇಟಿಎಂ (Paytm), ಫೋನ್ಪೇ (PhonePe), ಕ್ರೆಡ್ (Kred) ಮೊದಲಾದ ಫಿನ್ಟೆಕ್ ಕಂಪನಿಗಳು ಈಗಾಗಲೇ NPCI ಜೊತೆ EMI ಸೌಲಭ್ಯ ನೀಡಲು ಸಿದ್ಧತೆ ನಡೆಸುತ್ತಿವೆ. ಈ ಕ್ರಮದಿಂದ ಕ್ರೆಡಿಟ್ ಕಾರ್ಡ್ (Credit Card) ಬಳಕೆ ಕಡಿಮೆಯಾಗಿ, ಯುಪಿಐ ಬಳಕೆ ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ.
ಬ್ಯಾಂಕ್ಗಳು ಹಾಗೂ ಫಿನ್ಟೆಕ್ ಸಂಸ್ಥೆಗಳು ಗ್ರಾಹಕರಿಗೆ ಕ್ರೆಡಿಟ್ ಲೈನ್ ನೀಡಲು ಈಗಾಗಲೇ ಒಪ್ಪಂದ ಮಾಡಿಕೊಳ್ಳುತ್ತಿವೆ. EMI ಆಯ್ಕೆಯು ದೊಡ್ಡ ಮೊತ್ತದ ವಹಿವಾಟುಗಳಿಗೂ ಯುಪಿಐ ಮೂಲಕ ಸುಲಭವಾದ ಪರಿಹಾರ ನೀಡಲಿದೆ. ಈ ಹೊಸ ಪರಿವರ್ತನೆ ಯುಪಿಐ ಪಾವತಿಗಳಿಗೆ ಮತ್ತಷ್ಟು ಬಲ ನೀಡಲಿದೆ.
New EMI Feature Coming to UPI Soon



