ಅಕ್ಟೋಬರ್ 1 ರಿಂದ ಹೊಸ ಹೊಸ ನಿಯಮಗಳು! ಇಲ್ಲಿದೆ ಬಿಗ್ ಅಪ್ಡೇಟ್
ಅಕ್ಟೋಬರ್ 1ರಿಂದ ದೇಶದಲ್ಲಿ ವಿವಿಧ ಹಣಕಾಸು ನಿಯಮಗಳಲ್ಲಿ ಬದಲಾವಣೆಗಳು ಬರಲಿವೆ. ಗ್ಯಾಸ್ ದರ, ಯುಪಿಐ ಪಾವತಿಗಳು, ರೈಲ್ವೆ ಟಿಕೆಟ್ ಬುಕ್ಕಿಂಗ್ ಮತ್ತು ಆನ್‌ಲೈನ್ ಗೇಮಿಂಗ್‌ನಲ್ಲಿ ಹೊಸ ನಿಯಮಗಳು ಅನ್ವಯವಾಗಲಿವೆ.

ಅಕ್ಟೋಬರ್ 1ರಿಂದ ಭಾರತದಲ್ಲಿ ಕೆಲವು ಪ್ರಮುಖ ಹಣಕಾಸು ನಿಯಮಗಳಲ್ಲಿ ಬದಲಾವಣೆಗಳಿವೆ. ಈ ನಿಯಮಗಳು ನೇರ ಅಥವಾ ಪರೋಕ್ಷವಾಗಿ ಎಲ್ಲಾ ನಾಗರಿಕರ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ನ್ಯಾಷನಲ್ ಪೆನ್ಷನ್ ಸಿಸ್ಟಮ್
ಇದೇ ದಿನದಿಂದ ನ್ಯಾಷನಲ್ ಪೆನ್ಷನ್ ಸಿಸ್ಟಮ್‌ನಲ್ಲಿ (NPS) ಮುಖ್ಯ ಬದಲಾವಣೆ ಆಗಲಿದೆ. ಈಗಿನಿಂದ NPS ಚಂದಾದಾರರು 100% ಹೂಡಿಕೆಗಳನ್ನು ಈಕ್ವಿಟಿಗಳಲ್ಲಿ ಮಾಡಬಹುದು. ಹಿಂದಿನಂತೆ, ಗವರ್ನೆಮೆಂಟ್ ಹೊರಗಿನ ಚಂದಾದಾರರಿಗೆ ಈಕ್ವಿಟಿ ಹೂಡಿಕೆ ಮಿತಿಯು 75% ಮಾತ್ರವಿತ್ತು.
ಗ್ಯಾಸ್ ದರ ಬದಲಾವಣೆ
ಅಕ್ಟೋಬರ್ 1 ರಿಂದ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಬದಲಾಗಲಿವೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ 1 ನೇ ತಾರೀಖಿನಂದು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಬದಲಾಯಿಸುತ್ತವೆ. ಅದರಂತೆ, ಬೆಲೆಗಳು 1 ರಿಂದ ಬದಲಾಗಲಿವೆ.
ಯುಪಿಐ ಪಾವತಿಗಳ ನಿಯಮ
ಅಕ್ಟೋಬರ್ 1ರಿಂದ ಯುಪಿಐ ಪಾವತಿಗಳಲ್ಲಿ ಪೀರ್ ಟು ಪೀರ್ ಫಂಕ್ಷನ್ ಅನ್ನು ನಿಷೇಧಿಸಲಾಗುತ್ತಿದೆ. ಬಳಕೆದಾರರು ಐಡಿ ಮೂಲಕ ನೇರವಾಗಿ ಹಣ ಕಳುಹಿಸಲು ಅವಕಾಶ ಇರಲ್ಲ. ಸೈಬರ್ ಅಪರಾಧಗಳ ತಡೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದರರ್ಥ ಯುಪಿಐ ಐಡಿ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಪಾವತಿ ಮಾಡುವ ಸಾಧ್ಯತೆ ಇಲ್ಲದಿರಬಹುದು. ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೈಬರ್ ಅಪರಾಧಗಳನ್ನು ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್‌ಪಿಸಿಐ ಹೇಳುತ್ತದೆ.
ರೈಲ್ವೆ ಟಿಕೆಟ್ ಬುಕ್ಕಿಂಗ್
ಅಕ್ಟೋಬರ್ 1 ರಿಂದ ರೈಲ್ವೆ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ. ಈಗ ಆಧಾರ್ ಪರಿಶೀಲನೆ ಇರುವವರು ಮಾತ್ರ ಮುಂಗಡ ಬುಕಿಂಗ್ ಮಾಡಲು ಸಾಧ್ಯವಾಗುತ್ತದೆ.
ಆನ್‌ಲೈನ್ ಗೇಮಿಂಗ್ ನಿಯಮಗಳು
ಆನ್‌ಲೈನ್ ಗೇಮಿಂಗ್‌ನಲ್ಲಿ ವಂಚನೆಯನ್ನು ತಡೆಗಟ್ಟಲು ಅಕ್ಟೋಬರ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಆನ್‌ಲೈನ್ ಗೇಮಿಂಗ್ ಮಸೂದೆ 2025 ರ 1 ರಿಂದ ಜಾರಿಗೆ ಬರಲಿದೆ. ಇಂದಿನಿಂದ, ಹಣಕ್ಕಾಗಿ ಆನ್‌ಲೈನ್‌ನಲ್ಲಿ ಆಡುವ ಎಲ್ಲಾ ಆಟಗಳನ್ನು ನಿಷೇಧಿಸುವ ಸಾಧ್ಯತೆಯಿದೆ.
New Payment Rules from October 1, Key Changes to Know



