ಸ್ವಂತ ಮನೆ ಪಡೆಯಲು ಕೇಂದ್ರ ಸರ್ಕಾರದಿಂದ ಹೊಸ ಯೋಜನೆ! ಇಂದೇ ಈ ಯೋಜನೆಗೆ ಅರ್ಜಿ ಹಾಕಿ!
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸ್ವಂತ ಮನೆ ಇಲ್ಲದೆ ಇರುವವರಿಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿಗಳು (Pradhan Mantri) ದೇಶದಲ್ಲಿರುವ ಬಡವರಿಗೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಆಗಲಿ ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದ ನಮ್ಮ ದೇಶದ ಜನತೆ ಸಹ ಪ್ರಯೋಜನ ಪಡೆಯುತ್ತಿದ್ದಾರೆ. ಸ್ವಂತ ಸೂರು ಮಾಡಿಕೊಳ್ಳಬೇಕು ಎಂದುಕೊಂಡಿರುವವರಿಗೆ ಸಹಾಯ ಮಾಡುವುದಕ್ಕಾಗಿ ಕೆಲವು ಯೋಜನೆಗಳಿವೆ.
ಈಗಾಗಲೇ ಕೇಂದ್ರ ಸರ್ಕಾರವು ಜನರಿಗೆ ಆರ್ಥಿಕ ಸಹಾಯ ಮಾಡಲು ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಂತ ಮನೆ ಕಟ್ಟಬೇಕು ಎಂದುಕೊಂಡಿರುವವರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆ (Pradhan Mantri Aavas Yojane) ಜಾರಿಗೆ ಬಂದಿದೆ. ಈ ಯೋಜನೆಯಿಂದ ಮನೆ ಕಟ್ಟಲು ತಯಾರಿ ಮಾಡಿಕೊಂಡಿರುವವರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಆರ್ಥಿಕ ಸಹಾಯ ಸಿಗುತ್ತಿದೆ.
ಕೆಲವು ವರ್ಷಗಳಿಂದ ಈ ಯೋಜನೆಯು ಜನರಿಗೆ ಸಹಾಯ ಮಾಡುತ್ತಿದೆ..ಈ ಯೋಜನೆಯ ಜೊತೆಗೆ ಸ್ವಂತ ಮನೆ ಇಲ್ಲದೆ ಇರುವವರಿಗಾಗಿ ಕೇಂದ್ರ ಸರ್ಕಾರವು ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸ್ವಂತ ಮನೆ ಇಲ್ಲದೆ ಇರುವವರಿಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ಸ್ವಂತ ಮನೆ ಇಲ್ಲದೆ ಇರುವುದು ಈ ಯೋಜನೆಯ ಮೂಲಕ ಮನೆಯನ್ನು ಪಡೆಯಬಹುದು. ಇದಕ್ಕಾಗಿ ನೀವು ಅರ್ಜಿ ಸಲ್ಲಿಸಬೇಕು, 3 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವವರು ಯಾರೇ ಆದರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು, ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಮೂಲಕ ನಿಮಗೆ ಹಣಕಾಸಿನ ಸಹಾಯ ಸಿಗುತ್ತದೆ.
ಈ ಸಹಾಯ ಮೂರು ಕಂತುಗಳಲ್ಲಿ ಸಿಗುತ್ತದೆ, ಮೊದಲ ಕಂತಿನಲ್ಲಿ ₹50,000 ಸಿಗುತ್ತದೆ, ಎರಡನೇ ಕಂತಿನಲ್ಲಿ ₹1.50 ಲಕ್ಷ ರೂಪಾಯಿ ಸಹಾಯ ಸಿಗುತ್ತದೆ, ಮೂರನೇ ಕಂತಿನಲ್ಲಿ ₹50,000 ರೂಪಾಯಿ ಸಹಾಯ ಸಿಗುತ್ತದೆ. ಈ ಯೋಜೆನೆಗೆ ಅರ್ಜಿ ಹಾಕಿರುವವರಿಗೆ ಬಹಳ ಬೇಗ ಮನೆ ಲಭಿಸುತ್ತದೆ. ಪ್ರಧಾನ ಮಂತ್ರಿಗಳ ನೇತೃತ್ವದ ಕೇಂದ್ರ ಸರ್ಕಾರವು, ಈ ಯೋಜನೆಯಲ್ಲಿ ಅಡಿಯಲ್ಲಿ 1.19 ಕೋಟಿ ಮನೆಗಳ ನಿರ್ಮಾಣ ಮಾಡಿ ಮಂಜೂರು ಮಾಡಿದೆ.
ಅವುಗಳ ಪೈಕಿ 75 ಲಕ್ಷ ಮನೆಗಳನ್ನು ಅರ್ಜಿ ಹಾಕಿದ ಫಲ ಪಡೆದವರಿಗೆ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪೂಜಾರಿ ಅವರು ತಿಳಿಸಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದಿಂದ ಸ್ವಂತ ಮನೆ ಪಡೆಯಲು ಆನ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು pmaymis.gov.in ಈ ವೆಬ್ಸೈಟ್ ಗೆ ಭೇಟಿ ನೀಡಿ.
ಇದು ಪ್ರಧಾನಮಂತ್ರಿ ಆವಾಸ್ ಯೋಜನೆಯ ವೆಬ್ಸೈಟ್ ಆಗಿದೆ. ವೆಬ್ಸೈಟ್ ಓಪನ್ ಮಾಡಿದಾಗ, ಸಿಟಿಜನ್ ಆಸೆಸ್ಮೆಂಟ್ ಎನ್ನುವ ಆಕೆಯನ್ನು ಸೆಲೆಕ್ಟ್ ಮಾಡಿ, ಆಧಾರ್ ಕಾರ್ಡ್ ನಂಬರ್ ನಮೂದಿಸಿ ಚೆಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ಆನ್ಲೈನ್ ಫಾರ್ಮ್ ಓಪನ್ ಆಗುತ್ತದೆ. ಇಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿ, ಈಗ ಅರ್ಜಿಯನ್ನು ಸಬ್ಮಿಟ್ ಮಾಡಿ. ಇದಾದ ನಂತರ ಅಪ್ಲಿಕೇಶನ್ ಬರುತ್ತದೆ, ಈಗ ನೀವು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಎಂದು ಅರ್ಥ.
New scheme from central government