ಓಲಾ ಫೆಸ್ಟಿವಲ್ ಆಫರ್: ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಭಾರಿ ಡಿಸ್ಕೌಂಟ್
Ola Festival Offer : ಓಲಾ ಗ್ರಾಹಕರಿಗೆ ಮೆಗಾ ಆಫರ್ ಘೋಷಣೆ. 49,999 ರೂ. ಪ್ರಾರಂಭ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಅವಕಾಶ. ಶೋ ರೂಂಗಳಲ್ಲಿ ಜನರ ದಟ್ಟಣೆ ನಿರೀಕ್ಷೆ.

Ola Festival Offer : ಹಬ್ಬದ ಸಡಗರದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಓಲಾ ಎಲೆಕ್ಟ್ರಿಕ್, Ola Celebrates India Festival Offer ಎಂಬ ಹೆಸರಿನಲ್ಲಿ ಆಕರ್ಷಕ ಯೋಜನೆಗಳನ್ನು ಘೋಷಿಸಿದೆ.
ಈ ಆಫರ್ ಅಕ್ಟೋಬರ್ 9ರಿಂದ ದೇಶದಾದ್ಯಂತ ಪ್ರಾರಂಭವಾಗಲಿದೆ. ತರಲಾಗಿರುವ ಈ ವಿಶೇಷ ಪ್ಯಾಕೇಜ್ ಮೂಲಕ, ಕಂಪನಿ ತನ್ನ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು (Electric Scooters) ಕಡಿತ ಬೆಲೆಗೆ ನೀಡುತ್ತಿದೆ.
ಇದರಲ್ಲಿ Ola S1X (2 kWh) ಮಾದರಿಯನ್ನು, ಮೂಲ ಬೆಲೆ 81,999 ರೂ. ಇದ್ದದ್ದು ಕೇವಲ 49,999 ರೂ.ಗೆ ಲಭ್ಯವಾಗಲಿದೆ. ಹಾಗೆಯೇ Ola Roadster X (2.5 kWh) ಮಾದರಿಯೂ ಇದೇ ಬೆಲೆಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಇಷ್ಟೇ ಅಲ್ಲದೆ, ಶಕ್ತಿಶಾಲಿ ಮಾದರಿಗಳಾದ Ola S1 Pro+ (5.2 kWh) ಮತ್ತು Roadster X+ (9.1 kWh) ಗಳು, ಹಿಂದಿನಂತೆ 1.69 ಲಕ್ಷ ರೂ. ಮತ್ತು 1.89 ಲಕ್ಷ ರೂ. ಬೆಲೆಗಿಲ್ಲದೆ, ಈಗ ಹಬ್ಬದ ಆಫರ್ ಅಡಿಯಲ್ಲಿ ಕೇವಲ 99,999 ರೂ.ಗೆ ದೊರೆಯಲಿವೆ. ಈ ಹೈ-ಎಂಡ್ ಮಾದರಿಗಳಲ್ಲಿ 4,680 ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ.
ಮೇಲಿನ ದರಗಳು ಮತ್ತು ವಿವರಗಳು ಅಧಿಕೃತ ಘೋಷಣೆಯ ಪ್ರಕಾರವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಮೀಪದ ಓಲಾ ಶೋ ರೂಮ್‌ನಲ್ಲಿ ವಿಚಾರಿಸಲು ಕಂಪನಿ ಸೂಚಿಸಿದೆ. ಈ ಆಫರ್‌ನಿಂದಾಗಿ ಶೋ ರೂಂಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಖರೀದಿಗೆ ಮುಗಿಬೀಳುವ ನಿರೀಕ್ಷೆ ಇದೆ.
Ola Festival Offer, Big Discounts on Electric Scooters



