ಒಂದೇ ಒಂದು ಇಎಂಐ ತಪ್ಪಿಸಿದರೆ ಎಷ್ಟು ನಷ್ಟ ಗೊತ್ತಾ! ಯಾವತ್ತೂ ಲೋನ್ ಸಿಗಲ್ಲ
ಪರ್ಸನಲ್ ಲೋನ್ EMI ವಿಳಂಬ ಮಾಡಿದರೆ ದಂಡ, ಸಿಬಿಲ್ ಸ್ಕೋರ್ ಕುಸಿತ, ಭವಿಷ್ಯದಲ್ಲಿ ಹೊಸ ಸಾಲ ಪಡೆಯಲು ಅಡ್ಡಿ ಉಂಟಾಗಬಹುದು. ಸಮಯಕ್ಕೆ ಪಾವತಿಸುವುದು ಆರ್ಥಿಕ ಭದ್ರತೆಗೆ ಅವಶ್ಯಕ.

Loan EMI: ಅನೆಕ ಮಂದಿ ಹಣದ ಅಗತ್ಯಕ್ಕೆ ಪರ್ಸನಲ್ ಲೋನ್ (Personal Loan) ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಹಣದ ಕೊರತೆಯಿಂದ ಒಂದು EMI ಪಾವತಿ ತಪ್ಪಿಸಿದರೆ “ಮುಂದಿನ ತಿಂಗಳು ಕಟ್ಟಬಹುದು” ಎಂದು ನಿರ್ಲಕ್ಷ್ಯ ಮಾಡುತ್ತಾರೆ.
ಆದರೆ ಇದೇ ಒಂದು EMI ತಡವಾಗುವುದೇ ಭಾರೀ ನಷ್ಟಕ್ಕೆ ಕಾರಣವಾಗಬಹುದು. ಬ್ಯಾಂಕ್ ಅಥವಾ NBFC ತಕ್ಷಣವೇ ಈ ಪಾವತಿ ಮಾಹಿತಿ ಕ್ರೆಡಿಟ್ ಬ್ಯೂರೋಗೆ (CIBIL) ಕಳುಹಿಸುತ್ತವೆ. ಇದರ ಪರಿಣಾಮವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ತಕ್ಷಣ ಕುಸಿಯುತ್ತದೆ. ಕಡಿಮೆ ಸ್ಕೋರ್ (Credit Score) ಇದ್ದರೆ ಭವಿಷ್ಯದಲ್ಲಿ ಹೊಸ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವುದು ಕಷ್ಟಕರವಾಗಬಹುದು.
ಸಾಲ ಪಾವತಿಯಲ್ಲಿ ವಿಳಂಬ ಆರ್ಥಿಕ ಒತ್ತಡವನ್ನು ಮಾತ್ರವಲ್ಲ, ಮಾನಸಿಕ ತೊಂದರೆಯನ್ನೂ ಉಂಟುಮಾಡುತ್ತದೆ. EMI ಬಾಕಿ ಉಳಿದರೆ ಬ್ಯಾಂಕ್ ಅಥವಾ ರಿಕವರಿ ಏಜೆಂಟ್‌ಗಳಿಂದ ನಿರಂತರ ಕರೆಗಳು ಬಂದು ನಿಮ್ಮ ದಿನನಿತ್ಯದ ಶಾಂತಿ ಹಾಳಾಗಬಹುದು. ಕೆಲವರು ವೈದ್ಯಕೀಯ ತುರ್ತು ಖರ್ಚು ಅಥವಾ ಕ್ರೆಡಿಟ್ ಕಾರ್ಡ್ ದುರುಪಯೋಗದಿಂದ ಇಂತಹ ಪರಿಸ್ಥಿತಿಗೆ ಸಿಲುಕುತ್ತಾರೆ.
ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಮೊದಲ ಹೆಜ್ಜೆ ಎಂದರೆ ನಿಮ್ಮ ಬ್ಯಾಂಕ್ ಅಥವಾ NBFC ಜೊತೆ ತೆರೆಯಾಗಿ ಮಾತನಾಡುವುದು. ನಿಮ್ಮ ಪರಿಸ್ಥಿತಿಯನ್ನು ವಿವರಿಸಿ EMI ಪುನರ್‌ರಚನೆ (Restructure) ಕುರಿತು ಕೇಳಿ.
ಉದಾಹರಣೆಗೆ, ಸಾಲದ ಅವಧಿಯನ್ನು ಸ್ವಲ್ಪ ಹೆಚ್ಚಿಸಿ EMI ಮೊತ್ತವನ್ನು ಕಡಿಮೆ ಮಾಡಬಹುದು. ಆದರೆ ಹಳೆಯ ಸಾಲ ತೀರಿಸಲು ಹೊಸ ಸಾಲ ತೆಗೆದುಕೊಳ್ಳಬೇಡಿ, ಅದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಹಣದ ನಿರ್ವಹಣೆಯಲ್ಲಿ ಬದಲಾವಣೆ ಅಗತ್ಯ. ಬಜೆಟ್ ನಿಗದಿ ಮಾಡಿ, ಅನಾವಶ್ಯಕ ಖರ್ಚುಗಳನ್ನು ಕಡಿತಗೊಳಿಸಿ. ಹೆಚ್ಚು ಬಡ್ಡಿ ಇರುವ ಸಾಲಗಳನ್ನು ಮೊದಲು ತೀರಿಸಲು ಆದ್ಯತೆ ನೀಡಿ. ನಿಮ್ಮಿಂದ ಸಾಧ್ಯವಿಲ್ಲವಾದರೆ ಆರ್ಥಿಕ ಸಲಹೆಗಾರರ ಸಹಾಯ ಪಡೆಯಿರಿ. ಸಮಯಕ್ಕೆ EMI ಪಾವತಿಸುವ ಅಭ್ಯಾಸ ನಿಮ್ಮ ಸಿಬಿಲ್ ಸ್ಕೋರ್ ಉಳಿಸಿ ಭವಿಷ್ಯದ ಸಾಲದ ಅವಕಾಶಗಳನ್ನು ರಕ್ಷಿಸುತ್ತದೆ.
One Missed EMI Can Cost You Big



