OnePlus 15 ಸ್ಮಾರ್ಟ್ಫೋನ್ ಲಾಂಚ್! ಬೃಹತ್ ಬ್ಯಾಟರಿ, ಶಕ್ತಿಶಾಲಿ ಪ್ರೊಸೆಸರ್ ಮತ್ತು ಆಕರ್ಷಕ ಫೀಚರ್ಸ್
ಒನ್ಪ್ಲಸ್ ತನ್ನ ಹೊಸ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ OnePlus 15 ಅನ್ನು ಬಿಡುಗಡೆ ಮಾಡಿದೆ. ಬೃಹತ್ 7300mAh ಬ್ಯಾಟರಿ, ಶಕ್ತಿಶಾಲಿ Snapdragon 8 Elite Gen 5 ಪ್ರೊಸೆಸರ್ ಸೇರಿದಂತೆ ಅನೇಕ ಫೀಚರ್ಸ್ ಒಳಗೊಂಡಿದೆ.

OnePlus 15 Smartphone: ಒನ್ಪ್ಲಸ್ ತನ್ನ ಹೊಸ ಫ್ಲ್ಯಾಗ್ಶಿಪ್ ಫೋನ್ OnePlus 15 ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಆಸಕ್ತಿಕರವಾಗಿ, ಕಂಪನಿಯು OnePlus 13 ನಂತರ 14 ನ್ನು ಬಿಟ್ಟು ನೇರವಾಗಿ OnePlus 15 ಅನ್ನು ಬಿಡುಗಡೆ ಮಾಡಿದೆ. ಈ ಫೋನ್ನಲ್ಲಿ ವಿನ್ಯಾಸದಿಂದ ಹಿಡಿದು ತಂತ್ರಜ್ಞಾನವರೆಗೂ ಹಲವು ಅಂಶಗಳಲ್ಲಿ ಅಪ್ಗ್ರೇಡ್ ಮಾಡಲಾಗಿದೆ.
ಈ ಫೋನ್ನ ಪ್ರಮುಖ ಆಕರ್ಷಣೆಯಾದ ಬ್ಯಾಟರಿಯು 7,300mAh ಸಾಮರ್ಥ್ಯದ್ದಾಗಿದೆ. ಸಿಲಿಕಾನ್ ಕಾರ್ಬನ್ ತಂತ್ರಜ್ಞಾನ ಬಳಕೆಯೊಂದಿಗೆ, ಇದು 120W ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ಗೂ ಸಪೋರ್ಟ್ ನೀಡುತ್ತದೆ. ಇದರ ಜೊತೆಗೆ 10W ರಿವರ್ಸ್ ವೈರ್ಲೆಸ್ ಮತ್ತು 5W ವೈರ್ಡ್ ಚಾರ್ಜಿಂಗ್ ಆಯ್ಕೆಯೂ ಇದೆ.
ಡಿಸ್ಪ್ಲೇ ಭಾಗದಲ್ಲಿ, OnePlus 15 ನಲ್ಲಿ 6.78 ಇಂಚಿನ LTPO AMOLED ಸ್ಕ್ರೀನ್ ಇದೆ. ಇದು 165Hz ರಿಫ್ರೆಶ್ ರೇಟ್ ಹಾಗೂ 1800 ನಿಟ್ಸ್ ಬ್ರೈಟ್ನೆಸ್ ಸಪೋರ್ಟ್ ಮಾಡುತ್ತದೆ. ಡಾಲ್ಬಿ ವಿಷನ್ ಮತ್ತು 330Hz ಟಚ್ ಸ್ಯಾಂಪ್ಲಿಂಗ್ ರೇಟ್ನಿಂದ ಗೇಮಿಂಗ್ ಹಾಗೂ ವಿಡಿಯೋ ಅನುಭವವು ಇನ್ನಷ್ಟು ಮೆರುಗಾಗುತ್ತದೆ.
ಪ್ರೊಸೆಸರ್ ವಿಭಾಗದಲ್ಲಿ Snapdragon 8 Elite Gen 5 ಚಿಪ್ಸೆಟ್ ಅನ್ನು ಬಳಸಲಾಗಿದೆ. ಇದು ಆಂಡ್ರಾಯ್ಡ್ 16 ಆಧಾರಿತ ColorOS 16 ಮೇಲೆ ಕಾರ್ಯನಿರ್ವಹಿಸುತ್ತದೆ. ಫೋನ್ 16GB RAM ಮತ್ತು ಗರಿಷ್ಠ 1TB ಸ್ಟೋರೇಜ್ ಆಯ್ಕೆಯೊಂದಿಗೆ ಲಭ್ಯ. ಹೊಸ ಐಸ್ ರಿವರ್ ವೇಪರ್ ಕೂಲಿಂಗ್ ಸಿಸ್ಟಮ್ ಸಹ ಇದೆ, ಇದು ತಾಪಮಾನ ನಿಯಂತ್ರಣಕ್ಕೆ ಸಹಕಾರಿ.
ಕ್ಯಾಮೆರಾ ಸೆಟ್ಅಪ್ ವಿಷಯದಲ್ಲಿ, 50MP ಮುಖ್ಯ ಕ್ಯಾಮೆರಾ, 50MP ಪೆರಿಸ್ಕೋಪ್ ಟೆಲಿಫೋಟೋ ಹಾಗೂ 50MP ಅಲ್ಟ್ರಾ-ವೈಡ್ ಲೆನ್ಸ್ ನೀಡಲಾಗಿದೆ. ಮುಂದಿನ ಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ. ಪ್ರೊಫೆಶನಲ್ ಫೋಟೋಗ್ರಫಿ ಅನುಭವ ನೀಡುವಂತಹ ಸುಧಾರಿತ ಕ್ಯಾಮೆರಾ ತಂತ್ರಜ್ಞಾನವಿದೆ.
ಭಾರತದಲ್ಲಿ OnePlus 15 ಬೆಲೆ ಸುಮಾರು ₹60,000 ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಬ್ಲಾಕ್, ಪರ್ಪಲ್ ಮತ್ತು ಸ್ಯಾಂಡ್ ಡ್ಯೂನ್ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಇದು ಲಭ್ಯ. ಅಕ್ಟೋಬರ್ 29ರಂದು ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ.
OnePlus 15 Launched with 7300mAh Battery and Snapdragon 8 Elite Gen 5







