ಡಿಸೆಂಬರ್ 31 ಕೊನೆಯ ಗಡುವು! ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಅಲರ್ಟ್
ಸಿಬಿಡಿಟಿ ಡಿಸೆಂಬರ್ 31, 2025ರೊಳಗೆ ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ ಎಂದು ಘೋಷಿಸಿದೆ. ಲಿಂಕ್ ಮಾಡದಿದ್ದರೆ ಜನವರಿ 1, 2026ರಿಂದ ಪ್ಯಾನ್ ಇನಾಕ್ಟಿವ್ ಆಗಲಿದೆ, ಹಣಕಾಸು ವ್ಯವಹಾರಗಳಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.

ಹಣಕಾಸು ವ್ಯವಹಾರಗಳಲ್ಲಿ ಪ್ರಮುಖವಾದ ಪ್ಯಾನ್ ಕಾರ್ಡ್ ಕುರಿತು ಕೇಂದ್ರ ಆದಾಯ ತೆರಿಗೆ ಮಂಡಳಿ (The Central Board of Direct Taxes) ಹೊಸ ಗಡುವು ಪ್ರಕಟಿಸಿದೆ. 2025ರ ಡಿಸೆಂಬರ್ 31ರೊಳಗೆ PAN-Aadhaar ಲಿಂಕ್ ಕಡ್ಡಾಯ ಎಂದು ತಿಳಿಸಿದೆ.
ಈ ಗಡುವಿನ ನಂತರ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು 2026ರ ಜನವರಿ 1ರಿಂದ ನಿಷ್ಕ್ರಿಯ (Inactive) ಆಗಲಿವೆ. ಇದರ ಪರಿಣಾಮವಾಗಿ ತೆರಿಗೆ ಸಲ್ಲಿಕೆ, ರಿಫಂಡ್ ಪಡೆಯುವುದು, ಅಥವಾ ಹೂಡಿಕೆಗಳ ಪ್ರಕ್ರಿಯೆ ತಡೆಯಲ್ಪಡಲಿದೆ.
ಪ್ಯಾನ್ ಅಂದರೆ “Permanent Account Number”, ಇದು ಹತ್ತು ಅಕ್ಷರ ಮತ್ತು ಸಂಖ್ಯೆಗಳ ಸಂಯೋಜನೆಯುಳ್ಳ ಸಂಖ್ಯೆ ಆಗಿದ್ದು, ಆದಾಯ ತೆರಿಗೆ ಇಲಾಖೆ ನೀಡುತ್ತದೆ. ತೆರಿಗೆ ಪಾವತಿ, ಟಿಡಿಎಸ್, ಟಿಸಿಎಸ್ ಕ್ರೆಡಿಟ್‌ಗಳು ಮತ್ತು ರಿಟರ್ನ್‌ಗಳನ್ನು ಗುರುತಿಸಲು ಇದು ಅಗತ್ಯ. ಸರ್ಕಾರ ತೆರಿಗೆ ಮತ್ತು ದುರುಪಯೋಗ ತಡೆಯಲು ಪ್ಯಾನ್-ಆಧಾರ್ ಲಿಂಕ್ ಕಡ್ಡಾಯಗೊಳಿಸಿದೆ.
ಲಿಂಕ್ ಮಾಡಲು ವಿಫಲರಾದವರಿಗೆ ರೂ.1000 ದಂಡ ವಿಧಿಸಲಾಗುವುದು. ಪ್ಯಾನ್ ಲಿಂಕ್ ಮಾಡದಿದ್ದರೆ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ, ಬಾಕಿ ರಿಫಂಡ್‌ಗಳು ನಿಲ್ಲುತ್ತವೆ ಹಾಗೂ ಹೆಚ್ಚು ತೆರಿಗೆ ಕಡಿತಗೊಳ್ಳುವ ಸಾಧ್ಯತೆ ಇದೆ.
ಲಿಂಕ್ ಪ್ರಕ್ರಿಯೆ ಸರಳವಾಗಿದೆ. ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ www.incometax.gov.in ಗೆ ತೆರಳಿ “Link Aadhaar” ಆಯ್ಕೆ ಮಾಡಿ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳು ನಮೂದಿಸಿ “Validate” ಬಟನ್ ಒತ್ತಿದರೆ ಸಾಕು. ಡಿಸೆಂಬರ್ 31, 2025 ನಂತರ ಲಿಂಕ್ ಮಾಡಿದಲ್ಲಿ ರೂ.1000 ದಂಡವನ್ನು “e-Pay Tax” ಮೂಲಕ ಪಾವತಿಸಬೇಕಾಗುತ್ತದೆ.
ಲಿಂಕ್ ಸ್ಥಿತಿ ತಿಳಿಯಲು ಅದೇ ವೆಬ್‌ಸೈಟ್‌ನಲ್ಲಿ “Link Aadhaar Status” ವಿಭಾಗಕ್ಕೆ ತೆರಳಿ ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಬಹುದು. ಲಿಂಕ್ ಆಗಿದ್ದರೆ ಅದರ ದೃಢೀಕರಣ ಸಂದೇಶ ತೋರಿಸಲಾಗುತ್ತದೆ, ಇಲ್ಲದಿದ್ದರೆ “ಲಿಂಕ್ ಆಗಿಲ್ಲ” ಎಂದು ಪ್ರದರ್ಶಿಸುತ್ತದೆ.
ಲಿಂಕ್ ಮಾಡದಿದ್ದರೂ ಬ್ಯಾಂಕ್ ಖಾತೆಗಳು ಅಥವಾ ಹಳೆಯ ಹೂಡಿಕೆಗಳು ಸುರಕ್ಷಿತವಾಗಿರುತ್ತವೆ. ಆದರೆ ಹೊಸ ಹೂಡಿಕೆಗಳು, SIP ಪ್ರಾರಂಭ/ನಿಲ್ಲಿಸುವಿಕೆ, KYC ಅಪ್‌ಡೇಟ್, ಷೇರು ಖರೀದಿ ಅಥವಾ ಮಾರಾಟ ಎಲ್ಲವೂ ನಿಲ್ಲುತ್ತವೆ. ಪ್ಯಾನ್ ಮರುಸಕ್ರಿಯವಾಗುವವರೆಗೂ ಈ ಚಟುವಟಿಕೆಗಳು ಸಾಧ್ಯವಿಲ್ಲ.
ಆರ್ಥಿಕ ಸಚಿವಾಲಯದ ನೋಟಿಫಿಕೇಶನ್ ಪ್ರಕಾರ, ಅಕ್ಟೋಬರ್ 1, 2024ರ ಒಳಗೆ ಆಧಾರ್ ಎನ್‌ರೋಲ್‌ಮೆಂಟ್ ಐಡಿ ಮೂಲಕ ಪ್ಯಾನ್ ಪಡೆದವರು 2025ರ ಡಿಸೆಂಬರ್ 31ರೊಳಗೆ ಲಿಂಕ್ ಮಾಡಬೇಕು.
ಜುಲೈ 1, 2025 ನಂತರ ಹೊಸ ಪ್ಯಾನ್ ಪಡೆದವರಿಗೆ ಲಿಂಕ್ ಸ್ವಯಂಚಾಲಿತವಾಗಿರುತ್ತದೆ. ಸರ್ಕಾರ ಹಿಂದೆಯೂ ಹಲವು ಬಾರಿ ಗಡುವು ವಿಸ್ತರಿಸಿದರೂ, ಈ ಬಾರಿ ಮತ್ತೊಮ್ಮೆ ವಿಸ್ತರಿಸುವ ಸಾಧ್ಯತೆ ಸ್ಪಷ್ಟವಾಗಿಲ್ಲ. ಆದ್ದರಿಂದ, ಪ್ಯಾನ್ ಇನಾಕ್ಟಿವ್ ಆಗದಂತೆ ತಕ್ಷಣ ಲಿಂಕ್ ಮಾಡುವುದು ಉತ್ತಮ.
PAN-Aadhaar Linking Deadline – Dec 31, 2025
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story



