ಗಂಡ ಹೆಂಡತಿ ಇಬ್ಬರಿಗೂ ಪೆನ್ಶನ್ ಸಿಗುವ ಹೊಸ ಯೋಜನೆ ತಂದ ಕೇಂದ್ರ ಸರ್ಕಾರ! ಕಡಿಮೆ ಹೂಡಿಕೆಯಲ್ಲಿ ಕೈತುಂಬಾ ಪಿಂಚಣಿ

Pension Scheme : ದೇಶದ ಜನರಿಗಾಗಿಯೇ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರಿಗೆ, ಮಹಿಳೆಯರಿಗೆ, ಹಿರಿಯರಿಗೆ ಉಳಿತಾಯ ಮಾಡಿ, ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.

Bengaluru, Karnataka, India
Edited By: Satish Raj Goravigere

Pension Scheme : ಪ್ರತಿಯೊಬ್ಬರು ಹಣ ಸಂಪಾದನೆ ಮಾಡುವುದು ಭವಿಷ್ಯ ಚೆನ್ನಾಗಿರಬೇಕು ಎನ್ನುವ ಉದ್ದೇಶದಿಂದ. ಇಂದು ಸಂಪಾದನೆ ಮಾಡಿದ ಹಣದಲ್ಲಿ ಸ್ವಲ್ಪ ಮೊತ್ತವನ್ನು ಉಳಿತಾಯ (Money Savings) ಮಾಡುತ್ತಾ ಬಂದರೆ ಮುಂದೆ ನಿವೃತ್ತಿ ಹೊಂದಿದ ಸಮಯದಲ್ಲಿ ಯಾವುದೇ ಚಿಂತೆ ಇಲ್ಲದೆ, ಯಾರ ಮೇಲೂ ಅವಲಂಬಿತರಾಗದೆ ನೆಮ್ಮದಿಯ ಜೀವನ ನಡೆಸಬಹುದು. ಇಂತಹ ಕೆಲವು ಯೋಜನೆಗಳಿಗೆ ಜನರು ತಮ್ಮ ಬದುಕನ್ನು ಕಷ್ಟವಿಲ್ಲದೆ ನಡೆಸಲು ಸರ್ಕಾರವು ಸಹಾಯ ಮಾಡುತ್ತದೆ.

ದೇಶದ ಜನರಿಗಾಗಿಯೇ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು (Schemes) ಜಾರಿಗೆ ತಂದಿದೆ. ರೈತರಿಗೆ, ಮಹಿಳೆಯರಿಗೆ, ಹಿರಿಯರಿಗೆ ಉಳಿತಾಯ ಮಾಡಿ, ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.

Pension Guarantee of 5000 per month in this scheme of Post Office

ಸ್ಟೇಟ್ ಬ್ಯಾಂಕ್ ನಿಂದ ಒಂದೇ ದಿನ 3 ಪ್ರಮುಖ ನಿರ್ಧಾರಗಳು, ಇವರಿಗೆ ಗುಡ್ ನ್ಯೂಸ್, ಕೆಲವರಿಗೆ ಬ್ಯಾಡ್ ನ್ಯೂಸ್!

ಅದರಲ್ಲೂ ಈಗ ವಿಶೇಷವಾಗಿ ದಂಪತಿಗಳಿಗೆ ವಿಶೇಷವಾದ ಯೋಜನೆಯನ್ನು ಜಾರಿಗೆ ತಂದಿದೆ. ಇದು ನಿವೃತ್ತಿ ನಂತರ ಬರುವಂಥ ಪೆನ್ಶನ್ ಯೋಜನೆ ಆಗಿದ್ದು, ಈ ಯೋಜನೆಯ ಮೂಲಕ ದಂಪತಿಗಳಿಗೆ ಹೆಚ್ಚು ಪೆನ್ಶನ್ ಹಣ ದೊರಕುತ್ತದೆ..

ಒಂದು ವೇಳೆ ನೀವು ಕೇಂದ್ರ ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡಿರುವ ಅಥವಾ ಮಾಡುತ್ತಿರುವವರಾದರೆ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಒಂದು ವೇಳೆ ನೀವು ಈಗಿನಿಂದಲೇ ನಿಮ್ಮ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಬೇಕು, ವಯಸ್ಸಾದ ಕಾಲದಲ್ಲಿ ಉತ್ತಮವಾದ ಬದುಕು ಸಾಗಿಸಬೇಕು ಎಂದುಕೊಂಡಿದ್ದರೆ, ಇದು ನಿಮಗೆ ಹೇಳಿ ಮಾಡಿಸಿದ ಯೋಜನೆ ಆಗಿದೆ.

ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್ ಯೋಜನೆ, ಕಡಿಮೆ ಬಡ್ಡಿಯಲ್ಲಿ ಸಾಲ, ಸರ್ಕಾರದ ಯೋಜನೆ! ಪ್ರಮುಖ ಪ್ರಸ್ತಾವನೆಗೆ ಸಿದ್ಧತೆ

ಈ ಯೋಜನೆಯಲ್ಲಿ ನೀವು ಕಡಿಮೆ ಹಣ ಹೂಡಿಕೆ (Money Investment) ಮಾಡಿ, ನಿವೃತ್ತಿ ಹೊಂದಿದ ನಂತರ ಹೆಚ್ಚು ಮೊತ್ತದ ಪೆನ್ಶನ್ ಪಡೆಯಬಹುದು. ಇಂಥದ್ದೊಂದು ಲಾಭದಾಯಕ ಯೋಜನೆಯ ಲಾಭವನ್ನು ದೇಶದ ಜನತೆ ಉಪಯೋಗಿಸಿಕೊಳ್ಳಬೇಕು.

Pension Schemeದೇಶದ ಜನರು ಯಾವುದೇ ಸಮಸ್ಯೆ ಇಲ್ಲದೆ, ಆರ್ಥಿಕವಾಗಿ ಭದ್ರವಾಗಿರಬೇಕು ಎನ್ನುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ದಂಪತಿಗಳಿಗಾಗಿ (Husband and Wife) ಜಾರಿಗೆ ತಂದಿದೆ.

ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವು ದಂಪತಿಗಳಿಗಾಗಿ ತಂದಿರುವ ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ. ಈ ಯೋಜನೆಯು ಗಂಡ ಹೆಂಡತಿ ಇಬ್ಬರಿಗೂ ಪೆನ್ಶನ್ (Pension Scheme) ಕೊಡುವಂಥ ವಿಶೇಷವಾದ ಯೋಜನೆ ಆಗಿದೆ.

ಕಾರು ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಸಿಂಪಲ್ ಟಿಪ್ಸ್ ನಿಂದ ಸಿಕ್ಕಾಪಟ್ಟೆ ಹಣ ಉಳಿತಾಯ ಮಾಡಬಹುದು

ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಕೇಂದ್ರ ಸರ್ಕಾರವು ವಯೋಮಿತಿಯನ್ನು ನಿಗದಿ ಮಾಡಿದೆ, 18 ರಿಂದ 40 ವರ್ಷದ ಒಳಗೆ ಇರುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಯೌವನದ ಸಮಯದಿಂದ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಬಂದರೆ, ದಂಪತಿಗಳು ನಿವೃತ್ತಿ ಹೊಂದುವ ಸಮಯದಲ್ಲಿ ಕೈತುಂಬಾ ಪೆನ್ಶನ್ ಪಡೆಯಬಹುದು.

ಈ ಯೋಜನೆಯ ಪ್ರಯೋಜನ ಎಲ್ಲರಿಗೂ ಸಿಗುವುದಿಲ್ಲ, ರಾಷ್ಟ್ರೀಯ ಪಿಂಚಣಿ (NPS), ನೌಕರರ ರಾಜ್ಯ ವಿಮಾ ನಿಗಮ (ESI) ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಈ ಯೋಜನೆಗಳ ಸೌಲಭ್ಯ ಪಡೆಯುತ್ತಿರುವವರು ಪ್ರಧಾನಿ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಗೆ ಅರ್ಹತೆ ಪಡೆಯುವುದಿಲ್ಲ..

ಸ್ಟೇಟ್ ಬ್ಯಾಂಕ್ ನಿಯಮದಲ್ಲಿ ಧಿಡೀರ್ ಬದಲಾವಣೆ, ಸ್ಟೇಟ್ ಬ್ಯಾಂಕ್ ನಿರ್ಧಾರಕ್ಕೆ ಕೋಟ್ಯಾಂತರ ಜನರಿಗೆ ನಿರಾಸೆ!

ಈ ಯೋಜನೆಯಲ್ಲಿ ದಂಪತಿಗಳು ಹೆಚ್ಚು ಹೂಡಿಕೆ ಮಾಡುವ ಅವಶ್ಯಕತೆ ಖಂಡಿತ ಇಲ್ಲ, ದಂಪತಿಗಳು ಸೇರಿ 200 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ, ನಿಮಗೆ 60 ವರ್ಷಗಳಾದ ನಂತರ ಪ್ರತಿ ತಿಂಗಳು ₹3000 ಸಾವಿರ ರೂಪಾಯಿ ಪೆನ್ಶನ್ ಪಡೆಯುತ್ತೀರಿ, ಇಬ್ಬರು ಕೂಡ ವರ್ಷಕ್ಕೆ ₹72,000 ಪೆನ್ಶನ್ ಪಡೆಯುತ್ತೀರಿ. ಅಷ್ಟೇ ಅಲ್ಲದೆ, ಈ ಹಣಕ್ಕೆ ನಿಮಗೆ ತೆರಿಗೆ ಅನ್ವಯಿಸುವುದಿಲ್ಲ. ಹಾಗಾಗಿ ಇದು ದಂಪತಿಗಳಿಗೆ ಅತ್ಯುತ್ತಮವಾದ ಯೋಜನೆ ಆಗಿದೆ..

Pension Scheme For Husband and Wife