ಯಾವುದೇ ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಅಪ್ಲೈ ಮಾಡೋಕು ಮುಂಚೆ ಈ ಟಿಪ್ಸ್ ನೆನಪಿರಲಿ

Personal Loan: ಪರ್ಸನಲ್ ಲೋನ್ ಪಡೆಯುವ ಮೊದಲು ಬಡ್ಡಿ, ಪ್ರಾಸೆಸಿಂಗ್ ಫೀ, ಅರ್ಥಿಕ ಭಾರ, ರಿಪೇಮೆಂಟ್ ಸೌಲಭ್ಯ ಸೇರಿದಂತೆ ಅನೇಕ ಅಂಶಗಳನ್ನು ಪರಿಶೀಲಿಸಿದರೆ ನಂತರದ ಆರ್ಥಿಕ ಒತ್ತಡವನ್ನು ತಪ್ಪಿಸಿಕೊಳ್ಳಬಹುದು.

Personal Loan: ಪರ್ಸನಲ್ ಲೋನ್ ಬೇಕೆಂದರೆ ತಕ್ಷಣ ಅನುಮೋದನೆ ಸಿಗುತ್ತದೆಯೆಂದು ಅನೇಕರು ಭಾವಿಸುತ್ತಾರೆ. ಆದರೆ ಸಾಲ ಪಡೆದ ನಂತರ ಅಚ್ಚರಿ ಶುಲ್ಕಗಳು, ಹೆಚ್ಚುವರಿ ಬಡ್ಡಿ ಮತ್ತು ರಿಪೇಮೆಂಟ್ ಭಾರ ಎದುರಿಸಲು ಆಗದ ಪರಿಸ್ಥಿತಿಗಳು ಹಲವರಿಗೇ ಬರುತ್ತವೆ. ಅದಕ್ಕಾಗಿ ಸಾಲಕ್ಕೆ ಅರ್ಜಿ ಹಾಕುವ ಮೊದಲು ಕೆಲವು ಮುಖ್ಯ ವಿಚಾರಗಳನ್ನು ಗಮನಿಸಬೇಕು.

ಮೊದಲಿಗೆ ಬಡ್ಡಿ ಮತ್ತು ಒಟ್ಟು ಸಾಲದ ಖರ್ಚಿನ ಲೆಕ್ಕ ಅತ್ಯಂತ ಪ್ರಮುಖ. ಕೇವಲ ಬಡ್ಡಿದರ ಕಡಿಮೆ ಎನ್ನುವುದರ ಆಧಾರದ ಮೇಲೆ ಸಾಲ ತೆಗೆದುಕೊಳ್ಳುವುದರಿಂದ ವಿಶ್ವಾಸಾರ್ಹ ನಿರ್ಧಾರ ಆಗುವುದಿಲ್ಲ.

ಪ್ರಾಸೆಸಿಂಗ್ ಫೀ, ಪ್ರೀಪೇಮೆಂಟ್ ಪೆನಾಲ್ಟಿ, ಫೋರ್‌ಕ್ಲೋಶರ್ ಚಾರ್ಜ್ ಇವೆಲ್ಲ ಸೇರಿ ಒಟ್ಟು ವೆಚ್ಚ ಎಷ್ಟಾಗುತ್ತದೆ ಎಂಬುದನ್ನು ಗ್ರಾಹಕರು ಗಣನೆ ಮಾಡಬೇಕು. ಕೆಲ ಬ್ಯಾಂಕುಗಳು ಕಡಿಮೆ ಬಡ್ಡಿ ನೀಡಿದರೂ ಹಿಡನ್ ಫೀಗಳಿಂದ ಸಾಲ ದುಬಾರಿ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಾಲ ಪಡೆದ ವ್ಯಕ್ತಿ ಅಕಸ್ಮಾತ್ ಸಾವನ್ನಪ್ಪಿದಾಗ ಬ್ಯಾಂಕ್ ಏನು ಮಾಡುತ್ತದೆ ಗೊತ್ತಾ?

ಇನ್ನೊಂದು ಮಹತ್ವದ ಅಂಶ ಹಿಡನ್ ಚಾರ್ಜ್‌ಗಳು. ಅನೇಕ ಸಂಸ್ಥೆಗಳು 0.5% ರಿಂದ 5% ವರೆಗೆ ಪ್ರಾಸೆಸಿಂಗ್ ಫೀ ವಸೂಲಿಸುತ್ತವೆ. ಇದಕ್ಕೆ ಜಿಎಸ್‌ಟಿ ಮತ್ತೊಂದು ಹೆಚ್ಚುವರಿ. EMI ಮಿಸ್ ಆದರೆ ಲೇಟ್ ಪೆನಾಲ್ಟಿ, ಬೌನ್ಸ್ ಶುಲ್ಕ, ಮತ್ತು ಕ್ರೆಡಿಟ್ ಸ್ಕೋರ್ ಹಾನಿ ತಪ್ಪದೇ ಬರುತ್ತವೆ. ಕೆಲವು ಸಂಸ್ಥೆಗಳು ಸಾಲವನ್ನು ಮುಂಚಿತವಾಗಿ ಮುಚ್ಚಿದರೆ 2%–5% ಪೆನಾಲ್ಟಿ ವಿಧಿಸುತ್ತವೆ.

ಸಾಲದ ಅನುಮೋದನೆಗೆ ಕ್ರೆಡಿಟ್ ಸ್ಕೋರ್ ಮಹತ್ತರ ಪಾತ್ರ ವಹಿಸುತ್ತದೆ. 750 ಕ್ಕಿಂತ ಹೆಚ್ಚು ಸ್ಕೋರ್ ಇದ್ದರೆ ಬಡ್ಡಿ ಕಡಿಮೆ ಮತ್ತು ಅನುಮೋದನೆ ವೇಗವಾಗಿ ಸಿಗುತ್ತದೆ. ಜೊತೆಗೆ ಡೆಟ್-ಟು-ಇನ್ಕಮ್ ರೇಶಿಯೋ 35% ಕ್ಕಿಂತ ಕಡಿಮೆಯಾದರೆ ಬ್ಯಾಂಕ್‌ಗಳಿಗೆ ಗ್ರಾಹಕನ ಮೇಲೆ ವಿಶ್ವಾಸ ಹೆಚ್ಚಾಗುತ್ತದೆ. ಸ್ಥಿರ ಉದ್ಯೋಗ ಇರುವವರಿಗೆ ಇದರಿಂದ ಹೆಚ್ಚುವರಿ ಲಾಭ.

ಇದೆ ಸಮಯದಲ್ಲಿ, ಸಾಲದ ಮೊತ್ತ ಮತ್ತು ಅವಧಿ ಕೂಡ ಆರ್ಥಿಕ ನಿರ್ಧಾರವನ್ನು ಬಲಪಡಿಸುತ್ತವೆ. ದೀರ್ಘಾವಧಿಯನ್ನು ಆಯ್ಕೆ ಮಾಡಿದರೆ EMI ಕಡಿಮೆ, ಆದರೆ ಒಟ್ಟು ಬಡ್ಡಿ ಹೆಚ್ಚಾಗುತ್ತದೆ. ಕಡಿಮೆ ಅವಧಿಯಲ್ಲಿ EMI ಜಾಸ್ತಿ ಆದರೆ ಒಟ್ಟು ವೆಚ್ಚ ಕಡಿಮೆ. ಹೆಚ್ಚಿನ ಸಾಲದ ಮೊತ್ತ ಕೇಳಿದರೆ ಕೆಲವು ಸಂದರ್ಭಗಳಲ್ಲಿ ಬಡ್ಡಿದರ ಕೂಡ ಬದಲಾಗಬಹುದು.

ಇದನ್ನೂ ಓದಿ: ಹೊಸ ಕಾರ್ ಖರೀದಿ ಮಾಡ್ತಾ ಇದ್ದೀರಾ? ಈ ಬ್ಯಾಂಕ್‌ಗಳಲ್ಲಿ ಕಮ್ಮಿ ಬಡ್ಡಿಗೆ ಲೋನ್ ಸಿಗುತ್ತೆ ನೋಡಿ

ಕೊನೆಯದಾಗಿ, ಪ್ರೀಪೇಮೆಂಟ್ ಸೌಕರ್ಯ ಇರುವ ಬ್ಯಾಂಕ್ ಅಥವಾ NBFC ಆಯ್ಕೆ ಮಾಡುವುದು ಉತ್ತಮ. ಕೆಲವು ಸಂಸ್ಥೆಗಳು ಭಾಗಶಃ ಪಾವತಿ ಅಥವಾ ಪೂರ್ಣ ಮೊತ್ತ ಮುಂಚಿತವಾಗಿ ಮುಚ್ಚಲು ಅವಕಾಶ ನೀಡುತ್ತವೆ. ಆದರೆ ಪೆನಾಲ್ಟಿ ಇರುವುದೋ ಇಲ್ಲವೋ ತಿಳಿದುಕೊಳ್ಳುವುದು ಅಗತ್ಯ. ಅದೇ ಬ್ಯಾಂಕ್‌ನಲ್ಲಿ ಸೇವಿಂಗ್ಸ್ ಅಥವಾ ಸ್ಯಾಲರಿ ಖಾತೆ ಇದ್ದರೆ ಉತ್ತಮ ಕಸ್ಟಮರ್ ಬೆನೆಫಿಟ್ಸ್ ಸಿಗುವ ಸಾಧ್ಯತೆ ಹೆಚ್ಚಿದೆ.

Personal Loan Tips Before You Apply

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories