ಪೆಟ್ರೋಲ್ vs ಡೀಸೆಲ್ ಕಾರು: ಎರಡರಲ್ಲಿ ಯಾವುದು ಹೆಚ್ಚು ಮೈಲೇಜ್ ಕೊಡುತ್ತದೆ ಗೊತ್ತಾ?
Petrol Vs Diesel Car : ಹೊಸ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಪೆಟ್ರೋಲ್ ಅಥವಾ ಡೀಸೆಲ್ ಯಾವುದು ಉತ್ತಮ ಎನ್ನುವ ಗೊಂದಲ ಎಲ್ಲರಿಗೂ ಸಾಮಾನ್ಯ. ಮೈಲೇಜ್, ನಿರ್ವಹಣೆ ಹಾಗೂ ವೆಚ್ಚದ ವ್ಯತ್ಯಾಸ ಇಲ್ಲಿದೆ.

Petrol Vs Diesel Car : ಹೊಸ ಕಾರು ಖರೀದಿಸಲು ಮುಂದಾದಾಗ ಬಹುತೇಕ ಜನರು ಎದುರಿಸುವ ದೊಡ್ಡ ಪ್ರಶ್ನೆ ಎಂದರೆ, ಪೆಟ್ರೋಲ್ ಕಾರು ತಗೋಳ್ಳಬೇಕಾ, ಡೀಸೆಲ್ ಕಾರು ತಗೋಳ್ಳಬೇಕಾ?
ಇತ್ತೀಚಿನ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಹೆಚ್ಚಿನವರು ಮೈಲೇಜ್ಗೇ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆದರೆ ಎರಡರಲ್ಲಿಯೂ ಕೆಲವು ಪ್ರಮುಖ ವ್ಯತ್ಯಾಸಗಳಿವೆ.
ಡೀಸೆಲ್ ಕಾರುಗಳು ಪೆಟ್ರೋಲ್ ಕಾರುಗಳಿಗಿಂತ ಹೆಚ್ಚು ಮೈಲೇಜ್ ನೀಡುತ್ತವೆ ಎಂಬುದು ಅಸಲಿ ಸತ್ಯ. ಒಂದು ಡೀಸೆಲ್ ಕಾರು ಸರಾಸರಿ 23 ಕಿಮೀ/ಲೀಟರ್ ಮೈಲೇಜ್ ನೀಡಬಲ್ಲದು. ಆದರೆ ಪೆಟ್ರೋಲ್ ಕಾರುಗಳು ಸಾಮಾನ್ಯವಾಗಿ 17 ಕಿಮೀ/ಲೀಟರ್ ಮಟ್ಟಕ್ಕೆ ಮಾತ್ರ ನೀಡುತ್ತವೆ. ಇದರ ಪ್ರಮುಖ ಕಾರಣ ಇಂಧನ ಶಕ್ತಿ ಸಾಂದ್ರತೆಯಲ್ಲಿದೆ. ಡೀಸೆಲ್ ಇಂಧನವು ಪೆಟ್ರೋಲ್ಗಿಂತ ಹೆಚ್ಚು ಶಕ್ತಿಯುತವಾಗಿದ್ದು, ಲೀಟರ್ಗೆ ಹೆಚ್ಚು ಎನರ್ಜಿ ನೀಡುತ್ತದೆ.
ಅಷ್ಟೇ ಅಲ್ಲ, ಡೀಸೆಲ್ ಎಂಜಿನ್ ಕಡಿಮೆ RPMನಲ್ಲಿ ಹೆಚ್ಚು ಟಾರ್ಕ್ (ಪುಲ್ಲಿಂಗ್ ಶಕ್ತಿ) ನೀಡುತ್ತದೆ. ಅಂದರೆ ಅದು ತೂಕದ ವೇಗದಲ್ಲೇ ಕಾರು ಓಡಿಸಲು ಸಾಧ್ಯವಾಗುತ್ತದೆ. ಇದರಿಂದ ಇಂಧನ ಉಳಿತಾಯವಾಗುತ್ತದೆ ಮತ್ತು ಮೈಲೇಜ್ ಹೆಚ್ಚುತ್ತದೆ.
ಆದರೆ ಡೀಸೆಲ್ ಕಾರುಗಳ ಖರೀದಿ ದರ ಪೆಟ್ರೋಲ್ ಮಾದರಿಗಿಂತ ಹೆಚ್ಚು. ಉದಾಹರಣೆಗೆ, ಟಾಟಾ ನೆಕ್ಸಾನ್ ಡೀಸೆಲ್ ಮಾದರಿಯ ಬೆಲೆ ಸುಮಾರು ₹9 ಲಕ್ಷ (ಎಕ್ಸ್-ಶೋರೂಮ್) ಆಗಿದ್ದರೆ, ಪೆಟ್ರೋಲ್ ಮಾದರಿ ₹7.31 ಲಕ್ಷದಿಂದ ಆರಂಭವಾಗುತ್ತದೆ. ಜೊತೆಗೆ ಡೀಸೆಲ್ ವಾಹನಗಳ ನಿರ್ವಹಣೆ ವೆಚ್ಚವೂ ಸ್ವಲ್ಪ ಹೆಚ್ಚು.
ಪೆಟ್ರೋಲ್ ಕಾರುಗಳು ಕಡಿಮೆ ನಿರ್ವಹಣಾ ವೆಚ್ಚದ ಕಾರಣದಿಂದ ನಗರ ಪ್ರಯಾಣಕ್ಕೆ ಸೂಕ್ತ. ಡೀಸೆಲ್ ಕಾರುಗಳು ಹೆಚ್ಚು ದೂರ ಪ್ರಯಾಣಿಸುವವರಿಗೆ ಆರ್ಥಿಕವಾಗಿ ಲಾಭದಾಯಕ. ಹೀಗಾಗಿ ನಿಮ್ಮ ಪ್ರಯಾಣದ ಅವಶ್ಯಕತೆ ಹಾಗೂ ಬಳಕೆ ಆಧರಿಸಿ ಆಯ್ಕೆ ಮಾಡುವುದು ಉತ್ತಮ.
Petrol vs Diesel Car, Which gives better mileage







