ಫೋನ್‌ಪೇ ಧಮಾಕ ಆಫರ್: ₹2000 ಕ್ಕೆ ಬಂಗಾರ ಖರೀದಿಸಿದರೆ ಪಕ್ಕ ಕ್ಯಾಶ್‌ಬ್ಯಾಕ್

ಧನತೇರಸ್ ಹಬ್ಬದ ಸಂಭ್ರಮದಲ್ಲಿ ಫೋನ್‌ಪೇ ಬಳಕೆದಾರರಿಗೆ ದೊಡ್ಡ ಉಡುಗೊರೆ! ₹2000 ಮೌಲ್ಯದ 24K ಡಿಜಿಟಲ್ ಗೋಲ್ಡ್ ಖರೀದಿಸಿದರೆ 2% ಕ್ಯಾಶ್‌ಬ್ಯಾಕ್ ಸಿಗಲಿದೆ. ಈ ಆಫರ್ ಅಕ್ಟೋಬರ್ 18ಕ್ಕೆ ಮಾತ್ರ ಮಾನ್ಯ.

PhonePe Digital Gold: ಸ್ಮಾರ್ಟ್‌ಫೋನ್ ಬಳಕೆದಾರರು ಬಹುತೇಕರು ಫೋನ್‌ಪೇ ಉಪಯೋಗಿಸುತ್ತಾರೆ. ತರಕಾರಿ ಖರೀದಿಯಿಂದ ದೊಡ್ಡ ಶಾಪಿಂಗ್‌ಗಳವರೆಗೆ ಎಲ್ಲೆಡೆ ಪೇಮೆಂಟ್‌ಗಾಗಿ ಫೋನ್‌ಪೇ ಬಳಸುವುದು ಈಗ ರೂಢಿಯಾಗಿದೆ. ಈ ಹಿನ್ನೆಲೆಯಲ್ಲಿ ಧನತೇರಸ್ ಹಬ್ಬದ ವೇಳೆ ಗ್ರಾಹಕರಿಗೆ ಆಕರ್ಷಕ ಉಡುಗೊರೆಯಾಗಿ ಫೋನ್‌ಪೇ ವಿಶೇಷ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ.

ಆಫರ್ ವಿವರಗಳು: ₹2000 ಅಥವಾ ಹೆಚ್ಚು ಮೌಲ್ಯದ 24K ಡಿಜಿಟಲ್ ಬಂಗಾರ ಖರೀದಿಸಿದ ಗ್ರಾಹಕರಿಗೆ 2% ಕ್ಯಾಶ್‌ಬ್ಯಾಕ್ ದೊರೆಯಲಿದೆ. ಗರಿಷ್ಠವಾಗಿ ₹2000 ವರೆಗೆ ಸಿಗುವ ಈ ಆಫರ್ ಕೇವಲ ಅಕ್ಟೋಬರ್ 18ರಂದು ಮಾತ್ರ ಲಭ್ಯವಿದೆ. ಪ್ರತಿ ಗ್ರಾಹಕರಿಗೂ ಇದು ಒಂದೇ ವ್ಯವಹಾರಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಫೋನ್‌ಪೇ ಸ್ಪಷ್ಟಪಡಿಸಿದೆ.

ಫೋನ್‌ಪೇ ಬಳಕೆದಾರರು 99.99% ಶುದ್ಧತೆಯ ಡಿಜಿಟಲ್ ಗೋಲ್ಡ್ ಅನ್ನು MMTC-PAMP, SafeGold, Caratlane ಮುಂತಾದ ವಿಶ್ವಾಸಾರ್ಹ ಕಂಪನಿಗಳಿಂದ ಖರೀದಿಸಬಹುದು. ಕಂಪನಿಯ ಮಾಹಿತಿ ಪ್ರಕಾರ, ಈಗಾಗಲೇ ಭಾರತದೆಲ್ಲೆಡೆ 1.6 ಕೋಟಿಗೂ ಹೆಚ್ಚು ಗ್ರಾಹಕರು ಫೋನ್‌ಪೇ ಮೂಲಕ ಡಿಜಿಟಲ್ ಗೋಲ್ಡ್ ಖರೀದಿಸಿದ್ದಾರೆ.

ಹೂಡಿಕೆ ಮಾಡಲು ಮತ್ತೊಂದು ಮಾರ್ಗ: ಒಂದೇ ಸಾರಿ ಬಂಗಾರ ಖರೀದಿಸುವ ಬದಲು ಗ್ರಾಹಕರು ದಿನವೂ ಅಥವಾ ತಿಂಗಳಿಗೆ ಒಂದು SIP ರೂಪದಲ್ಲಿ ಬಂಗಾರದಲ್ಲಿ ಹೂಡಿಕೆ ಮಾಡಬಹುದು.

ಕೇವಲ ₹5 ರಿಂದಲೇ ಆರಂಭಿಸಬಹುದಾದ ಈ ಯೋಜನೆಯಲ್ಲಿ ಹೂಡಿಕೆದಾರರು ಯಾವಾಗ ಬೇಕಾದರೂ ತಮ್ಮ ಹೂಡಿಕೆಯನ್ನು ಮಾರಾಟ ಮಾಡಬಹುದು ಅಥವಾ ರೀಡೀಮ್ ಮಾಡಬಹುದು. ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಕ್ಯಾಶ್‌ಬ್ಯಾಕ್ ಪಡೆಯುವ ಕ್ರಮ:

ಫೋನ್‌ಪೇ ಆಪ್ ತೆರೆಯಿರಿ.
ಹೋಮ್‌ಸ್ಕ್ರೀನ್‌ನಲ್ಲಿ ‘ಡಿಜಿಟಲ್ ಗೋಲ್ಡ್’ ಆಯ್ಕೆಮಾಡಿ.
“ಬಂಗಾರ ಖರೀದಿ” ಆಯ್ಕೆಮಾಡಿ, ಕನಿಷ್ಠ ₹2000 ಮೊತ್ತವನ್ನು ನಮೂದಿಸಿ ಪಾವತಿಸಿರಿ.

ಧನತೇರಸ್ ಸಮಯದಲ್ಲಿ ಬಂಗಾರ ಖರೀದಿಸಲು ಯೋಜಿಸುತ್ತಿರುವವರು ಈ ಆಫರ್‌ನಿಂದ ಖರ್ಚು ಉಳಿಸಿ ಲಾಭ ಪಡೆಯುವ ಅವಕಾಶವಿದೆ.

PhonePe Dhanteras Offer, Buy Gold and Get Cashback

Related Stories