ಕಡಿಮೆ ಬೆಲೆಗೆ ಹರಾಜಿನಲ್ಲಿ ಮನೆ ಖರೀದಿಸಿ! ಸ್ವಂತ ಮನೆ ಮಾಡಿಕೊಳ್ಳೋಕೆ ಇದು ಒಳ್ಳೆ ಟೈಮ್.
ಬಹುತೇಕ ಎಲ್ಲಾ ಜನರಲ್ಲು ಒಂದು ಕನಸು ಇರುತ್ತದೆ, ಅದು ತಮಗಾಗಿ ಒಂದು ಸ್ವಂತ ಇರಬೇಕು ಎನ್ನುವುದಾಗಿರುತ್ತದೆ. ಆದರೆ ಆ ಕನಸು ಎಲ್ಲರ ಜೀವನದಲ್ಲೂ ಸುಲಭವಾಗಿ ನೆರವೇರುವುದು ಕಷ್ಟ. ಏಕೆಂದರೆ, ಎಲ್ಲರ ಆರ್ಥಿಕ ಸ್ಥಿತಿ ಒಂದೇ ರೀತಿ ಇರುವುದಿಲ್ಲ.. ಅದರಲ್ಲೂ ಈಗಿನ ಕಾಲದಲ್ಲಿ ಆಸ್ತಿ ಖರೀದಿ ಮಾಡುವುದು ಸುಲಭವಲ್ಲ. ಬಹಳಷ್ಟು ಹಣ ಖರ್ಚಾಗುತ್ತದೆ.
ಒಂದು ವೇಳೆ ನಿಮಗೆ ಸ್ವಂತ ಮನೆ ಅಥವಾ ಇತರೆ ಆಸ್ತಿ ಖರೀದಿ ಮಾಡಬೇಕು ಎಂದು ಆಸೆ ಇದ್ದು, ಈಗಿನ ಬೆಲೆ ಏರಿಕೆಗೆ ಖರೀದಿ ಮಾಡಲು ಆಗೋದಿಲ್ಲ, ಕಡಿಮೆ ಬೆಲೆಗೆ ಸಿಗಬೇಕು ಎಂದು ಬಯಸಿದರೆ, ನಿಮಗಾಗಿ ಒಂದು ಸೂಪರ್ ಆಫರ್ ಕಾದಿದೆ. ನಮ್ಮ ದೇಶದ ಖ್ಯಾತ ಬ್ಯಾಂಕ್ ಪಂಜಾಬ್ ನ್ಯಾಶನಲ್ ಬ್ಯಾಂಕ್ (Punjab National Bank) ಕಡಿಮೆ ಬೆಲೆಯಲ್ಲಿ ಆಸ್ತಿ ಖರೀದಿ ಮಾಡುವ ಅವಕಾಶ ನೀಡಿದೆ.
PNB ಈಗ ಆನ್ಲೈನ್ ನಲ್ಲಿ ಹರಾಜು ಪ್ರಕ್ರಿಯೆ (Online Sale) ನಡೆಸಲಿದೆ. ಇದರ ಮೂಲಕ ನೀವು ಮಾರ್ಕೆಟ್ ವ್ಯಾಲ್ಯೂ ಗಿಂತ ಕಡಿಮೆ ಬೆಲೆಯಲ್ಲಿ ಮನೆ, ಅಂಗಡಿ ಮತ್ತು ಇತರೆ ಆಸ್ತಿಗಳನ್ನು ಖರೀದಿ ಮಾಡಬಹುದು. ಇಡೀ ದೇಶದಲ್ಲಿ ಈ ಆನ್ಲೈನ್ ಹರಾಜು ನಡೆಯಲಿದ್ದು, ಕಡಿಮೆ ಬೆಲೆಗೆ ನಿಮಗೆ ಇಷ್ಟವಾಗುವ ಆಸ್ತಿಯನ್ನು ಖರೀದಿ ಮಾಡುವ ಒಳ್ಳೆಯ ಅವಕಾಶ ಇದಾಗಿತ್ತು.
ಈ ಹರಾಜು ಪ್ರಕ್ರಿಯೆ ಇಂದು ನಡೆಯಲಿದ್ದು, ಹರಾಜಿನಲ್ಲಿ ಭಾಗವಹಿಸಿ ನಿಮಗೆ ಇಷ್ಟ ಆಗುವ ಆಸ್ತಿ ಖರೀದಿ (Online Property Sale) ಮಾಡಬಹುದು. ಈ ಹರಾಜಿನಲ್ಲಿ ಸರ್ಕಾರಕ್ಕೆ ಸೇರಿದ 34 ಮತ್ತು 98 ಕೃಷಿ ಭೂಮಿ, 1133 ಕೈಗಾರಿಕಾ ಆಸ್ತಿಗಳು, 2155 ಕಮರ್ಶಿಯಲ್ ಆಸ್ತಿಗಳು, 11374 ಮನೆಗಳನ್ನು ಆನ್ಲೈನ್ ಹರಾಜಿಗೆ ಇಡಲಾಗಿದೆ..ಈ ಆಸ್ತಿಗಳೆಲ್ಲ ಇರುವುದು ನಮ್ಮ ದೇಶದ ಖ್ಯಾತ ಊರುಗಳಲ್ಲಿ ಬೆಂಗಳೂರು, ದೆಹಲಿ, ಮುಂಬೈ ಈ ಎಲ್ಲಾ ಕಡೆ ಇದೆ ಎನ್ನುವುದು ವಿಶೇಷ.
ನಿಮಗೆ ಇಷ್ಟವಾಗುವ ಊರಿನಲ್ಲಿ ಆಸ್ತಿ ಖರೀದಿ ಮಾಡಬಹುದು, ಈ ಹರಾಜಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ PNB ಬ್ಯಾಂಕ್ ಶಾಖೆ ಅಥವಾ ವೆಬ್ಸೈಟ್ ನಲ್ಲಿ ಮಾಹಿತಿ ಪಡೆಯಬಹುದು. ಹರಾಜಿನಲ್ಲಿ ನೀವು ಭಾಗವಹಿಸಿ ಆಸ್ತಿ ಖರೀದಿ ಮಾಡಲು ಮೊದಲಿಗೆ ಸ್ವಲ್ಪ ಹಣವನ್ನು ಠೇವಣಿ (Money Deposit) ಮಾಡಬೇಕು, ಬಳಿಕ ಆನ್ಲೈನ್ ಹರಾಜಿಗೆ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಕೊಡಲಾಗುತ್ತದೆ.
ನಂತರ ನಿಮಗೆ ಇಷ್ಟವಾದ ಜಾಗದಲ್ಲಿ, ಇಷ್ಟ ಅಗುವಂಥ ಆಸ್ತಿ ಇದೆಯೇ ಎನ್ನುವುದನ್ನು ಚೆಕ್ ಮಾಡಿ, ಬಿಡ್ ಮಾಡಬೇಕು (Online Bidding).. ಇಲ್ಲಿ ಹರಾಜಿಗೆ ಸಿಗುವ ಆಸ್ತಿಗಳು ಯಾವುವು ಎಂದರೆ, ಬ್ಯಾಂಕ್ ಗಳು ಆಸ್ತಿ ಮೇಲೆ ಸಾಲ ಕೊಟ್ಟು, ಅವುಗಳನ್ನು ಪಾವಾಗಿಸಲಾಗದೆ, ಜಪ್ತಿ ಮಾಡಿರುವ ಆಸ್ತಿಗಳಾಗಿರುವುದರಿಂದ ಕಡಿಮೆ ಬೆಲೆಗೆ ಸಿಗುತ್ತದೆ.
ಇಲ್ಲಿ ನೀವು ಆಸ್ತಿ ಖರೀದಿ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಕಾನೂನಿಗೆ (Law) ಸಂಬಂಧಿಸಿದ ಎಲ್ಲಾ ವಿಷಯಗಳು ಬ್ಯಾಂಕ್ ವತಿಯಿಂದ ಕ್ಲಿಯರ್ ಆಗಿರುತ್ತದೆ.. ಹಾಗಾಗಿ ಆಸ್ತಿ ಖರೀದಿ ಮಾಡಿದರೆ ಮುಂದೆ ತೊಂದರೆ ಆಗುವುದಿಲ್ಲ. ಈ ಹರಾಜಿನಲ್ಲಿ ಪಾಲ್ಗೊಂಡು ನೀವು ಕೂಡ ಕಡಿಮೆ ಬೆಲೆಗೆ ಆಸ್ತಿ ಖರೀದಿ ಮಾಡಬಹುದು.
Pnb bank online auction to purchase house and other properties