Business News

ನಿಮ್ಮ ಹಣ ಮೂರು ಪಟ್ಟು ಹೆಚ್ಚಾಗೋ ಪೋಸ್ಟ್ ಆಫೀಸ್ ಯೋಜನೆ ಇದು

ಅಂಚೆ ಕಚೇರಿಯ FD ಯೋಜನೆಯಿಂದ ನಿಮ್ಮ ಹೂಡಿಕೆ ಮೂರು ಪಟ್ಟು ಹೆಚ್ಚಿಸಿಕೊಳ್ಳಬಹುದು. ಸರಿಯಾದ ಬಡ್ಡಿದರ ಆಯ್ಕೆ ಮಾಡಿಕೊಂಡರೆ, ನಿಮ್ಮ ಮೊತ್ತ ದೊಡ್ಡ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ. ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

  • ಅಂಚೆ ಕಚೇರಿ FD ನಲ್ಲಿ 7.5% ಬಡ್ಡಿ ಲಭ್ಯ.
  • 15 ವರ್ಷಗಳ ಹೂಡಿಕೆ ಮಾಡಿದರೆ ಹಣ ಮೂರು ಪಟ್ಟು.
  • ಸರಿಯಾದ ಯೋಜನೆ ಆಯ್ಕೆ ಮಾಡಿದರೆ ಭವಿಷ್ಯ ಸುರಕ್ಷಿತ.

Post Office Fixed Deposit: ಹೂಡಿಕೆ ಮಾಡೋದಾದ್ರೆ ಎಲ್ಲಿಂದಲಾದರೂ ಮಾಡಬಹುದು, ಆದರೆ ಅಂಚೆ ಕಚೇರಿ (Post Office) FD ಅಂದ್ರೆ, ಹಣವನ್ನು ಸುಲಭವಾಗಿ ಮೂರು ಪಟ್ಟು ಮಾಡಿಕೊಳ್ಳಬಹುದು.

ಹೌದು, ಸರಿಯಾಗಿ ಬಡ್ಡಿದರ ಆಯ್ಕೆ ಮಾಡಿಕೊಂಡರೆ ನಿಮ್ಮ ಹೂಡಿಕೆ ದೊಡ್ಡ ಮೊತ್ತವಾಗೋದು ಖಚಿತ. ಅಂಚೆ ಕಚೇರಿ ಸ್ಥಿರ ಠೇವಣಿ ಯೋಜನೆ (FD) ಕೇವಲ 5 ವರ್ಷದಲ್ಲಿ ಉತ್ತಮ ಲಾಭ ನೀಡುತ್ತದೆ.

ಇದನ್ನೂ ಓದಿ: 3 ಸಾವಿರಕ್ಕೆ ಸಿಗೋ ಈ ಮೇಕೆ ತಳಿ ಸಾಕಾಣಿಕೆ ಮಾಡಿದ್ರೆ ಲಕ್ಷ ಲಕ್ಷ ಆದಾಯ

ಇದು ಹೇಗೆ ಸಾಧ್ಯ?

ಈ FD 7.5% ಬಡ್ಡಿದರವನ್ನು ನೀಡುತ್ತೆ. ಆದರೆ ಒಂದು ಟ್ರಿಕ್ ಇದೆ! ನೀವು 5 ವರ್ಷಗಳ ನಂತರ FD ಅನ್ನು ಪುನರಾವರ್ತನೆ ಮಾಡಿದರೆ, ಅಂದರೆ 15 ವರ್ಷಗಳವರೆಗೆ ಇದನ್ನು ಮುಂದುವರಿಸಿದರೆ, ನೀವು ಹಾಕಿದ ಹಣ ಮೂರು ಪಟ್ಟು ಆಗುತ್ತದೆ.

ಉದಾಹರಣೆ ನೋಡಿ:

ಒಬ್ಬ ವ್ಯಕ್ತಿ ₹5 ಲಕ್ಷ ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ ಬಡ್ಡಿಯೊಂದಿಗೆ ₹7,24,974 ರೂಪಾಯಿ ವಾಪಸು ಪಡೆಯುತ್ತಾರೆ. ಅದೇ FD ಮತ್ತೇ 5 ವರ್ಷಗಳ ಕಾಲ ವಿಸ್ತರಿಸಿದರೆ, ₹10,51,175 ರೂಪಾಯಿ ಸಿಗುತ್ತದೆ. ಮತ್ತೆ 5 ವರ್ಷಗಳ FD ಮುಂದುವರಿಸಿದರೆ, 15ನೇ ವರ್ಷದಲ್ಲಿ ಮೊತ್ತ ₹15,24,149 ರೂಪಾಯಿಯಾಗುತ್ತದೆ!

ಇದನ್ನೂ ಓದಿ: ಮನೆ ಶಿಫ್ಟ್‌ ಮಾಡಿದ್ದೀರಾ? ಮೊದಲು ಆಧಾರ್​ ಕಾರ್ಡ್​ ಅಡ್ರೆಸ್​ ಅಪ್ಡೇಟ್ ಮಾಡಿ

Post Office Fixed Deposit Scheme

ಬಡ್ಡಿದರ ಎಷ್ಟು?

ಅಂಚೆ ಕಚೇರಿ ವಿಭಿನ್ನ ಅವಧಿಗಳ FDಗಳಿಗೆ ವಿಭಿನ್ನ ಬಡ್ಡಿದರವನ್ನು ನೀಡುತ್ತದೆ:

  • 1 ವರ್ಷ FD – 6.90%
  • 2 ವರ್ಷ FD – 7.00%
  • 3 ವರ್ಷ FD – 7.10%
  • 5 ವರ್ಷ FD – 7.50%

FD ವಿಸ್ತರಣೆ ಹೇಗೆ?

  1. 1 ವರ್ಷದ FD – 6 ತಿಂಗಳೊಳಗೆ ವಿಸ್ತರಿಸಬಹುದು.
  2. 2 ವರ್ಷದ FD – 12 ತಿಂಗಳೊಳಗೆ ವಿಸ್ತರಿಸಬಹುದು.
  3. 3 ಮತ್ತು 5 ವರ್ಷದ FD – 18 ತಿಂಗಳೊಳಗೆ ವಿಸ್ತರಿಸಬಹುದು.

ಇದನ್ನೂ ಓದಿ: ಮನೆಯಲ್ಲೇ ಕೂತ್ಕೊಂಡು ಆನ್ಲೈನ್‌ನಲ್ಲೆ ಹಣ ಸಂಪಾದಿಸಿ! ನಿಮ್ಮತ್ರ ಫೋನ್ ಇದ್ರೆ ಸಾಕು

ಅಂತಹ FD ಯೋಜನೆಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಲಾಭದಾಯಕ. ಹಣ ಸುಲಭವಾಗಿ ಮೂರು ಪಟ್ಟು ಆಗೋದು, ಸರಿಯಾದ ಯೋಜನೆ ಆಯ್ಕೆ ಮಾಡಿದರೆ ಖಂಡಿತಾ ನಿಮಗೆ ಲಾಭವನ್ನೇ ತರುತ್ತದೆ!

Post Office FD, Triple Your Money in 15 Years

English Summary

Our Whatsapp Channel is Live Now 👇

Whatsapp Channel

Related Stories