ಒಮ್ಮೆ ಹೂಡಿಕೆ ಮಾಡಿ, ಪ್ರತೀ ತಿಂಗಳು ₹5,550 ಆದಾಯ! ಈ ಪೋಸ್ಟ್ ಆಫೀಸ್ ಯೋಜನೆ ಭಾರೀ ಫೇಮಸ್
ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆ (MIS) ಮೂಲಕ ಒಮ್ಮೆ ಹೂಡಿಕೆ ಮಾಡಿದರೆ ಐದು ವರ್ಷಗಳ ಕಾಲ ಪ್ರತೀ ತಿಂಗಳು ಖಾತೆಗೆ ನೇರವಾಗಿ ಸ್ಥಿರ ಆದಾಯ ಪಡೆಯಬಹುದು.
- 9 ಲಕ್ಷ ಹೂಡಿಕೆ, ಪ್ರತೀ ತಿಂಗಳು ₹5,550 ಆದಾಯ
- 5 ವರ್ಷಗಳ ನಂತರ ಮೂಲಧನ ಸುರಕ್ಷಿತ
- ಪ್ರತೀ ತಿಂಗಳು ಖಾತೆಗೆ ನೇರ ಸ್ಥಿರ ಆದಾಯ
Post Office Scheme: ನಿವೃತ್ತರು, ಗೃಹಿಣಿಗಳು ಮತ್ತು ಸುರಕ್ಷಿತ ಆದಾಯ ಹುಡುಕುವವರಿಗೆ ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆ (Monthly Income Scheme – MIS) ಈಗ ಉತ್ತಮ ಆಯ್ಕೆಯಾಗಿ ಪರಿಣಮಿಸಿದೆ. ಒಮ್ಮೆ ಹೂಡಿಕೆ ಮಾಡಿದರೆ, ಪ್ರತೀ ತಿಂಗಳು ನಿಗದಿತ ಆದಾಯ ಖಾತೆಗೆ ಜಮೆಯಾಗುವುದು ಇದರ ಪ್ರಮುಖ ವಿಶೇಷತೆ.
ಪ್ರತೀ ತಿಂಗಳು ಖಾತೆಗೆ ನೇರವಾಗಿ ಹಣ
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ವಾರ್ಷಿಕ 7.4% ಬಡ್ಡಿ ನೀಡಲಾಗುತ್ತದೆ. ಈ ಬಡ್ಡಿ ಮೊತ್ತವನ್ನು ಪ್ರತಿ ತಿಂಗಳು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಆದಾಯಕ್ಕಾಗಿ ಪ್ರತಿ ಬಾರಿ ಹೊಸ ಹೂಡಿಕೆ ಮಾಡುವ ಅಗತ್ಯ ಇಲ್ಲ.
ಎಷ್ಟು ಹಣದಿಂದ ಖಾತೆ ತೆರೆಯಬಹುದು?
ಪೋಸ್ಟ್ ಆಫೀಸ್ MIS ಖಾತೆಯನ್ನು ಕೇವಲ ₹1,000 ರಿಂದ ಆರಂಭಿಸಬಹುದು. ಒಬ್ಬರ ಹೆಸರಿನ ಖಾತೆಯಲ್ಲಿ ಗರಿಷ್ಠ ₹9 ಲಕ್ಷವರೆಗೆ ಹೂಡಿಕೆ ಅವಕಾಶ ಇದೆ. ಸಂಯುಕ್ತ ಖಾತೆಯಾದರೆ ಗರಿಷ್ಠ ₹15 ಲಕ್ಷವರೆಗೆ ಹೂಡಿಕೆ ಮಾಡಬಹುದು.
ಇದನ್ನೂ ಓದಿ: ಎಸ್ಬಿಐ, ಕೆನರಾ ಬ್ಯಾಂಕ್ ಸೇರಿ ಈ ಬ್ಯಾಂಕ್ಗಳಲ್ಲಿ ಕಮ್ಮಿ ಬಡ್ಡಿಗೆ ಸಿಗುತ್ತಿದೆ ಕಾರ್ ಲೋನ್
₹9 ಲಕ್ಷ ಹೂಡಿಕೆಗೆ ಎಷ್ಟು ಆದಾಯ?
ಒಬ್ಬ ವ್ಯಕ್ತಿ MIS ಖಾತೆಯಲ್ಲಿ ₹9 ಲಕ್ಷ ಹೂಡಿಕೆ ಮಾಡಿದರೆ, ಐದು ವರ್ಷಗಳ ಕಾಲ ಪ್ರತೀ ತಿಂಗಳು ₹5,550 ಸ್ಥಿರ ಆದಾಯ ಲಭ್ಯವಾಗುತ್ತದೆ. ಈ ಮೊತ್ತ ತಿಂಗಳ ಆದಾಯಕ್ಕೆ ಉತ್ತಮ ಬೆಂಬಲ ನೀಡುತ್ತದೆ.
ಮ್ಯಾಚ್ಯೂರಿಟಿಯಲ್ಲಿ ಏನು ಲಾಭ?
ಈ ಯೋಜನೆಯ ಅವಧಿ ಐದು ವರ್ಷಗಳು. ಅವಧಿ ಪೂರ್ಣಗೊಂಡ ನಂತರ, ನೀವು ಪ್ರತೀ ತಿಂಗಳು ಪಡೆದ ಬಡ್ಡಿಯ ಜೊತೆಗೆ, ನಿಮ್ಮ ಮೂಲ ಹೂಡಿಕೆ ಮೊತ್ತವೂ ಸಂಪೂರ್ಣವಾಗಿ ಹಿಂದಿರುಗುತ್ತದೆ. ಹೀಗಾಗಿ ಹಣದ ಸುರಕ್ಷತೆಗೂ ಭರವಸೆ ಸಿಗುತ್ತದೆ.
ಖಾತೆ ತೆರೆಯುವ ವಿಧಾನ
MIS ಖಾತೆ ತೆರೆಯಲು ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ. ಅಗತ್ಯ ದಾಖಲೆಗಳೊಂದಿಗೆ ಉಳಿತಾಯ ಖಾತೆ ತೆರೆಯಬಹುದು. ಖಾತೆ ತೆರೆದ ತಕ್ಷಣವೇ ತಿಂಗಳ ಆದಾಯ ಪ್ರಕ್ರಿಯೆ ಆರಂಭವಾಗುತ್ತದೆ.



