ಅಂಚೆ ಕಛೇರಿಯಿಂದ ಮತ್ತೊಂದು ಬಂಪರ್ ಯೋಜನೆ! ₹50 ಹೂಡಿಕೆ ಮಾಡಿ ಪಡೆಯಿರಿ ₹35ಲಕ್ಷ!

ಹಣ ಹೂಡಿಕೆ (Money Investment) ಮಾಡಿ, ಭವಿಷ್ಯದ ಜೀವನವನ್ನು ಉತ್ತಮವಾಗಿಸಿಕೊಳ್ಳಲು ಬಯಸುವವರಿಗೆ ಹೂಡಿಕೆ ಮಾಡಲಿ ಅತ್ಯುತ್ತಮ ಆಯ್ಕೆ ಪೋಸ್ಟ್ ಆಫೀಸ್ ಯೋಜನೆಗಳು (Post Office Scheme). ಈ ಯೋಜನೆಗಳನ್ನು ಕೇಂದ್ರ ಸರ್ಕಾರ ಹ್ಯಾಂಡಲ್ ಮಾಡುವುದರಿಂದ ನಿಮ್ಮ ಹಣದ ಬಗ್ಗೆ ಭಯ ಪಡುವ ಅಗತ್ಯ ಇರುವುದಿಲ್ಲ, ನೀವು ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ.

ಹಾಗೆಯೇ ನಿಮ್ಮ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಕೊಡುತ್ತದೆ. ಜೊತೆಗೆ ಪೋಸ್ಟ್ ಆಫೀಸ್ ಸಾಮಾನ್ಯ ಜನರಿಗೆ ಹೂಡಿಕೆ ಮಾಡುವುದಕ್ಕಾಗಿ ಸಾಕಷ್ಟು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಬಡ್ಡಿಯ ಲಾಭ ಪಡೆಯಬಹುದು. ಕೇಂದ್ರ ಸರ್ಕಾರ ಕೂಡ ಪೋಸ್ಟ್ ಆಫೀಸ್ ಯೋಜನೆಗಳ ಮೇಲೆ ಬಡ್ಡಿ ಹೆಚ್ಚಿಸಿದೆ (Interest Rate).

ಈಗಾಗಲೇ ಈ ಥರದ ಹಲವು ಯೋಜನೆಗಳಿದ್ದು, ಇದೀಗ ಪೋಸ್ಟ್ ಆಫೀಸ್ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಇದು ಕೂಡ ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಲಾಭ ಪಡೆಯುವ ಯೋಜನೆ ಆಗಿದೆ. ಪೋಸ್ಟ್ ಆಫೀಸ್ ವತಿಯಿಂದ ನಮ್ಮ ದೇಶದ ಕೆಳ ವರ್ಗದ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ಹಾಗೆ ಹಲವು ಯೋಜನೆಗಳು ಜಾರಿಯಲ್ಲಿದೆ.

ಅಂಚೆ ಕಛೇರಿಯಿಂದ ಮತ್ತೊಂದು ಬಂಪರ್ ಯೋಜನೆ! ₹50 ಹೂಡಿಕೆ ಮಾಡಿ ಪಡೆಯಿರಿ ₹35ಲಕ್ಷ! - Kannada News

ಅದೇ ಸಾಲಿಗೆ ಸೇರುವ ಹೊಸ ಯೋಜನೆ ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ (Post Office Grama Suraksha Yojane) ಆಗಿದೆ. ಈ ಯೋಜನೆಯಲ್ಲಿ ನೀವು ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚು ಆದಾಯ ಪಡೆಯಬಹುದು. ಇದೊಂದೂ ಸಂಪೂರ್ಣ ಲಾಭದಾಯಕ ಯೋಜನೆ ಆಗಿದೆ. ಈ ಯೋಜನೆಗೆ ಸೇರಲು ಕೆಲವು ನಿಯಮಗಳಿಗೆ, ವಯಸ್ಸಿನ ಮಿತಿ ಇಡಲಾಗಿದೆ.

ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆಗೆ ಸೇರುವವರ ವಯಸ್ಸು ಕನಿಷ್ಠ 19 ವರ್ಷದಿಂದ 55 ವರ್ಷಗಳ ಒಳಗೆ ಇರಬೇಕು. ಹಾಗೆಯೇ ಇಲ್ಲಿ ಹೂಡಿಕೆ ಮಾಡಬಹುದಾದ ಮೊತ್ತಕ್ಕೂ ಮಿತಿ ಇದೆ. ಈ ಯೋಜನೆಯಲ್ಲಿ ಕನಿಷ್ಠ ₹10,000 ರೂಪಾಯಿ ಹೂಡಿಕೆ ಮಾಡಬಹುದು, ಹಾಗೆಯೇ ಗರಿಷ್ಠ ₹10,00,000 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬಹುದು.

ಈ ಯೋಜನೆಯಲ್ಲಿ ಹೂಡಿಕೆ ಮಾಡಿ 4 ವರ್ಷ ಮುಗಿದ ನಂತರ ಕವರೇಜ್ ಸೌಲಭ್ಯದಲ್ಲಿ ಹೂಡಿಕೆ ಮೇಲೆ ಸಾಲ ಸಿಗುತ್ತದೆ. ಇಲ್ಲಿ ಪಡೆಯುವ ಲಾಭದ ಬಗ್ಗೆ ಉದಾಹರಣೆ ಕೊಡುವುದಾದರೆ, ದಿನಕ್ಕೆ 50 ರೂಪಾಯಿ ಉಳಿಸಿ, ತಿಂಗಳಿಗೆ ₹1,515 ರೂಪಾಯಿ ಮಾಡಿದರೆ, ಈ ಯೋಜನೆ ಮೆಚ್ಯುರಿಟಿ ಹೊಂದುವ ವೇಳೆಗೆ ನೀವು ₹34.60 ಲಕ್ಷ ರೂಪಾಯಿ ಆದಾಯ ಪಡೆಯುತ್ತೀರಿ.

Post office new scheme

ಈ ಯೋಜನೆಯಲ್ಲಿ 1000 ರೂಪಾಯಿಗೆ 60 ರೂಪಾಯಿ ಬೋನಸ್ ಕೊಡಲಾಗುತ್ತದೆ. ಒಂದು ವೇಳೆ ನೀವು ಈ ಯೋಜನೆಗೆ ಸೇರಿ, 5 ವರ್ಷದ ಒಳಗೆ ಕ್ಲೋಸ್ ಮಾಡಿದರೆ, ನಿಮಗೆ ಬೋನಸ್ ಸಿಗುವುದಿಲ್ಲ.

Post office new scheme

Follow us On

FaceBook Google News

Post office new scheme