ಪೋಸ್ಟ್ ಆಫೀಸ್ ಆರ್‌ಡಿ ಯೋಜನೆ: ಮಕ್ಕಳ ಭವಿಷ್ಯಕ್ಕೆ ವರದಾನ! ಬಂಪರ್ ಸ್ಕೀಮ್
ಪೋಸ್ಟ್ ಆಫೀಸ್ ಆರ್‌ಡಿ ಯೋಜನೆ ಕೇವಲ ₹100ದಿಂದ ಪ್ರಾರಂಭಿಸಬಹುದು. 6.7% ಬಡ್ಡಿದರದಲ್ಲಿ ಮಕ್ಕಳ ಭವಿಷ್ಯ ಸುರಕ್ಷಿತ. 18ನೇ ವಯಸ್ಸಿನ ನಂತರ ಬಂಪರ್ ರಿಟರ್ನ್ಸ್ ಪಡೆಯುವ ಅವಕಾಶ.

ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಭವಿಷ್ಯಕ್ಕಾಗಿ ಹಣ ಉಳಿಸುವ ಅಗತ್ಯವನ್ನು ಅರಿಯುತ್ತಿದ್ದಾರೆ. ಮಧ್ಯಮ ವರ್ಗದ ಹಾಗೂ ಸಾಮಾನ್ಯ ಕುಟುಂಬಗಳು ಸಣ್ಣ ಮೊತ್ತಗಳಿಂದಲೂ ದೊಡ್ಡ ಉಳಿತಾಯ ಮಾಡಬೇಕೆಂಬ ಕನಸು ಕಾಣುತ್ತಾರೆ. ಅಂತಹವರಿಗೆ ಪೋಸ್ಟ್ ಆಫೀಸ್‌ನ ರಿಕರಿಂಗ್ ಡೆಪಾಸಿಟ್ (RD) ಯೋಜನೆ ಒಂದು ವಿಶ್ವಾಸಾರ್ಹ ಆಯ್ಕೆಯಾಗಿದೆ.
ಈ ಯೋಜನೆ ಕೇವಲ ₹100ರಿಂದ ಪ್ರಾರಂಭಿಸಬಹುದು ಮತ್ತು ಗರಿಷ್ಠ ಮಿತಿಯೇ ಇಲ್ಲ. ಪೋಷಕರು ತಮ್ಮ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು. 18 ವರ್ಷ ಪೂರೈಸಿದ ನಂತರ, ಮಕ್ಕಳು ತಮ್ಮದೇ ಹೆಸರಿನಲ್ಲಿ ಹೊಸ KYC ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಪೋಸ್ಟ್ ಆಫೀಸ್ ಆರ್‌ಡಿ ಯೋಜನೆ ಒಂದು ರೀತಿಯಲ್ಲಿ ಮ್ಯೂಚುಯಲ್ ಫಂಡ್ SIP ಮಾದರಿಯಂತೆ ಕಾರ್ಯನಿರ್ವಹಿಸುತ್ತದೆ. ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಠೇವಣಿ ಇಡುವ ಮೂಲಕ ದೊಡ್ಡ ಮೊತ್ತವನ್ನು ಹಂತ ಹಂತವಾಗಿ ಸಂಗ್ರಹಿಸಬಹುದು. ಇದರ ಬಡ್ಡಿ ಪ್ರಮಾಣ ಫಿಕ್ಸ್ಡ್ ಡೆಪಾಸಿಟ್‌ಗಳಂತೆ ಸ್ಥಿರವಾದ ಮತ್ತು ಸುರಕ್ಷಿತ.
ಈ ಯೋಜನೆಗೆ 5 ವರ್ಷದ ಅವಧಿಯು ನಿಗದಿಯಾಗಿದೆ. ಬಡ್ಡಿದರವು ವಾರ್ಷಿಕ 6.7% ಆಗಿದ್ದು, ಇದು ಚಕ್ರಬಡ್ಡಿಯಾಗಿ ಲೆಕ್ಕವಾಗುತ್ತದೆ. ಅಂದರೆ ಬಡ್ಡಿಗೂ ಮತ್ತೆ ಬಡ್ಡಿ ದೊರೆಯುತ್ತದೆ. ಉದಾಹರಣೆಗೆ, ತಿಂಗಳಿಗೆ ₹5,000 ಠೇವಣಿ ಮಾಡಿದರೆ 5 ವರ್ಷಗಳಲ್ಲಿ ₹3,00,000 ಹೂಡಿಕೆಯ ಮೇಲೆ ₹56,830 ಬಡ್ಡಿಯಾಗಿ ₹3,56,830 ದೊರೆಯುತ್ತದೆ.
ಖಾತೆದಾರರು ಅಗತ್ಯವಿದ್ದರೆ 3 ವರ್ಷಗಳ ನಂತರ ಖಾತೆಯನ್ನು ಮುಚ್ಚಬಹುದಾಗಿದೆ. ಖಾತೆದಾರರ ನಿಧನದ ಸಂದರ್ಭದಲ್ಲಿಯೂ ನಾಮಿನಿಗೆ ಸಂಪೂರ್ಣ ಮೊತ್ತ ದೊರೆಯುತ್ತದೆ ಅಥವಾ ಖಾತೆಯನ್ನು ಮುಂದುವರಿಸಬಹುದು.
ಇದಲ್ಲದೆ, ಈ ಖಾತೆಯನ್ನು ಪೋಸ್ಟ್ ಆಫೀಸ್‌ನ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕವೂ ತೆರೆದುಕೊಳ್ಳಬಹುದು. ದೀರ್ಘಾವಧಿಯಲ್ಲಿ ಸ್ಥಿರ ಆದಾಯ ಬಯಸುವವರಿಗೆ ಇದು ಅತ್ಯುತ್ತಮ ಹೂಡಿಕೆ ಮಾರ್ಗವಾಗಿದೆ.
ದಿನನಿತ್ಯ ಕೇವಲ ₹333 ಹೂಡಿಸಿದರೂ ತಿಂಗಳಿಗೆ ₹10,000 ಉಳಿಸಿ, ಕೆಲವೇ ವರ್ಷಗಳಲ್ಲಿ ₹17 ಲಕ್ಷಕ್ಕೂ ಹೆಚ್ಚು ಕಾರ್ಪಸ್ ನಿರ್ಮಿಸಬಹುದು. ಈ ಯೋಜನೆ ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಗೊಳಿಸಲು ಪೋಷಕರಿಗೆ ನಿಜವಾದ ವರದಾನವಾಗಿದೆ.
Post Office RD Scheme, A Blessing for Children’s Future



