ಪ್ರತಿ ತಿಂಗಳು ಬಡ್ಡಿಯೇ 20 ಸಾವಿರ ಸಿಗುವ ಪೋಸ್ಟ್ ಆಫೀಸ್ ಸ್ಕೀಮ್ ಇದು! ಬಂಪರ್ ಯೋಜನೆ
ಸರ್ಕಾರದ ಆಧೀನದಲ್ಲಿರುವ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಮೂಲಕ ನಿವೃತ್ತಿಯ ನಂತರವೂ ತಿಂಗಳಿಗೆ ₹20,000 ವರೆಗಿನ ಸ್ಥಿರ ಆದಾಯ ಪಡೆಯಬಹುದು. ಇದು ರಿಸ್ಕ್ ಇಲ್ಲದ ವಿಶ್ವಾಸಾರ್ಹ ಹೂಡಿಕೆ ಆಯ್ಕೆ.

ನಿವೃತ್ತಿಯ ನಂತರ ಸ್ಥಿರ ಆದಾಯ ಪಡೆಯುವ ಬಯಕೆ ಇರುವವರಿಗೆ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (Senior Citizen Savings Scheme – SCSS) ಉತ್ತಮ ಆಯ್ಕೆ ಆಗಿದೆ. ಸರ್ಕಾರಿ ಮಾನ್ಯತೆ ಹೊಂದಿರುವ ಈ ಯೋಜನೆ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ರಿಸ್ಕ್ ಇರುವುದಿಲ್ಲ.
ಹಿರಿಯ ನಾಗರಿಕರು ಒಂದು ಬಾರಿ ಹೂಡಿಕೆ ಮಾಡಿದರೆ, ಐದು ವರ್ಷಗಳ ಕಾಲ ಪ್ರತಿಮಾಸವೂ ನಿಗದಿತ ಬಡ್ಡಿ ರೂಪದಲ್ಲಿ ಆದಾಯ ಪಡೆಯಬಹುದು.
ಈ ಸ್ಕೀಮ್‌ನಲ್ಲಿ ವಾರ್ಷಿಕ 8.2% ಬಡ್ಡಿ ಲಭ್ಯವಿದ್ದು, ಇದು ಸಾಮಾನ್ಯ ಬ್ಯಾಂಕ್ ಫಿಕ್ಸ್ಡ್ ಡಿಪಾಸಿಟ್‌ಗಿಂತ (Fixed Deposit) ಹೆಚ್ಚು. ₹30 ಲಕ್ಷ ಹೂಡಿಕೆಯಾದರೆ ವರ್ಷಕ್ಕೆ ₹2.46 ಲಕ್ಷ, ಅಂದರೆ ತಿಂಗಳಿಗೆ ಸುಮಾರು ₹20,500 ಲಾಭ ಸಿಗುತ್ತದೆ.
ಈ ಸ್ಕೀಮ್‌ಗೆ 60 ವರ್ಷ ಮೇಲ್ಪಟ್ಟವರು ಅರ್ಹರು. ಸರ್ಕಾರದಿಂದ ನಿವೃತ್ತಿಯಾದವರು ಅಥವಾ ವಾಲಂಟರಿ ರಿಟೈರ್‌ಮೆಂಟ್ ಪಡೆದ 55–60 ವರ್ಷದವರು, ರಕ್ಷಣಾ ಇಲಾಖೆಯಿಂದ ನಿವೃತ್ತರಾದ 50–60 ವರ್ಷದವರೂ ಸೇರಬಹುದು. ಹೂಡಿಕೆ ಮಾಡಿದ ಮೊತ್ತದ ಮೇಲೆ ಸೆಕ್ಷನ್ 80C ಅಡಿಯಲ್ಲಿ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಸೌಲಭ್ಯವೂ ಇದೆ.
ಖಾತೆ ತೆರೆಯಲು ಹತ್ತಿರದ ಯಾವುದೇ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಬಹುದು ಅಥವಾ ಆನ್‌ಲೈನ್‌ನಲ್ಲಿ ಪ್ರಕ್ರಿಯೆ ಮುಗಿಸಬಹುದು.
ಮೆಚ್ಯೂರಿಟಿ ಅವಧಿ 5 ವರ್ಷಗಳಾದ ಬಳಿಕ ಅದನ್ನು ನವೀಕರಿಸಬಹುದಾಗಿದೆ. ಸರ್ಕಾರದ ವಿಶ್ವಾಸಾರ್ಹತೆಯುಳ್ಳ ಈ ಯೋಜನೆ ನಿವೃತ್ತ ಜೀವನಕ್ಕೆ ಆರ್ಥಿಕ ಭದ್ರತೆ ನೀಡುವ ವಿಶಿಷ್ಟ ಆಯ್ಕೆಯಾಗಿದೆ.
Post Office Senior Citizen Savings Scheme



