ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನಿಮಗೆ ಬಡ್ಡಿಯೇ 2 ಲಕ್ಷ ಸಿಗುತ್ತೆ
ಪೋಸ್ಟ್‌ಆಫೀಸ್ ಟೈಮ್ ಡಿಪಾಸಿಟ್ ಯೋಜನೆ ಉತ್ತಮ ಬಡ್ಡಿ ನೀಡುತ್ತಿದೆ. ಬ್ಯಾಂಕ್‌ಗಳಿಗಿಂತ poste office interest rates ಹೆಚ್ಚು ಲಾಭ ಪಡೆಯಲು ಯೋಜನೆಯ ವಿವರಗಳನ್ನು ತಿಳಿದುಕೊಳ್ಳಿ, ಹಣದ ಭದ್ರತೆಗೂ ಭರವಸೆ ಇದೆ.

- ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ ಗೆ 7.5% ವರೆಗೆ ಬಡ್ಡಿ
- 5 ಲಕ್ಷ ರೂ. ಡಿಪಾಸಿಟ್ ಮಾಡಿದರೆ ₹2,24,974 ಬಡ್ಡಿ ಲಾಭ
- ಸರ್ಕಾರದ ಭದ್ರತೆ ಇರುವ ಹೂಡಿಕೆ ಆಯ್ಕೆ
Post Office Scheme: ಹಣ ಹೂಡಿಕೆಗೆ ಸುರಕ್ಷಿತ ಮತ್ತು ಲಾಭದಾಯಕ ಮಾರ್ಗವನ್ನು ಹುಡುಕುತ್ತಿರುವವರು ಈಗ ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್ (TD) ಯೋಜನೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆ (time deposit scheme) ಅಡಿಯಲ್ಲಿ ಕೇವಲ ₹5 ಲಕ್ಷ ಹೂಡಿಸಿದರೆ, ಐದು ವರ್ಷಗಳ ನಂತರ ನೀವು ₹7,24,974 ಮೇಚ್ಯುರಿಟಿ ಮೊತ್ತವಾಗಿ ಪಡೆಯಬಹುದು. ಇದರಲ್ಲಿ ₹2,24,974 ನಿಖರವಾದ ಬಡ್ಡಿಯಾಗಿ ಲಭಿಸುತ್ತದೆ.
ಈ ಟಿಡಿ ಯೋಜನೆಯು 1, 2, 3 ಮತ್ತು 5 ವರ್ಷಗಳ ಅವಧಿಗೆ ಲಭ್ಯವಿದ್ದು, 5 ವರ್ಷಗಳ ಅವಧಿಗೆ ಅಧಿಕವಾದ 7.5% ಬಡ್ಡಿ (interest rate) ನೀಡಲಾಗುತ್ತಿದೆ. ಜೊತೆಗೆ, 1 ವರ್ಷಕ್ಕೆ 6.9%, 2 ವರ್ಷಕ್ಕೆ 7%, 3 ವರ್ಷಕ್ಕೆ 7.1% ವರೆಗೆ ಬಡ್ಡಿ ಸಿಗುತ್ತದೆ.
ಪೋಸ್ಟ್‌ಆಫೀಸ್ TD ಖಾತೆಗೆ ಕನಿಷ್ಠ ₹1000 ಡಿಪಾಸಿಟ್ ಮಾಡಬಹುದು. ಗರಿಷ್ಠ ಮಿತಿ ಇಲ್ಲದ ಕಾರಣ, ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುವವರಿಗೆ ಇದು ಉತ್ತಮ ಆಯ್ಕೆಯಾಗಬಹುದು.
ಸಾಧಾರಣ ಪೌರರು ಮತ್ತು ಹಿರಿಯ ನಾಗರಿಕರು ಕೂಡ ಸಹ ಒಂದೇ ರೀತಿ ಬಡ್ಡಿ ಪಡೆಯುತ್ತಾರೆ, ಇದು TD ಯೋಜನೆಯ ಮತ್ತೊಂದು ಸಕಾರಾತ್ಮಕ ಅಂಶವಾಗಿದೆ.
ಪೋಸ್ಟ್‌ಆಫೀಸ್ ಅನ್ನು ಭಾರತ ಸರ್ಕಾರ ನಿರ್ವಹಿಸುತ್ತಿರುವುದರಿಂದ, ಇಲ್ಲಿ ಹಣ ಹೂಡಿಕೆ ಮಾಡಿದರೆ ಭದ್ರತೆ ಗ್ಯಾರಂಟಿಯಾಗಿದೆ. ಬ್ಯಾಂಕ್‌ಗಳ (banks) ಮೂಲಕ ಲಭ್ಯವಿರುವ ಯೋಜನೆಗಳಂತೆಯೇ, ಪೋಸ್ಟ್‌ಆಫೀಸ್ ಕೂಡ ತಮ್ಮ ಗ್ರಾಹಕರಿಗೆ stable return ನೀಡುವ ಹಲವಾರು ಯೋಜನೆಗಳನ್ನು ನೀಡುತ್ತಿದೆ.
ಇತ್ತೀಚೆಗೆ ಹಣ ಹೂಡಿಕೆಯ ಬಗ್ಗೆ ಜನರಲ್ಲಿ ಅರಿವು ಹೆಚ್ಚಾಗಿದ್ದು, ಹಲವರು ತಮ್ಮ ಸೇವಿಂಗ್‌ಗಳನ್ನು ಬ್ಯಾಂಕ್‌ಗಳ ಜೊತೆಗೆ ಪೋಸ್ಟ್‌ಆಫೀಸ್ ಯೋಜನೆಗಳಲ್ಲಿಯೂ ಹೂಡುತ್ತಿದ್ದಾರೆ. ಇದರೊಂದಿಗೆ, government backed investment ಎಂದು ಪರಿಗಣಿಸಬಹುದಾದ ಈ ಯೋಜನೆ, ಭರವಸೆಯೊಂದಿಗೆ ಲಾಭ ನೀಡುತ್ತಿರುವುದು ಸ್ಪಷ್ಟವಾಗಿದೆ.
Post Office Time Deposit scheme, attractive investment choice



