ಪೋಸ್ಟ್ ಆಫೀಸ್‌ನಲ್ಲಿ ಬಂಪರ್ ಪ್ಲಾನ್! 2 ಲಕ್ಷಕ್ಕೆ ಬಡ್ಡಿಯೇ 29,776 ಸಿಗುತ್ತೆ

ಪೋಸ್ಟ್ ಆಫೀಸ್ ಟೈಮ್ ಡಿಪಾಜಿಟ್ (TD) ಮೂಲಕ ಭದ್ರ ಮತ್ತು ಉತ್ತಮ ರಿಟರ್ನ್ ಪಡೆಯಬಹುದು. ಕೇವಲ ₹2 ಲಕ್ಷ ಠೇವಣಿ ಮಾಡಿದರೆ, 2 ವರ್ಷಗಳ ನಂತರ ₹29,776 ಹೆಚ್ಚುವರಿ ಲಾಭ ಪಡೆಯಬಹುದು

  • ಪೋಸ್ಟ್ ಆಫೀಸ್ ಟೈಮ್ ಡಿಪಾಜಿಟ್ (Time Deposit) ನಲ್ಲಿ ಭಾರೀ ಬೆನಿಫಿಟ್
  • ಕೇವಲ ₹2 ಲಕ್ಷ ಠೇವಣಿಯ ಮೇಲೆ 2 ವರ್ಷದಲ್ಲಿ ₹2,29,776 ಲಾಭ
  • ಬ್ಯಾಂಕಿಗಿಂತ ಹೆಚ್ಚಿನ ಬಡ್ಡಿ ದರ, ಸುಲಭವಾಗಿ ಖಾತೆ ತೆರೆಯುವ ಅವಕಾಶ

ಬ್ಯಾಂಕ್ ಎಫ್‌ಡಿಗಿಂತ (Fixed Deposit) ಪೋಸ್ಟ್ ಆಫೀಸ್ ಟೈಮ್ ಡಿಪಾಜಿಟ್ (TD) ಕೂಡ ಹೆಚ್ಚು ಜನಪ್ರಿಯವಾಗಿದೆ. ಟಿಡಿ ಖಾತೆ ಆರಂಭಿಸಿದರೆ, ನಿಗದಿತ ಅವಧಿಯ ನಂತರ ನಿಮ್ಮ ಠೇವಣಿ ಮೆಚ್ಯೂರಿಟಿ (Maturity) ಸಮಯದಲ್ಲಿ ಲಾಭದಾಯಕವಾಗಿರುತ್ತದೆ. ಈ ಪ್ಲಾನ್ ಜನರು ಹೆಚ್ಚಿನ ಲಾಭ ಪಡೆಯಲು ಸಹಾಯಕ.

₹2 ಲಕ್ಷ ಠೇವಣಿ ಮಾಡಿದರೆ ಎಷ್ಟು ಸಿಗುತ್ತೆ

ಪೋಸ್ಟ್ ಆಫೀಸ್ 2 ವರ್ಷದ ಟಿಡಿ ಪ್ಲಾನ್‌ನಲ್ಲಿ ಪ್ರಸ್ತುತ 7% ಬಡ್ಡಿದರ ನೀಡುತ್ತಿದೆ. ಈ ಪ್ಲಾನ್‌ನಲ್ಲಿ ನೀವು ₹2,00,000 ಠೇವಣಿ ಮಾಡಿದರೆ, 2 ವರ್ಷಗಳ ನಂತರ ನೀವು ₹2,29,776 ಪಡೆಯುವಿರಿ. ಇದರ ಅರ್ಥ, ನಿಮಗೆ ಬಡ್ಡಿಯಾಗಿ ₹29,776 ಹೆಚ್ಚುವರಿ ಸಿಗುತ್ತದೆ.

ಟಿಡಿ ಖಾತೆಯ ಪ್ರಮುಖ ಸೌಕರ್ಯಗಳು

ಪೋಸ್ಟ್ ಆಫೀಸ್ ಟಿಡಿ ಖಾತೆಯು ಕೇಂದ್ರ ಸರ್ಕಾರದ (Government) ನಿಯಂತ್ರಣದಲ್ಲಿದ್ದು, ಇದು ತುಂಬಾ ಸುರಕ್ಷಿತ. ಈ ಖಾತೆಯನ್ನು ದೇಶದ ಯಾವುದೇ ನಾಗರಿಕರು ತೆರೆಯಬಹುದು. ಕನಿಷ್ಠ ಠೇವಣಿ ಮೊತ್ತ ₹1,000 ಆಗಿದ್ದು, ಗರಿಷ್ಠ ಮಿತಿಯಿಲ್ಲ. ಖಾತೆ ತೆರೆಯಲು, ಪೋಸ್ಟ್ ಆಫೀಸ್‌ನಲ್ಲಿ ಒಂದು ಉಳಿತಾಯ ಖಾತೆ (Savings Account) ಇರಬೇಕು.

ಬ್ಯಾಂಕಿಗಿಂತ ಲಾಭದಾಯಕವೋ?

ಹೌದು! ಪೋಸ್ಟ್ ಆಫೀಸ್ ಟಿಡಿ ಖಾತೆ ಹೆಚ್ಚಿನ ಬಡ್ಡಿ ನೀಡುವುದರಿಂದ, ಇದು ಬ್ಯಾಂಕಿನ ಎಫ್‌ಡಿಗಿಂತ ಲಾಭದಾಯಕ. ಹೆಚ್ಚು ಭದ್ರತೆ ಮತ್ತು ಖಚಿತ ಲಾಭ ನೀಡುವ ಈ ಯೋಜನೆ ನಿಮ್ಮ ಉಳಿತಾಯದ ಭವಿಷ್ಯವನ್ನು ಬಲಪಡಿಸಬಹುದು.

Post Office Time Deposit with Safe Investment, Assured Returns

Related Stories