ಎಸ್‌ಬಿಐ ಕ್ರೆಡಿಟ್ ಕಾರ್ಡ್ ನ್ಯೂ ರೂಲ್ಸ್: ಜುಲೈ 15ರಿಂದ ಭಾರೀ ಬದಲಾವಣೆ
ಜುಲೈ 15 ರಿಂದ ಎಸ್‌ಬಿಐ ಕಾರ್ಡ್‌ನಲ್ಲಿ ಹೊಸ ನಿಯಮ ಜಾರಿಯಾಗಲಿದ್ದು, ಮಿನಿಮಮ್ ಪೇಮೆಂಟ್, ವಿಮಾ ಸೌಲಭ್ಯಗಳಲ್ಲಿ ಬದಲಾವಣೆಗಳು ಆಗಲಿವೆ. ಸಂಪೂರ್ಣ ಬಿಲ್ಲು ಪಾವತಿಸದಿರುವ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ಭಾರವಾಗಲಿದೆ.
Publisher: Kannada News Today (Digital Media)
- ಜುಲೈ 15ರಿಂದ ಎಸ್‌ಬಿಐ ಕಾರ್ಡ್ ಮಿನಿಮಮ್ ಪೇಮೆಂಟ್ ನಿಯಮ ಬದಲಾಗಲಿದೆ
- ಉಚಿತ ವಿಮಾ ಕವರ್ ಸೌಲಭ್ಯವೂ ಸಂಪೂರ್ಣವಾಗಿ ರದ್ದು ಮಾಡಲಾಗುತ್ತಿದೆ
- ಗ್ರಾಹಕರು ಸಂಪೂರ್ಣ ಬಿಲ್ ಪಾವತಿಸದಿದ್ದರೆ ಹೆಚ್ಚಿನ ವೆಚ್ಚವಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Credit Card) ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಜುಲೈ 15 ರಿಂದ ಹೊಸ ನಿಯಮಗಳು ಜಾರಿಯಾಗಲಿವೆ. ಕ್ರೆಡಿಟ್ ಕಾರ್ಡ್ ಬಿಲ್‌ಗಳ (credit card bill) ಮಿನಿಮಮ್ ಪೇಮೆಂಟ್‌ನಲ್ಲಿ (minimum payment) ಪ್ರಮುಖ ಬದಲಾವಣೆ ಮಾಡಲಾಗಿದ್ದು, ಇದರಿಂದ ಗ್ರಾಹಕರ ಜವಾಬ್ದಾರಿಗಳು ಹೆಚ್ಚಾಗುತ್ತವೆ.
ಸಂಪೂರ್ಣ ಬಿಲ್ಲು ಪಾವತಿಸದಿರುವ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ಭಾರವಾಗಲಿದೆ.
ಇದನ್ನೂ ಓದಿ: ಹಿರಿಯ ನಾಗರಿಕರಿಗೆ 5 ಲಕ್ಷ ವಿಮೆ, ಮೋದಿಜಿ ಘೋಷಣೆ! ಅಷ್ಟಕ್ಕೂ ಏನಿದು ಯೋಜನೆ
ಹೊಸ ನಿಯಮ ಏನು?:
ಈ ಹೊಸ ನಿಯಮದಂತೆ, ಇನ್ನುಮುಂದೆ ಮಿನಿಮಮ್ ಪೇಮೆಂಟ್‌ನಲ್ಲೇ ಮೊದಲೇ ಬಾಕಿಯ ಬಿಲ್ ಮೊತ್ತದ 2% ಜೊತೆಗೆ ಶೇ.100ರಷ್ಟು GST, ಇಎಂಐ (EMI) ಬ್ಯಾಲೆನ್ಸ್, ಫೀಸ್, ಫೈನಾನ್ಸ್ ಚಾರ್ಜ್ ಮತ್ತು ಓವರ್ ಲಿಮಿಟ್ ಮೊತ್ತವನ್ನೂ ಸೇರಿಸಲಾಗುತ್ತದೆ. ಇದರಿಂದ ಮಿನಿಮಮ್ ಪೇಮೆಂಟ್ ಪಾವತಿಸಿದರೂ ನಿಮ್ಮ ಮೇಲಿನ ಬಡ್ಡಿ (interest charges) ಕಡಿಮೆಯಾಗುವುದಿಲ್ಲ.
ವಿಮಾನ ವಿಮೆ ಸೌಲಭ್ಯ ರದ್ದು:
ಎಸ್‌ಬಿಐ ಕಾರ್ಡ್ ಎಲೈಟ್, ಮೈಲ್ಸ್ ಎಲೈಟ್ ಮತ್ತು ಪ್ರೈಮ್ ಕಾರ್ಡ್‌ಗಳಿಗೆ ಲಭ್ಯವಿದ್ದ ಉಚಿತ ವಿಮಾನ ಅಪಘಾತ ವಿಮೆ (Air Accident Insurance) ಜುಲೈ 15ರಿಂದ ಸ್ಥಗಿತಗೊಳ್ಳಲಿದೆ. ಇದರಡಿ 1 ಕೋಟಿ ರೂ. ವರೆಗೆ ಇದ್ದ ವಿಮೆ ಕವರ್ ಹಾಗೂ ಪ್ರೈಮ್/ಪಲ್ಸ್ ಕಾರ್ಡ್‌ಗಳಿಗೆ ಲಭ್ಯವಿದ್ದ ₹50 ಲಕ್ಷದ ವಿಮೆ ಇನ್ನು ಮುಂದೆ ಲಭ್ಯವಿರುವುದಿಲ್ಲ.
ಇದನ್ನೂ ಓದಿ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಪ್ರೈಸ್! ಗೂಗಲ್‌ನಲ್ಲೂ ಟ್ರೆಂಡಿಂಗ್‌ನಲ್ಲಿದೆ ಈ ಸುದ್ದಿ
ಪೂರ ಪಾವತಿ ಮಾತ್ರ ಸೂಕ್ತ ಆಯ್ಕೆ:
ಬ್ಯಾಂಕ್ ಸೂಚಿಸಿದಂತೆ, ಗ್ರಾಹಕರು ಸಂಪೂರ್ಣ ಬಿಲ್ ಪಾವತಿಸುವುದೇ ಉತ್ತಮ ಆಯ್ಕೆ. ಕಾರಣ, ಮಿನಿಮಮ್ ಪೇಮೆಂಟ್ ಪಾವತಿಸಿದರೂ ಬಾಕಿ ಮೊತ್ತಕ್ಕೆ ಬಡ್ಡಿ ನೇರವಾಗಿ ವಿಧವಾಗುತ್ತದೆಯೇ ಹೊರತು, ಮುಂದಿನ ತಿಂಗಳಲ್ಲಿ ಒತ್ತಡ ಹೆಚ್ಚಾಗಬಹುದು.
ಇದನ್ನೂ ಓದಿ: ಬ್ಯಾಂಕ್ ಖಾತೆಯಲ್ಲಿ ₹10 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟವರಿಗೆ ಫಜೀತಿ! ಹೊಸ ರೂಲ್ಸ್
ಈ ಬದಲಾವಣೆಗಳು ಪ್ರಮುಖವಾಗಿ EMI ಯಾರು ತೆಗೆದುಕೊಂಡಿದ್ದಾರೆ, ಬಾಕಿ ಬಿಲ್ ಪಾವತಿಸುತ್ತಿರುವವರು, ಅಥವಾ ಉಚಿತ ವಿಮೆ ಸೌಲಭ್ಯಕ್ಕೆ ಅವಲಂಬಿತರಾಗಿರುವ ಗ್ರಾಹಕರಿಗೆ ದೊಡ್ಡ ಬದಲಾವಣೆ ಎನ್ನಬಹುದು. ಅಂತಹವರು ತಕ್ಷಣವೇ ತಮ್ಮ ಬಿಲ್ ಪಾವತಿ ತಂತ್ರ ಮತ್ತು ವಿಮೆ ಆಯ್ಕೆಯನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇರಿಸಿಕೊಳ್ಳುವುದು ಸೂಕ್ತ.
SBI Credit Card New Rules from July 15
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿ, ಚಿನ್ನದ ಬೆಲೆ (Gold Price), ಬ್ಯಾಂಕ್ ಲೋನ್ (Bank Loan) ಅಪ್ಡೇಟ್‌ಗಳು, ಪರ್ಸನಲ್ ಲೋನ್ (Personal Loan), ಫೈನಾನ್ಸ್ ಟಿಪ್ಸ್ (Finance Tips), ಮ್ಯೂಚುಯಲ್ ಫಂಡ್ಸ್ (Mutual Funds), ಇನ್ಸೂರೆನ್ಸ್ (Insurance) ಸುದ್ದಿಗಳಿಗಾಗಿ ಕನ್ನಡ ನ್ಯೂಸ್ ಟುಡೇ ತಪ್ಪದೆ ಭೇಟಿ ನೀಡಿ.