ಜುಲೈ 15ರಿಂದ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ನಿಯಮ ಬದಲಾವಣೆ! ಹೊಸ ರೂಲ್ಸ್

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಜುಲೈ 15ರಿಂದ ಹೊಸ ನಿಯಮಗಳು ಜಾರಿಯಾಗುತ್ತಿದ್ದು, ಕನಿಷ್ಠ ಪಾವತಿ ಹಣ, ವಿಮಾ ಸೌಲಭ್ಯ ಹಾಗೂ ಪಾವತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

  • ಕನಿಷ್ಠ ಪಾವತಿ (minimum amount due) ಇನ್ನು ಹೆಚ್ಚಾಗಲಿದೆ
  • ಅಪಘಾತ ವಿಮೆ ಸೌಲಭ್ಯ ತೆಗೆದು ಹಾಕಲಾಗಿದೆ
  • ಪಾವತಿ ಸೆಟ್ಲ್ಮೆಂಟ್ ಪ್ರಕ್ರಿಯೆಗೂ ಬದಲಾವಣೆ ಜಾರಿಯಲ್ಲಿ

ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI Credit Card) ಬಳಕೆದಾರರಿಗೆ ಜುಲೈ 15ರಿಂದ ಹೊಸ ನಿಯಮಗಳು ಜಾರಿಯಾಗಲಿದೆ. ಈ ನಿಯಮಗಳು ನಿಮ್ಮ ಕಾರ್ಡ್ ಬಳಕೆ ಮತ್ತು ಬಿಲ್ ಪಾವತಿಯಲ್ಲಿ ಸ್ಪಷ್ಟ ವ್ಯತ್ಯಾಸ ತರುವಂತಿವೆ.

ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಕನಿಷ್ಠ ಪಾವತಿ ಮೊತ್ತ (Minimum Amount Due – MAD) ವನ್ನು ಸಂಪೂರ್ಣವಾಗಿ ಬದಲಾಗಿಸಲಾಗಿದ್ದು, ಅದು ಈ ರೀತಿ ಲೆಕ್ಕಿಸಲಾಗುತ್ತದೆ:

100% ಜಿಎಸ್‌ಟಿ (GST), 100% ಇಎಂಐ (EMI), 100% ಶುಲ್ಕಗಳು, 100% ಬಡ್ಡಿ, ಓವರ್‌ಲಿಮಿಟ್ ಮೊತ್ತ ಹಾಗೂ ಉಳಿದ ಮೊತ್ತದ 2%.

ಇದನ್ನೂ ಓದಿ: ಇವತ್ತಿನ ಚಿನ್ನದ ಬೆಲೆ ಪ್ರಕಾರ 10 ಗ್ರಾಂ ಎಷ್ಟಾಗುತ್ತೆ ಗೊತ್ತಾ! ಇಲ್ಲಿದೆ ಬೆಂಗಳೂರು ಲೆಕ್ಕಾಚಾರ

ಪಾವತಿ ಸೆಟ್ಲ್ಮೆಂಟ್ (payment settlement) ಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ನೀವು ಪಾವತಿಸುವ ಮೊತ್ತವನ್ನು ಈ ಕ್ರಮದಲ್ಲಿ ಲೆಕ್ಕ ಹಾಕಲಾಗುತ್ತದೆ –

ಮೊದಲು ಜಿಎಸ್‌ಟಿ, ನಂತರ ಇಎಂಐ, ನಂತರ ಶುಲ್ಕಗಳು, ನಂತರ ಬಡ್ಡಿ, ನಂತರ ಬಾಕಿ ಬದಲಾವಣೆ, ಬಳಿಕ ಖರ್ಚುಗಳು ಹಾಗೂ ಕೊನೆಗೆ ನಗದು ಹಣಕಾಸು (cash advance). ಇದರಿಂದಾಗಿ, ಬಡ್ಡಿ ಪಾವತಿಸದೇ ಉಳಿದ ಮೊತ್ತದಲ್ಲಿ ಖರ್ಚು ಮಾಡಿದರೆ interest ಜಾಸ್ತಿಯಾಗಲಿದೆ.

ಇದನ್ನೂ ಓದಿ: ಯಾವುದೇ ಬ್ಯಾಂಕ್‌ನಲ್ಲಿ ಸಾಲ ಇದ್ದೋರಿಗೆ ಬಿಗ್ ರಿಲೀಫ್! ಬೆಳ್ಳಂಬೆಳಗ್ಗೆ ಬಿಗ್ ಅಪ್ಡೇಟ್

Credit Card New Rules

ಅದೇ ರೀತಿ, ಬಹುಮಾನವಾಗಿ ಸಿಗುತ್ತಿದ್ದ ₹50 ಲಕ್ಷದಿಂದ ₹1 ಕೋಟಿ ವರೆಗೆ ಇರುವ ವಿಮೆ ಸೌಲಭ್ಯವನ್ನೂ (air accident insurance cover) ತೆಗೆದು ಹಾಕಲಾಗಿದೆ. ಕೆಲವು ಪ್ರಮುಖ ಕಾರ್ಡ್‌ಗಳಲ್ಲಿ, ಈ ವಿಮಾ ಯೋಜನೆಗಳನ್ನು ಆಗಸ್ಟ್ 11 ರಿಂದ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.

ಉದಾಹರಣೆಗೆ, SBI Elite, Prime, Pulse, IRCTC ಕಾರ್ಡ್‌ಗಳಲ್ಲಿ ಈ ವಿಮಾ ಸೌಲಭ್ಯ ಇತ್ತಿಚೆಗೆ ತೆಗೆದು ಹಾಕಲಾಗಿದೆ. ಆಗಸ್ಟ್ 11ರಿಂದ ನೀವು ಬಳಸುತ್ತಿರುವ UCO Bank SBI Card ELITE, Central Bank ELITE, KVB Signature Card ಸೇರಿ ಹಲವಾರು ಎಲಿಟ್ ಕಾರ್ಡ್‌ಗಳ ವಿಮೆ ಸೌಲಭ್ಯ ಬರುವುದಿಲ್ಲ.

ಇದನ್ನೂ ಓದಿ: ನೀವು ನಂಬೋಲ್ಲ, ಈ ಲ್ಯಾಪ್‌ಟಾಪ್ ಬೆಲೆ ಬರಿ ₹13000 ಮಾತ್ರ! ಬಂಪರ್ ಡೀಲ್

ಈ ಹಿಂದೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕೂಡ Club Vistara ಹಾಗೂ Etihad Guest ಕಾರ್ಡ್‌ಗಳ ಸೌಲಭ್ಯಗಳು ತೆಗೆದು ಹಾಕಲಾಗಿದೆ. ಏಪ್ರಿಲ್ 1ರಿಂದ Club Vistara ಕಾರ್ಡ್‌ಗಳಲ್ಲಿ ಉಚಿತ ಟಿಕೆಟ್ ಸೌಲಭ್ಯವನ್ನೂ ತೆಗೆದು ಹಾಕಲಾಗಿದೆ.

ಇಂತಹ ಮಹತ್ವದ ಬದಲಾವಣೆಗಳ ಬೆನ್ನಲ್ಲೆ, ನೀವು ಬಳಸುತ್ತಿರುವ ಕಾರ್ಡ್‌ನ ಲಾಭಗಳು ಹಾಗೂ ಶುಲ್ಕಗಳನ್ನು ಪುನಃ ಪರಿಶೀಲನೆ ಮಾಡುವುದು ಉತ್ತಮ. ಅಗತ್ಯವಿದ್ದರೆ ಹೊಸ ಕಾರ್ಡ್‌ಗಳಿಗೆ ಅಪ್‌ಗ್ರೇಡ್ ಮಾಡುವುದು ಅಥವಾ ಬದಲಾಗುವುದು ಅನಿವಾರ್ಯವಾಗಬಹುದು.

SBI Credit Card Rules to Change from July 15, know the Key Updates

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories