ಈಗಿನ ಕಾಲದಲ್ಲಿ ಜನರು ಹಣ ಉಳಿಸಿ, ಭವಿಷ್ಯವನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಕೆಲಸ ಮಾಡುತ್ತಿದ್ದ ಸಮಯದಲ್ಲೇ ಉಳಿತಾಯ (Money Savings) ಶುರು ಮಾಡಿದರೆ, ತಮ್ಮ ಭವಿಷ್ಯ, ತಮ್ಮ ಮಕ್ಕಳ ಭವಿಷ್ಯ ಎಲ್ಲವೂ ಸುರಕ್ಷಿತವಾಗಿ ಇರುತ್ತದೆ ಎನ್ನುವುದನ್ನು ಈಗಿನವರು ಅರ್ಥ ಮಾಡಿಕೊಂಡಿದ್ದಾರೆ.
ಹಾಗಾಗಿ ಹೂಡಿಕೆ (Money Investment), ಉಳಿತಾಯ ಇವುಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ರೀತಿ ಹೂಡಿಕೆ ಮಾಡುವುದಕ್ಕೆ ಬ್ಯಾಂಕ್ ನಲ್ಲಿ ಫಿಕ್ಸ್ಡ್ ಡೆಪಾಸಿಟ್ (Fixed Deposit) ಒಂದು ಉತ್ತಮ ಆಯ್ಕೆ ಎಂದು ಹೇಳಬಹುದು. ಹೌದು ಸ್ನೇಹಿತರೇ, ಸರ್ಕಾರದ ಮಾನ್ಯತೆ ಪಡೆದಿರುವ ಬ್ಯಾಂಕ್ ಗಳಲ್ಲಿ ನೀವು FD ಮಾಡಿದರೆ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ.
ಜೊತೆಗೆ ನಿಮಗೆ ಒಳ್ಳೆಗ ಆದಾಯ ಕೂಡ ಸಿಗುತ್ತದೆ. ಹಾಗಾಗಿ ಹೆಚ್ಚಿನ ಜನರು ಈ ಸ್ಥಿರ ಠೇವಣಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. FD ಮಾಡುವವರಿಗೆ ಸರ್ಕಾರಿ ಬ್ಯಾಂಕ್ ಇಂದ ಒಳ್ಳೆಯ ಬಡ್ಡಿ ಸಹ ಸಿಗುತ್ತದೆ. ಒಂದು ವೇಳೆ ನೀವು ಇದೇ ರೀತಿ FD ಮಾಡಬೇಕು ಎಂದುಕೊಂಡಿದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) WeCare ಯೋಜನೆ ಒಂದು ಒಳ್ಳೆಯ ಆಯ್ಕೆ ಆಗಿದೆ.
ಈ ಯೋಜನೆ ಶುರು ಆಗಿರುವುದು ಎಲ್ಲಾ ಹಿರಿಯ ಗ್ರಾಹಕರಿಗಾಗಿ, ಹಿರಿಯರು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಅವರ ಹಣ ಸುರಕ್ಷಿತವಾಗಿ ಇರುತ್ತದೆ. ಹಾಗೆಯೇ ಹಿರಿಯರಿಗೆ ಹೆಚ್ಚು ಬಡ್ಡಿ ಹಣ ಕೂಡ ಸಿಗುತ್ತದೆ. ಈ ಯೋಜೆನೆಯಲ್ಲಿ ಸೀನಿಯರ್ ಸಿಟಿಜನ್ (Senior Citizen Scheme) ಗಳ ಹಣ ಸುರಕ್ಷಿತವಾಗಿ ಇರುತ್ತದೆ ಜೊತೆಗೆ ಹಣ ಡಬಲ್ ಆಗುವ ವಿಶೇಷ ಯೋಜನೆ ಸಹ ಆಗಿದೆ.
SBI ನ ಅಧಿಕೃತ ವೆಬ್ಸೈಟ್ ನಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿ ಇದೆ. WeCare ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣಕ್ಕೆ 7.50% ಬಡ್ಡಿ ಸಿಗುತ್ತದೆ. ಈ ಯೋಜನೆಯ ಮೆಚ್ಯುರಿಟಿ ಅವಧಿ 5 ವರ್ಷಗಳು ಮತ್ತು 10 ವರ್ಷಗಳಾಗಿದೆ. ಈ ಯೋಜನೆಯನ್ನು ಶುರು ಮಾಡಲು, ನೀವು SBI ನ ಯೋನೋ ಅಪ್ಲಿಕೇಶನ್ ಅಥವಾ SBI ವೆಬ್ಸೈಟ್ ಮೂಲಕ ಆನ್ಲೈನ್ ಹೂಡಿಕೆ ಮಾಡಬಹುದು.
ಅಥವಾ ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ WeCare ಯೋಜನೆ ಶುರು ಮಾಡಬಹುದು. ಈ ಯೋಜನೆಯಲ್ಲಿ ಬಡ್ಡಿ ಹೇಗೆ ಬರುತ್ತದೆ ಎಂದರೆ, ಮೂರು ತಿಂಗಳಿಗೆ, ಆರು ತಿಂಗಳಿಗೆ ಮತ್ತು ಒಂದು ವರ್ಷಕ್ಕೆ ಬಡ್ಡಿ ಬರುತ್ತದೆ. WeCare ನಲ್ಲಿ TDS ಕಟ್ ಮಾಡಿದ ನಂತರ ಈ FD ಮೇಲೆ ಬಡ್ಡಿ ಪಾವತಿ ಮಾಡುತ್ತಾರೆ. ಈ FD ಗಳ ಮೇಲೆ 6 ದಿನಗಳಿಂದ 7 ವರ್ಷಗಳವರೆಗು 3.50% ಇಂದ 7.50% ವರೆಗು ಬಡ್ಡಿ ಸಿಗುತ್ತದೆ.
WeCare ಯೋಜನೆಯು ನಿಮ್ಮ ಹಣ ಡಬಲ್ ಆಗುವುದಕ್ಕೆ ಉತ್ತಮ ಆಯ್ಕೆ, ಇದಕ್ಕೊಂದು ಉದಾಹರಣೆ ಕೊಡುವುದಾದರೆ. ಒಂದು ವೇಳೆ ನೀವು 5ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 10 ವರ್ಷಗಳ ನಂತರವೂ ಡಬಲ್ ಹಣ ಪಡೆಯುತ್ತೀರಿ. ಈ ಸ್ಕೀಮ್ ನಲ್ಲಿ 10 ವರ್ಷಕ್ಕೆ 6.50% ಬಡ್ಡಿ ಬರುತ್ತದೆ. ಹಾಗಾಗಿ ನೀವು ಮೆಚ್ಯುರಿಟಿ ನಂತರ 10ಲಕ್ಷಕ್ಕಿಂತ ಹೆಚ್ಚು ಹಣ ಪಡೆಯುತ್ತೀರಿ.
ಈ WeCare ಯೋಜನೆಯನ್ನು ಕೋವಿಡ್ ವೇಳೆ ಹಿರಿಯ ನಾಗರೀಕರಿಗೆ ಸಹಾಯ ಆಗಲಿ ಎಂದು ಶುರು ಮಾಡಲಾಯಿತು. ಇದೀಗ ಈ ಯೋಜನೆಯನ್ನು 2023ರ ಸೆಪ್ಟೆಂಬರ್ 30ರವರೆಗು ವಿಸ್ತರಿಸಲಾಗಿದೆ. ಹಿರಿಯ ನಾಗರೀಕರು ಹೆಚ್ಚು ಬಡ್ಡಿ ಗಳಿಸಲು ಸೂಕ್ತವಾದ ಯೋಜನೆ ಇದು.
Sbi investment scheme where your money will get doubled
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.