ಎಸ್‌ಬಿಐ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಉದ್ಯೋಗಾವಕಾಶ! ಮಾರ್ಚ್ 15 ರೊಳಗೆ ಅರ್ಜಿ ಹಾಕಿ
SBI Jobs: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ವ್ಯವಸ್ಥೆ ಮತ್ತು ಇಂಟರ್ನಲ್ ಆಡಿಟ್ ವಿಭಾಗಗಳಲ್ಲಿ 116 ಸ್ಪೆಷಲಿಸ್ಟ್ ಕ್ಯಾಡರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾರ್ಚ್ 15, 2026ರೊಳಗೆ ಅರ್ಜಿ ಸಲ್ಲಿಸಬಹುದು.

SBI Jobs: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಇದೀಗ ವಿವಿಧ ಸ್ಪೆಷಲಿಸ್ಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ಒಟ್ಟು 116 ಹುದ್ದೆಗಳನ್ನು ಭರ್ತಿ ಮಾಡಲು ಬ್ಯಾಂಕ್ ಮುಂದಾಗಿದೆ.
ಈ ಹುದ್ದೆಗಳು ಮುಖ್ಯವಾಗಿ ಮಾಹಿತಿ ವ್ಯವಸ್ಥೆ (Information Systems) ಮತ್ತು ಇಂಟರ್ನಲ್ ಆಡಿಟ್ ವಿಭಾಗಗಳಿಗೆ ಸಂಬಂಧಿಸಿದವು. ಪ್ರಕಟಿಸಿರುವ ಹುದ್ದೆಗಳ ಪೈಕಿ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ (IS Audit) – 12, ಡೆಪ್ಯುಟಿ ಮ್ಯಾನೇಜರ್ (IS Audit) – 43, ಮತ್ತು ಡೆಪ್ಯುಟಿ ಮ್ಯಾನೇಜರ್ (Internal Audit – CA) – 61 ಹುದ್ದೆಗಳು ಸೇರಿವೆ.
ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರಗಳಲ್ಲಿ BE, BTech (IT, CS, Electronics) ಅಥವಾ CA (Chartered Accountant) ಪದವಿ ಪಡೆದಿರಬೇಕು. ಜೊತೆಗೆ ಪ್ರಕಟಣೆಯಲ್ಲಿ ಸೂಚಿಸಿರುವ ಅನುಭವವೂ ಅಗತ್ಯವಾಗಿದೆ. CISA, CISSP, DISA ಮುಂತಾದ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ ಹುದ್ದೆ ಪ್ರಕಾರ ನಿಗದಿಯಾಗಿದೆ. ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಹುದ್ದೆಗೆ 27 ರಿಂದ 35 ವರ್ಷ ವಯಸ್ಸಿನವರು ಅರ್ಜಿ ಹಾಕಬಹುದು. ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ 21 ರಿಂದ 35 ವರ್ಷವರೆಗೆ ವಯೋಮಿತಿ ನಿಗದಿಯಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಸಡಿಲಿಕೆ ಲಭ್ಯವಿದೆ.
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 15 ಮಾರ್ಚ್ 2026ರೊಳಗೆ ಅರ್ಜಿ ಸಲ್ಲಿಸಬೇಕು. ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕವಿದ್ದು, ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಈ ನೇಮಕಾತಿಗೆ ಪ್ರತ್ಯೇಕ ಲಿಖಿತ ಪರೀಕ್ಷೆ ನಡೆಸದೇ, ಶೈಕ್ಷಣಿಕ ಅರ್ಹತೆ ಹಾಗೂ ಅನುಭವದ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸುಮಾರು ₹64,820 ರಿಂದ ₹93,960ವರೆಗೆ ಸಂಬಳ ನೀಡಲಾಗುತ್ತದೆ. ನೇಮಕಗೊಂಡವರು ಮುಖ್ಯವಾಗಿ ಹೈದರಾಬಾದ್ ಮತ್ತು ಮುಂಬೈ ಶಾಖೆಗಳಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ.



