ಎಸ್‌ಬಿಐನಿಂದ 3 ಲಕ್ಷ ಪರ್ಸನಲ್ ಲೋನ್ ತಗೊಂಡ್ರೆ ತಿಂಗಳಿಗೆ ಇಎಂಐ ಎಷ್ಟು
SBI Personal Loan: ನೀವು SBI ಪರ್ಸನಲ್ ಲೋನ್ ₹3 ಲಕ್ಷ ವನ್ನು 3 ವರ್ಷ ಅವಧಿಗೆ ತೆಗೆದುಕೊಂಡರೆ, ಅದರ EMI ಎಷ್ಟು ಗೊತ್ತಾ? ಇಲ್ಲಿದೆ ಲೆಕ್ಕಾಚಾರ
- ಪರ್ಸನಲ್ ಲೋನ್ (Personal Loan) ಲೆಕ್ಕಾಚಾರ ಇಲ್ಲಿದೆ
- SBI ಪರ್ಸನಲ್ ಲೋನ್ ತಗೆದುಕೊಳ್ಳಲು ಬೇಕಾದ ಅರ್ಹತೆಗಳೇನು?
- ಲೋನ್ ತಗೆದುಕೊಳ್ಳುವ, ಮೊದಲು ಇವೆಲ್ಲಾ ತಿಳಿದುಕೊಳ್ಳಿ!
SBI Personal Loan: ಅನೇಕ ಮಂದಿ ಹಣಕಾಸು ತೊಂದರೆಯಿಂದ ಕಷ್ಟಪಡುತ್ತಾರೆ. ಬೇಕಾದಾಗ ಹಣ ಸಿಗೋದು ಕಷ್ಟ. ಸ್ನೇಹಿತರನ್ನು, ಕುಟುಂಬದವರನ್ನು ಕೇಳಿದರೂ ಪ್ರಯೋಜನವಾಗುವುದಿಲ್ಲ.
ಹಾಗಿದ್ದರೆ ಏನು ಮಾಡಬೇಕು? ಈ ಸಮಯದಲ್ಲಿ ಬ್ಯಾಂಕ್ (Bank) ಪರ್ಸನಲ್ ಲೋನ್ ಅವಲಂಬಿಸಬೇಕು. SBI ಸೇರಿದಂತೆ ಹಲವಾರು ಬ್ಯಾಂಕ್‌ಗಳು ವೇಗವಾಗಿ ಸಾಲ ನೀಡುತ್ತವೆ. ಆದರೆ, ಲೋನ್ (Loan) ತಗೆದುಕೊಳ್ಳೋದು ಎಷ್ಟು ಸುಲಭವೋ, ಅದನ್ನು ಹಿಂದಿರುಗಿಸುವುದು ಅಷ್ಟೇ ದೊಡ್ಡ ಜವಾಬ್ದಾರಿ!
SBI ಪರ್ಸನಲ್ ಲೋನ್ ಪಡೆಯೋದು ಹೇಗೆ?
21 ರಿಂದ 58 ವರ್ಷ ವಯಸ್ಸಿನ ಉದ್ಯೋಗಿಗಳು SBI ಪರ್ಸನಲ್ ಲೋನ್‌ಗೆ ಅರ್ಜಿ ಸಲ್ಲಿಸಬಹುದು. ಸ್ವಯಂ ಉದ್ಯೋಗಿಗಳಿಗೆ ಈ ವಯೋಮಿತಿ 65 ವರ್ಷ ಆಗಿರುತ್ತದೆ. ಅರ್ಹತಾ ಶರತ್ತುಗಳಂತೆ, ಕನಿಷ್ಠ ₹15,000 ವೇತನ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು. ಜೊತೆಗೆ ಕನಿಷ್ಠ ಒಂದು ವರ್ಷ ಉದ್ಯೋಗ ಅನುಭವ ಹೊಂದಿರಬೇಕು.
ಹಣಕಾಸು ದಾಖಲಾತಿ ಸಲ್ಲಿಸುವಾಗ, ಆಧಾರ್ ಕಾರ್ಡ್ (Aadhar Card), ಪ್ಯಾನ್ (PAN), ಡ್ರೈವಿಂಗ್ ಲೈಸೆನ್ಸ್ (Driving License), ವಿಳಾಸ ದೃಢೀಕರಣದ ದಾಖಲೆಗಳು, ಬ್ಯಾಂಕ್ ಸ್ಟೇಟ್ಮೆಂಟ್ ಮುಂತಾದ ದಾಖಲೆಗಳು ಅಗತ್ಯ.
₹3 ಲಕ್ಷ SBI ಲೋನ್ EMI ಎಷ್ಟು?
ನೀವು SBI ಪರ್ಸನಲ್ ಲೋನ್ ₹3 ಲಕ್ಷ ವನ್ನು 3 ವರ್ಷ ಅವಧಿಗೆ ತೆಗೆದುಕೊಂಡರೆ, ಅದರ EMI ಎಷ್ಟು ಗೊತ್ತಾ? ಇಲ್ಲಿದೆ ಲೆಕ್ಕ:
SBI ಪ್ರಸ್ತುತ 11.45% ಬಡ್ಡಿದರ ವಸೂಲಿ ಮಾಡುತ್ತದೆ. ಈ ಪ್ರಮಾಣದಲ್ಲಿ ಲೆಕ್ಕ ಹಾಕಿದರೆ, ನಿಮ್ಮ ಪ್ರತಿ ತಿಂಗಳ EMI ₹9,884 ಆಗಿರುತ್ತದೆ. ಈ ಮೂರು ವರ್ಷಗಳ ಅವಧಿಯಲ್ಲಿ, ನೀವು ಒಟ್ಟು ₹55,884 ಬಡ್ಡಿ ಪಾವತಿಸಬೇಕು. ಅಂದರೆ ನೀವು ₹3,55,884 ಬ್ಯಾಂಕಿಗೆ ಹಿಂತಿರುಗಿಸಬೇಕಾಗುತ್ತದೆ.
ಬಡ್ಡಿದರ ತಗ್ಗಿಸಬಹುದಾ?
ಹೌದು! ಕ್ರೆಡಿಟ್ ಸ್ಕೋರ್ (Credit Score), ಉದ್ಯೋಗ ಸ್ಥಿರತೆ, ಆದಾಯ ಮತ್ತು ಬ್ಯಾಂಕಿನೊಂದಿಗೆ ಇರುವ ಸಂಬಂಧ ಇವುಗಳ ಆಧಾರದ ಮೇಲೆ ನಿಮ್ಮ ಬಡ್ಡಿದರದಲ್ಲಿ ಬದಲಾವಣೆ ಸಾಧ್ಯ. ಕೆಲವೊಮ್ಮೆ ಉತ್ತಮ ಚರ್ಚೆ ನಡೆಸಿದರೆ ತಗ್ಗಿಸಬಹುದಾದ ಬಡ್ಡಿದರ ಪ್ರೇಜನವಾಗಬಹುದು. ಆದ್ದರಿಂದ, ಲೋನ್ ತೆಗೆದುಕೊಳ್ಳುವ ಮುಂಚೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ.
ಹಣಕಾಸು ತೊಂದರೆ ಬಂದಾಗ ಪರ್ಸನಲ್ ಲೋನ್ ಸಹಾಯ ಆಗಬಹುದು. ಆದರೆ, EMI ಪಾವತಿಸಲು ಸಾಧ್ಯವಾಗದಿದ್ದರೆ ದೊಡ್ಡ ಸಮಸ್ಯೆಯಾಗಬಹುದು! ಆದ್ದರಿಂದ, ಲೋನ್ ತಗೆದುಕೊಳ್ಳುವ ಮುಂಚೆ ಯೋಚಿಸಿ.
SBI Personal Loan, EMI Calculation for 3 Lakh Loan