ಈ ಬ್ಯಾಂಕ್ ಗಳಲ್ಲಿ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಸಿಗುತ್ತೆ 9% ಗಿಂತ ಹೆಚ್ಚಿನ ಬಡ್ಡಿ, ಇಂದೇ ಅರ್ಜಿ ಸಲ್ಲಿಸಿ

Fixed Deposit : ನಿಮ್ಮ ಹಣಕ್ಕೆ ಉತ್ತಮವಾದ ಬಡ್ಡಿದರ (Interest Rate) ಸಿಗಬೇಕು ಎಂದರೆ ಯಾವ ಬ್ಯಾಂಕ್ ನಲ್ಲಿ ಬಡ್ಡಿದರ ಹೇಗಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ.

Fixed Deposit : ಭವಿಷ್ಯ ಚೆನ್ನಾಗಿರಬೇಕು ಎಂದು ಹೆಚ್ಚಿನ ಜನರು ಬ್ಯಾಂಕ್ ಗಳಲ್ಲಿ ಹೂಡಿಕೆ (Bank Investment) ಮಾಡುವುದನ್ನು ಬಯಸುತ್ತಾರೆ. ನಿಮ್ಮ ಹಣಕ್ಕೆ ಉತ್ತಮವಾದ ಬಡ್ಡಿದರ (Interest Rate) ಸಿಗಬೇಕು ಎಂದರೆ ಯಾವ ಬ್ಯಾಂಕ್ ನಲ್ಲಿ ಬಡ್ಡಿದರ ಹೇಗಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ.

ಎಲ್ಲಿ ಹೆಚ್ಚಿನ ಬಡ್ಡಿದರ, ಎಲ್ಲಿ ಕಡಿಮೆ ಬಡ್ಡಿದರ ಇದೆ ಎಂದು ಗೊತ್ತಾದರೆ, ಆಗ ನೀವು ಯಾವ ಉತ್ತಮವಾದ ಬಡ್ಡಿದರ ಇರುವ ಬ್ಯಾಂಕ್ ನಲ್ಲಿ FD ಮಾಡಬಹುದು. ಹೀಗೆ ಒಳ್ಳೆಯ ಬಡ್ಡಿದರ ಯಾವ ಬ್ಯಾಂಕ್ ಗಳಲ್ಲಿ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಚಿನ್ನದ ಬೆಲೆ ಭಾರೀ ಇಳಿಕೆ, ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಚಿನ್ನದ ಬೆಲೆ

ಈ ಬ್ಯಾಂಕ್ ಗಳಲ್ಲಿ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಸಿಗುತ್ತೆ 9% ಗಿಂತ ಹೆಚ್ಚಿನ ಬಡ್ಡಿ, ಇಂದೇ ಅರ್ಜಿ ಸಲ್ಲಿಸಿ - Kannada News

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Unity Small Finance Bank) :- ಈ ಬ್ಯಾಂಕ್ ನಲ್ಲಿ 51 ದಿನಗಳು, 181 ದಿನಗಳು ಮತ್ತು 201 ದಿನಗಳಿಗೆ ಮೆಚ್ಯುರ್ ಅಗುವಂಥ ಸಾಕಷ್ಟು FD ಯೋಜನೆಗಗಳಿವೆ. ಸೀನಿಯರ್ ಸಿಟಿಜನ್ ಗಳು ಇದರಲ್ಲಿ ಹೂಡಿಕೆ ಮಾಡಿದರೆ 9.25% ಬಡ್ಡಿ ಸಿಗುತ್ತದೆ. ಹಾಗೆಯೇ 1001 ದಿನಗಳ ಸಮಯಕ್ಕೆ FD ಇಟ್ಟರೆ 9.50% ಬಡ್ಡಿ ಸಿಗುತ್ತದೆ. ಸಾಮಾನ್ಯ ಜನರಿಗೆ 9% ಬಡ್ಡಿ ಆಗಿರುತ್ತದೆ.

ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Fincare Small Finance Bank) ;- ಈ ಬ್ಯಾಂಕ್ ನಲ್ಲಿ ಸಾಮಾನ್ಯ ಜನರಿಗೆ 3 ಇಂದ 8.51% ವರೆಗು ಬಡ್ಡಿ ಸಿಗುತ್ತದೆ. ಸೀನಿಯರ್ ಸಿಟಿಜನ್ ಗಳಿಗೆ 9.11% ಬಡ್ಡಿ ಸಿಗುತ್ತದೆ.

Fixed Depositಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Suryodaya Small Finance Bank) ;- ಈ ಬ್ಯಾಂಕ್ ನಲ್ಲಿ ಸೀನಿಯರ್ ಸಿಟಿಜನ್ ಗಳಿಗೆ ಸುಮಾರು 9.60% ವರೆಗು ಬಡ್ಡಿ ಪಡೆಯಬಹುದು. FD ಯೋಜನೆಗೆ 4.50% ಇಂದ 9.60% ವರೆಗು ಬಡ್ಡಿ ಪಡೆಯಬಹುದು. 1999 ದಿನಗಳ FD ಯೋಜನೆ ಇಟ್ಟರೆ, 9.50% ವರೆಗು ಬಡ್ಡಿ ಪಡೆಯಬಹುದು. 1 ರಿಂದ 2 ವರ್ಷದ FD ಯೋಜನೆಗೆ 9% ವರೆಗು ಬಡ್ಡಿ ಸಿಗುತ್ತದೆ.

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Jana Small Finance Bank) ;- 36 ದಿನಗಳ FD ಯೋಜನೆ, 1 ವರ್ಷದಿಂದ 500 ದಿನಗಳವರೆಗಿನ FD ಯೋಜನೆಗಳಿಗೆ 9% ಬಡ್ಡಿದರ ಸಿಗುತ್ತದೆ. ಸಾಮಾನ್ಯ ಜನರಿಗೆ 4.25% ಇಂದ 9% ವರೆಗು ಬಡ್ಡಿದರ ಸಿಗುತ್ತದೆ.

ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್ (ESAF Small Finance Bank) :- ಈ ಬ್ಯಾಂಕ್ ನಲ್ಲು ಸೀನಿಯರ್ ಸಿಟಿಜನ್ ಗಳಿಗೆ ಹೆಚ್ಚು ಬಡ್ಡಿ ಸಿಗುತ್ತದೆ. 2 ಅಥವಾ 3 ವರ್ಷಕ್ಕಿಂತ ಕಡಿಮೆ ಅವಧಿಯ FD ಯೋಜನೆಗೆ 9% ಬಡ್ಡಿದರ ಸಿಗುತ್ತದೆ. ಸಾಮಾನ್ಯ ಜನರಿಗೆ 8.50% ಬಡ್ಡಿ ಸಿಗುತ್ತದೆ.

ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Equities Small Finance Bank) :- 2023ರ ಏಪ್ರಿಲ್ 11ರಿಂದ ಈ ಬ್ಯಾಂಕ್ ನಲ್ಲಿ FD ಯೋಜನೆಗಳ ಮೇಲಿನ ಬಡ್ಡಿದರ ಅಪ್ಡೇಟ್ ಆಗಿದ್ದು, ಈಗ 8.5% ವರೆಗು ಬಡ್ಡಿ ಸಿಗುತ್ತದೆ. ಸೀನಿಯರ್ ಸಿಟಿಜನ್ ಗಳು 888 ದಿನಗಳಿಗೆ FD ಮಾಡಿದರೆ 9% ವರೆಗು ಬಡ್ಡಿ ಸಿಗುತ್ತದೆ..

Senior citizens get more than 9 Percent interest in these banks for Fixed Deposit

Follow us On

FaceBook Google News

Senior citizens get more than 9 Percent interest in these banks for Fixed Deposit