ಕೇವಲ ₹10,000 ದಿಂದ ಬ್ಯುಸಿನೆಸ್ ಶುರು ಮಾಡಿ ಲಕ್ಷಗಟ್ಟಲೇ ಆದಾಯ ಪಡೆಯಿರಿ! ಲಾಭದಾಯಕ ಬಿಸಿನೆಸ್ ಐಡಿಯಾ
ಕೇವಲ ₹10,000 ಹೂಡಿಕೆಯಲ್ಲಿ ಬ್ಯುಸಿನೆಸ್ ಶುರು ಮಾಡಿ ಲಕ್ಷಗಟ್ಟಲೇ ಲಾಭ ಗಳಿಸಬಹುದು.
ಈಗಿನ ಯುವ ಪೀಳಿಗೆಯವರಿಗೆ ಮತ್ತೊಬ್ಬರ ಹತ್ತಿರ ಕೆಲಸ ಮಾಡುವುದಕ್ಕಿಂತ ಸ್ವಂತ ಬಿಸಿನೆಸ್ ಶುರು ಮಾಡಿ ಉತ್ತಮ ಆದಾಯ ಗಳಿಸಬೇಕು, ಇನ್ನಷ್ಟು ಜನರಿಗೆ ಕೆಲಸ ಕೊಟ್ಟು ಸಹಾಯ ಮಾಡಬೇಕು ಎಂದು ಆಸೆ ಇರುತ್ತದೆ. ಆದರೆ ಎಲ್ಲರಿಗೂ ಹೆಚ್ಚು ಹೂಡಿಕೆ ಮಾಡುವ ಅನುಕೂಲ ಇರುವುದಿಲ್ಲ. ಒಂದು ವೇಳೆ ನೀವು ಕೂಡ ಇದೇ ರೀತಿ ಹೆಚ್ಚು ಹೂಡಿಕೆ ಇಲ್ಲದಂಥ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿದ್ದರೆ..
ನಿಮಗಾಗಿ ಕೆಲವು ಬ್ಯುಸಿನೆಸ್ ಐಡಿಯಾಗಳನ್ನು (Business Idea) ತಿಳಿಸಿಕೊಡುತ್ತೇವೆ. ಈ ಬ್ಯುಸಿನೆಸ್ ಗೆ ನೀವು ಹೆಚ್ಚು ಹೂಡಿಕೆ ಮಾಡಬೇಕಿಲ್ಲ, ಕೇವಲ ₹10,000 ಹೂಡಿಕೆಯಲ್ಲಿ ಬ್ಯುಸಿನೆಸ್ ಶುರು ಮಾಡಿ ಲಕ್ಷಗಟ್ಟಲೇ ಲಾಭ ಗಳಿಸಬಹುದು. ಇಷ್ಟು ಕಡಿಮೆ ಬಜೆಟ್ ನಲ್ಲಿ ಉತ್ತಮ ಲಾಭ ಕೊಡುವ ಬ್ಯುಸಿನೆಸ್ ಐಡಿಯಾಗಳನ್ನು ತಿಳಿಸುತ್ತೇವೆ ನೋಡಿ..
*ನಿಮಗೆ ಸೋಷಿಯಲ್ ಮೀಡಿಯಾದಲ್ಲಿ ಆಸಕ್ತಿ ಇದ್ದರೆ, ಪ್ರತಿಡಿನದ ಟ್ರೆಂಡ್ ಗಳನ್ನು ನೀವು ಫಾಲೋ ಮಾಡುತ್ತಿದ್ದರೆ, ಇದು ನಿಮಗೆ ಉತ್ತಮವಾದ ಬ್ಯುಸಿನೆಸ್ ಐಡಿಯಾ ಆಗಿದೆ. ನೀವು ಸೋಷಿಯಲ್ ಮೀಡಿಯಾ ಹ್ಯಾಂಡಲಿಂಗ್ (Social Media Handling) ಸೇವೆಗಳನ್ನು ಶುರು ಮಾಡಬಹುದು. ಈಗ ಸಾಕಷ್ಟು ಜನರು, ಸೆಲೆಬ್ರಿಟಿಗಳು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಂಡಲ್ ಮಾಡಲು ಈ ರೀತಿಯ ಜನರನ್ನು ನೇಮಿಸಿಕೊಳ್ಳುತ್ತಾರೆ.
ಇದೊಂದು ಉತ್ತಮವಾದ ಆದಾಯ ಗಳಿಸಲು ಇದೊಂದು ಒಳ್ಳೆಯ ಐಡಿಯಾ ಆಗಿದೆ.. *ಮತ್ತೊಂದು ಒಳ್ಳೆಯ ಆಯ್ಕೆ ಬ್ಲಾಗಿಂಗ್ (Blogging), ನಿಮಗೆ ಚೆನ್ನಾಗಿ ಬರೆಯಲು ಬರುವುದಾದರೆ, ಭಾಷೆಯ ಜ್ಞಾನ ಇದ್ದರೆ, ನೀವು ಬ್ಲಾಗಿಂಗ್ ಶುರು ಮಾಡಬಹುದು. ಇದರ ಮೂಲಕ ನೀವು ಒಳ್ಳೆಯ ಅವಕಾಶಗಳನ್ನು ಪಡೆದು, ಉತ್ತಮವಾಗಿ ಹಣ ಗಳಿಸಬಹುದು..
*ಮೂರನೆಯ ಒಳ್ಳೆಯ ಬ್ಯುಸಿನೆಸ್ ಆಯ್ಕೆ ಟ್ರಾವೆಲ್ ಏಜೆನ್ಸಿ (Travel Agency). ಓದು ಈಗ ಟ್ರೆಂಡಿಂಗ್ ಬ್ಯುಸಿನೆಸ್ (Trending Business) ಎಂದರೆ ತಪ್ಪಲ್ಲ. ವರ್ಷದ ಹಲವು ಸಮಯದಲ್ಲಿ ಜನರು ನಮ್ಮ ದೇಶದ ಒಳಗೆ ಅಥವಾ ವಿದೇಶಕ್ಕೆ ಪ್ರವಾಸಕ್ಕೆ ಹೋಗಲು ಇಷ್ಟಪಡುತ್ತಾರೆ. ಅವರ ಟಿಕೆಟ್ಸ್ ಅರೇಂಜ್ಮೆಂಟ್ ಮತ್ತು ಹೋಟೆಲ್ ಅರೇಂಜ್ಮೆಂಟ್ಸ್ ಇದೆಲ್ಲವನ್ನು ಸಹ ನೀವು ಮಾಡಿಕೊಡಬಹುದು. ಇದು ಕೂಡ ಒಂದು ಲಾಭದಾಯಕ ಬ್ಯುಸಿನೆಸ್ ಐಡಿಯಾ ಆಗಿದೆ.
*ನಾಲ್ಕನೆಯ ಬ್ಯುಸಿನೆಸ್ ಐಡಿಯಾ ಫೋಟೋಗ್ರಫಿ (Photography).. ಈಗ ಜನರು ಹೆಚ್ಚಾಗಿ ಫೋಟೋಶೂಟ್ ಗಳನ್ನು ಮಾಡಿಸುತ್ತಿದ್ದಾರೆ. ಒಂದು ವೇಳೆ ನಿಮಗೂ ಫೋಟೋಗ್ರಾಫಿಯಲ್ಲಿ ಆಸಕ್ತಿ, ನಿಮಗೆ ಚೆನ್ನಾಗಿ ಫೋಟೋ ತೆರೆಯುವುದಕ್ಕೆ ಬರುತ್ತದೆ ಎಂದರೆ, ಇದನ್ನು ಬ್ಯುಸಿನೆಸ್ ಆಗಿ ಶುರು ಮಾಡಿ ಒಳ್ಳೆಯ ಆದಾಯ ಗಳಿಸಬಹುದು.
*ಐದನೆಯ ಐಡಿಯಾ ಆನ್ಲೈನ್ ಕ್ಲಾಸ್ (Online Tutor). ನಿಮಗೆ ಮಕ್ಕಳಿಗೆ ಪಾಠ ಹೇಳಿಕೊಡಲು ಆಸಕ್ತಿ ಇದ್ದು, ಪಾಠ ಹೇಳಿಕೊಡಲು ಚೆನ್ನಾಗಿ ಬರುತ್ತದೆ ಎಂದರೆ, ಆನ್ಲೈನ್ ಟೀಚಿಂಗ್ ಶುರು ಮಾಡಬಹುದು. ಆನ್ಲೈನ್ ಟ್ಯುಟರ್ ಗಳಿಗೆ ಈಗ ಭಾರಿ ಬೇಡಿಕೆ ಇದೆ. ಒಂದು ಗಂಟೆಯ ಕ್ಲಾಸ್ ಗೆ ಇಷ್ಟು ಎಂದು ಚಾರ್ಜ್ ಮಾಡಬಹುದು. ಇದು ಕೂಡ ಲಾಭ ತರುವ ಬ್ಯುಸಿನೆಸ್ ಐಡಿಯಾ ಆಗಿದೆ.
*ಆರನೆಯ ಬ್ಯುಸಿನೆಸ್ ಐಡಿಯಾ ಯೂಟ್ಯೂಬ್ ಚಾನೆಲ್ (YouTube Channel), ಇದು ಈಗ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿರುವ ಪ್ಲಾಟ್ ಫಾರ್ಮ್ ಎಂದು ಹೇಳಬಹುದು. ನಿಮ್ಮ ಕ್ರಿಯಾಶೀಲತೆಗೆ ತಕ್ಕ ಹಾಗೆ, ಬೋಧನೆ, ಮನರಂಜನೆ, ಟ್ರಾವೆಲ್ ವಿಚಾರಗಳು, ಅಡುಗೆ ವಿಚಾರಗಳು ಇದ್ಯಾವುದರ ಬಗ್ಗೆ ಆದರು ವಿಡಿಯೋ ಮಾಡಿ ಹಾಕುವ ಮೂಲಕ, ನೀವು ಯೂಟ್ಯೂಬ್ ಇಂದ ಒಳ್ಳೆಯ ಆದಾಯ ಗಳಿಸಬಹುದು.
*ಏಳನೆಯ ಬ್ಯುಸಿನೆಸ್ ಐಡಿಯಾ ಘೋಸ್ಟ್ ರೈಟಿಂಗ್ (Ghost Writing), ಬರೆಯುವ ಆಸಕ್ತಿ ಇರುವವರು ಈ ಘೋಸ್ಟ್ ರೈಟಿಂಗ್ ಬ್ಯುಸಿನೆಸ್ ಮೂಲಕ ಉತ್ತಮವಾಗಿ ಹಣ ಗಳಿಸಬಹುದು. ಈ ಎಲ್ಲಾ ಬ್ಯುಸಿನೆಸ್ ಐಡಿಯಾಗಳು ನಿಮಗಾಗಿ ಇದ್ದು, ಇವುಗಳನ್ನು ಶುರು ಮಾಡಿ ಒಳ್ಳೆಯ ಆದಾಯ ಗಳಿಸಬಹುದು.
Start these business within rs 10000 and earn in lakhs
Follow us On
Google News |