ನೀವೇ ಗ್ಯಾಸ್ ಏಜೆನ್ಸಿ ಆರಂಭಿಸಿ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸಿ! ಕಡಿಮೆ ಜಾಗ ಇದ್ರೂ ಸಾಕು
ಸ್ವ ಉದ್ಯಮ (Own Business) ಆರಂಭಿಸಬೇಕು ಎನ್ನುವ ಆಸೆ ಇದ್ರೆ, ನೀವು ಅತಿ ಕಡಿಮೆ ಜಾಗದಲ್ಲಿ ಈ ಒಂದು ಬ್ಯುಸಿನೆಸ್ (Business Idea) ಆರಂಭಿಸಬಹುದು. ಇದರಿಂದ ನೀವು ಗಳಿಸುವ ಲಾಭವು (Income) ಕೂಡ ಹೆಚ್ಚು
ಬೆಳಿಗ್ಗೆಯಿಂದ ಸಂಜೆವರೆಗೆ ಒಂದೇ ಕಂಪನಿಯಲ್ಲಿ ದುಡಿದು ದುಡಿದು ಸಾಕಾಗಿ ಬೇಸೆತ್ತು ಹೋದ ಯುವಕರು ಇಂದು ತಮ್ಮದೇ ಆಗಿರುವ ಸ್ವಂತ ಉದ್ಯಮ (own business) ಆರಂಭಿಸಬೇಕು ಅಂತ ಬಯಸುತ್ತಾರೆ
ಸ್ವ ಉದ್ಯಮ (Own Business) ಆರಂಭಿಸಬೇಕು ಎನ್ನುವ ಆಸೆ ಇದ್ರೆ, ನೀವು ಅತಿ ಕಡಿಮೆ ಜಾಗದಲ್ಲಿ ಈ ಒಂದು ಬ್ಯುಸಿನೆಸ್ (Business Idea) ಆರಂಭಿಸಬಹುದು. ಇದರಿಂದ ನೀವು ಗಳಿಸುವ ಲಾಭವು (Income) ಕೂಡ ಹೆಚ್ಚು..
ಹಾಗಾದ್ರೆ ಯಾವುದು ಕೈ ತುಂಬಾ ಆದಾಯ ತಂದುಕೊಡುವ ಬ್ಯುಸನೆಸ್ ಅಂತ ಯೋಚನೆ ಮಾಡುತ್ತಿದ್ದೀರಾ? ಹಾಗಾದ್ರೆ ಬನ್ನಿ ಈ ಲೇಖನದಲ್ಲಿ ಇದೆ ಸಂಪೂರ್ಣ ಮಾಹಿತಿ.
ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ, ಮನೆ ಕಟ್ಟೋಕೆ ಸಿಗುತ್ತಿದೆ ಕಡಿಮೆ ಬಡ್ಡಿಯ ಗೃಹ ಸಾಲ
ಗ್ಯಾಸ್ ಏಜೆನ್ಸಿ ಬ್ಯುಸಿನೆಸ್: (Gas agency business)
ಹೌದು ನೀವು ಸುಲಭವಾಗಿ ನಿಮ್ಮದೇ ಆಗಿರುವ ಒಂದು ಉದ್ಯಮ ಆರಂಭ ಮಾಡಬೇಕು ಎಂದುಕೊಂಡಿದ್ದರೆ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಏಜೆನ್ಸಿ (Gas agency business) ಆರಂಭಿಸಬಹುದು, ಇದಕ್ಕೆ ಹೆಚ್ಚು ದೊಡ್ಡ ಜಾಗವು ಬೇಡ ಹಾಗೂ ನಿರ್ವಹಣಾ ವೆಚ್ಚವು (maintenance charge) ಅಧಿಕವಾಗಿರುವುದಿಲ್ಲ. ಆದರೆ ಗಳಿಕೆ ಮಾತ್ರ ಲಕ್ಷದಷ್ಟು.
ಗ್ಯಾಸ್ ಏಜೆನ್ಸಿ ಉದ್ಯಮ ಆರಂಭಿಸುವುದು ಹೇಗೆ!
ಗ್ಯಾಸ್ company ಮೂಲಕ ನೀವು ಗ್ಯಾಸ್ ಏಜೆನ್ಸಿ ಉದ್ಯಮ ಆರಂಭಿಸಬಹುದು, ಇದಕ್ಕೆ ಅದರದೇ ಆದ ಶರತ್ತು ನಿಯಮಗಳು (conditions apply) ಇರುತ್ತವೆ ನೀವು ಅದನ್ನ ಪಾಲಿಸಲು ಒಪ್ಪಿಗೆ ಸೂಚಿಸಿದರೆ ಮಾತ್ರ ನಿಮಗೆ ಗ್ಯಾಸ್ ಏಜೆನ್ಸಿ ಕಡೆಯಿಂದ, ನಿಮ್ಮದೇ ಏಜೆನ್ಸಿ ಆರಂಭಿಸಲು ಅವಕಾಶ ನೀಡಲಾಗುತ್ತದೆ.
ಗ್ಯಾಸ್ ಏಜೆನ್ಸಿ ವಿತರಕರ ಕಡೆಯಿಂದ ಆಗಾಗ ಏಜೆನ್ಸಿ ತೆಗೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗುತ್ತದೆ. ಸದ್ಯ ಹಿಂದುಸ್ತಾನ ಪೆಟ್ರೋಲಿಯಂ (HP) ವೆಬ್ಸೈಟ್ ಗೆ ಹೋಗಿ, ಎಚ್ ಪಿ ಗ್ಯಾಸ್ ಏಜೆನ್ಸಿಗೆ ಅರ್ಜಿ ಸಲ್ಲಿಸಬಹುದು. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡುವುದರ ಮೂಲಕ ನೀವು ನಿಮ್ಮ ಸ್ವಂತ ಉದ್ಯಮ ಆರಂಭಿಸಬಹುದು.
ಫಿಕ್ಸೆಡ್ ಡೆಪಾಸಿಟ್ ಮಾಡುತ್ತಿದ್ದೀರಾ..? ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ
ಯಾರು ಆರಂಭಿಸಬಹುದು ಗ್ಯಾಸ್ ಏಜೆನ್ಸಿ?
ಗ್ಯಾಸ್ ಏಜೆನ್ಸಿ ಆರಂಭಿಸುವುದಾದರೆ ನೀವು ಅರ್ಜಿ ಸಲ್ಲಿಸಿದ ನಂತರ ನಿಮಗೆ ನೇರ ಸಂದರ್ಶನ (interview) ಮಾಡಲಾಗುತ್ತದೆ, ಆ ಸಂದರ್ಶನದಲ್ಲಿ ನೀವು ಉತ್ತೀರ್ಣರಾದರೆ ನಿಮಗೆ ಗ್ಯಾಸ್ ಏಜೆನ್ಸಿ ಆರಂಭಿಸಲು ಅವಕಾಶ ನೀಡಲಾಗುತ್ತದೆ.
ಗ್ಯಾಸ್ ಏಜೆನ್ಸಿ ವಿತರಕರಾಗಿ ನೀವು ಆಯ್ಕೆಗೊಂಡರೆ ಗ್ಯಾಸ್ ಕಂಪನಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಾರೆ, ನೀವು ಯಾವ ಸ್ಥಳದಲ್ಲಿ ಗ್ಯಾಸ್ ಏಜೆನ್ಸಿ ಆರಂಭಿಸಲು ಬಯಸುತ್ತೀರಿ, ಗೋದಾಮು ಜಾಗ.. ಮೊದಲಾದವುಗಳನ್ನು ಪರಿಶೀಲನೆ ಮಾಡಲಾಗುತ್ತದೆ. ನಿಮ್ಮ ಸ್ವಂತ ಜಾಗದಲ್ಲಿ ನೀವು ಏಜೆನ್ಸಿ ಆರಂಭಿಸುವುದಾದರೆ 15 ವರ್ಷಗಳವರೆಗೆ ಗುತ್ತಿಗೆಗೆ ನೀಡಬೇಕಾಗುತ್ತದೆ.
ಗ್ಯಾಸ್ ಏಜೆನ್ಸಿ ಆರಂಭಿಸಲು ಎಸ್ ಸಿ ಎಸ್ ಟಿ ಜನರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇನ್ನು ಮಾಜಿ ಸೈನಿಕರು, ವಿಕಲಚೇತನರು, ರಾಷ್ಟ್ರೀಯ ಆಟಗಾರರು, ಸ್ವಾತಂತ್ರ್ಯ ಹೋರಾಟಗಾರರು, ಸಶಸ್ತ್ರ ಪಡೆಯ ಸಿಬ್ಬಂದಿ ಇಂಥವರಿಗೆ ಗ್ಯಾಸ್ ಏಜೆನ್ಸಿ ಸ್ಥಾಪಿಸಲು ಮೊದಲ ಆದ್ಯತೆ ನೀಡಲಾಗುವುದು.
ಕಡಿಮೆ ಬಜೆಟ್ ಅಂತ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಮುನ್ನ ಈ ವಿಷಯಗಳು ನೆನಪಿರಲಿ
ಗ್ಯಾಸ್ ಏಜೆನ್ಸಿ ಮೂಲಕ ಲಾಭ ಗಳಿಸುವುದು ಹೇಗೆ?
ಗ್ಯಾಸ್ ಸಿಲಿಂಡರ್ ಏಜೆನ್ಸಿ ಆರಂಭಿಸಲು 25 ರಿಂದ 40 ಲಕ್ಷ ರೂಪಾಯಿಗಳ ಬಂಡವಾಳ ಹೂಡಿಕೆ (investment) ಮಾಡಬೇಕು. ಒಮ್ಮೆ ಹೂಡಿಕೆ ಮಾಡಿದರೆ ನಂತರ ಪ್ರತಿ ತಿಂಗಳು ಲಕ್ಷ ಆದಾಯ ಗಳಿಸಬಹುದು.
ಉದಾಹರಣೆಗೆ 14 ಕೆಜಿ ಸಿಲಿಂಡರ್ ಮಾರಾಟ ಮಾಡಿದರೆ 61. 84 ರೂಪಾಯಿಗಳ ಕಮಿಷನ್ (commission) ಸಿಗುತ್ತದೆ. ಪ್ರತಿ ತಿಂಗಳು ನೀವು ಎಷ್ಟು ಹೆಚ್ಚು ಸಿಲೆಂಡರ್ ಮಾರಾಟ ಮಾಡುತ್ತೀರೋ ಅಷ್ಟು ಹಣ ನಿಮಗೆ ಉಳಿಯುತ್ತದೆ.
Start your own gas agency and earn lakhs of money per month