ಹಣ ಉಳಿತಾಯ ಮಾಡುವುದಕ್ಕೆ Fixed Deposit ಅಥವಾ ನಿಶ್ಚಿತ ಠೇವಣಿ ಒಳ್ಳೆಯ ಆಯ್ಕೆ ಆಗಿದೆ. ನಮ್ಮ ದೇಶದ ಜನರಿಗೆ FD ಮೇಲೆ ಒಳ್ಳೆಯ ಬಡ್ಡಿದರ ನೀಡಿ ಉತ್ತಮ ಆದಾಯ ಸಿಗುವ ಹಾಗೆ SBI ನಲ್ಲಿ ಹಲವು FD ಯೋಜನೆಗಳಿವೆ.
ಒಳ್ಳೆಯ ಬಡ್ಡಿ ಮತ್ತು ಆದಾಯ ಇದೆ ಎನ್ನುವ ಕಾರಣಕ್ಕೆ ಜನರು ಕೂಡ FD ಯೋಜನೆಗಳಲ್ಲಿ ಒಳ್ಳೆಯ ಆದಾಯ ಗಳಿಸುವುದಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ. SBI ಕೂಡ ಜನರನ್ನು ಆಕರ್ಷಿಸುವಂತಹ ಹಲವು ಯೋಜನೆಗಳನ್ನು ಹೊಂದಿದೆ.
SBI ನಲ್ಲಿ ಅತಿಹೆಚ್ಚು ಬಡ್ಡಿ ಸಿಗುವ ಯೋಜನೆಗಳಲ್ಲಿ SBI ಅಮೃತ್ ಕಲಶ್ ಯೋಜನೆ (Amrit Kalash Scheme) ಕೂಡ ಒಂದು. ಈ ಯೋಜನೆ ಗರಿಷ್ಠ ಮಟ್ಟದ ಬಡ್ಡಿ ಸಿಗುವ ಯೋಜನೆ ಆಗಿದ್ದು, ಈಗಾಗಲೇ ಸಾಕಷ್ಟು ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ.
ಮತ್ತೆ ಏರಿದ ಚಿನ್ನದ ಬೆಲೆ, ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತಷ್ಟು ದುಬಾರಿ! ಎಷ್ಟಿದೆ ಇಂದಿನ ದರಗಳು?
ಇದು 400 ದಿನಗಳಲ್ಲಿ ಮೆಚ್ಯುರ್ ಆಗುವ FD ಯೋಜನೆ ಆಗಿದೆ. ಅಮೃತ್ ಕಲಶ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಆಗಸ್ಟ್15 ಕೊನೆಯ ದಿನಾಂಕ ಆಗಿತ್ತು. ಆದರೆ ಈಗ ಅಮೃತ್ ಕಲಶ್ ಯೋಜನೆಯಲ್ಲಿ ಹೂಡಿಕೆ ಮಾಡುವ ದಿನಾಂಕವನ್ನು ವಿಸ್ತರಿಸಲಾಗಿದ್ದು, ಈ 4 ತಿಂಗಳ ಸಮಯ ನೀಡಲಾಗಿದೆ..
ಈ ಯೋಜನೆಯಲ್ಲಿ 2023ರ ಡಿಸೆಂಬರ್ 31ರವರೆಗು ನೀವು ಹೂಡಿಕೆ ಮಾಡಬಹುದು. ಹಾಗೆಯೇ ಹೆಚ್ಚು ಆದಾಯ ಕೂಡ ಗಳಿಸಬಹುದು. ಇನ್ನು ಈ ಯೋಜನೆಯಲ್ಲಿ ಸಿಗುವ ಬಡ್ಡಿದರದ ಬಗ್ಗೆ ಹೇಳುವುದಾದರೆ.. SBI ಅಮೃತ ಕಲಶ ಯೋಜನೆಯಲ್ಲಿ ಹೂಡಿಕೆ ಮಾಡುವ ಸಾಮಾನ್ಯ ಜನರಿಗೆ 7.10% ಬಡ್ಡಿ ಸಿಗಲಿದ್ದು, ಹೆಣ್ಣುಮಕ್ಕಳಿಗೆ 7.60% ಬಡ್ಡಿ ಸಿಗುತ್ತದೆ.
ಇದು ಉತ್ತಮವಾಗಿ ಲಾಭ ತರುವ ಬಡ್ಡಿ ಮೊತ್ತ ಆಗಿದ್ದು, ಒಂದು ವೇಳೆ ನಿಮಗೆ ಆಸಕ್ತಿ ಇದ್ದರೆ ನೀವು ಕೂಡ ಡಿಸೆಂಬರ್ 31ರ ವರೆಗು ಈ ಯೋಜನೆಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಗ್ರಾಹಕರಿಗೆ ಈ ಯೋಜನೆಯ ಬಡ್ಡಿದರ ಹೇಗೆ ಸಿಗುತ್ತದೆ ಎಂದು ನೋಡುವುದಾದರೆ, ಬ್ಯಾಂಕ್ ಇಂದ ಗ್ರಾಹಕರಿಗೆ ತಿಂಗಳಿಗೆ, ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೆ ಒಂದು ಸಾರಿ ಬಡ್ಡಿ ಕೊಡಲಾಗುತ್ತದೆ.
ಈ ಯೋಜನೆಯ ಪೂರ್ತಿ ಸಮಯ ಮುಗಿದ ಬಳಿಕ ನೀವು ಅಮೃತ್ ಕಲಶ ಯೋಜನೆಯ ಪೂರ್ತಿ ಬಡ್ಡಿ ಹಣ ನಿಮ್ಮದಾಗುತ್ತದೆ. ಒಂದು ವೇಳೆ ನೀವು 400 ದಿನಗಳ ಮೆಚ್ಯುರಿಟಿ ಸಮಯ ಮುಗಿಯುವುದಕ್ಕಿಂತ ಮೊದಲೇ ಹಣ ವಾಪಸ್ ಪಡೆಯಬೇಕು ಎಂದರೆ 0.50% ಹಣವನ್ನು ಕಡಿತಗೊಳಿಸಿ ಇನ್ನುಳಿದ ಹಣವನ್ನು ನೀಡುತ್ತಾರೆ.
State Bank of India Amrit Kalash Scheme
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.