ಕೇವಲ ₹20,000 ದಿಂದ ಈ ಬ್ಯುಸಿನೆಸ್ ಸ್ಟಾರ್ಟ್ ಮಾಡಿ! ಲಕ್ಷಗಟ್ಟಲೇ ಲಾಭ ಬರುವುದು ಗ್ಯಾರಂಟಿ

ಕೇವಲ ೨೦,೦೦೦ ರೂಪಾಯಿಗಳಲ್ಲಿ ಈ ಬಿಸಿನೆಸ್ ಶುರು ಮಾಡಿ ಉತ್ತಮ ಲಾಭ ಪಡೆಯಬಹುದು, ಇಂದೇ ಬಿಸಿನೆಸ್ ಶುರು ಮಾಡಿ.

ನಮ್ಮ ದೇಶದಲ್ಲಿ ಯುವಪೀಳಿಗೆಯವರು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ, ಸ್ವಾವಲಂಬಿಯಾಗಿ ತಾವೇ ಸ್ವಂತ ಬ್ಯುಸಿನೆಸ್ ಶುರು ಮಾಡಬೇಕು ಎಂದು ಬಯಸುತ್ತಾರೆ. ಬ್ಯುಸಿನೆಸ್ ಮೂಲಕ ಲಕ್ಷಗಟ್ಟಲೇ ಲಾಭ ಪಡೆದು, ಇನ್ನಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ, ಸಹಾಯ ಮಾಡಿದ್ದಾರೆ. ಬ್ಯುಸಿನೆಸ್ ಮಾಡುವ ಐಡಿಯಾ (Business Idea) ಸಾಕಷ್ಟು ಜನರಲ್ಲಿ ಇದೆ.

ಆದರೆ ಅವರಿಗೆ ಯಾವ ಬ್ಯುಸಿನೆಸ್ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ಗೊತ್ತಿರುವುದಿಲ್ಲ. ಅಂಥವರಿಗಾಗಿ ಇಂದು ಕೆಲವು ಬ್ಯುಸಿನೆಸ್ ಪ್ಲಾನ್ ಗಳನ್ನು ತಿಳಿಸುತ್ತೇವೆ. ಕೇವಲ ೨೦,೦೦೦ ರೂಪಾಯಿಗಳಲ್ಲಿ ಈ ಬಿಸಿನೆಸ್ ಶುರು ಮಾಡಿ ಉತ್ತಮ ಲಾಭ ಪಡೆಯಬಹುದು. 1.ನೈಸರ್ಗಿಕ ಮಕ್ಕಳ ಉತ್ಪನ್ನಗಳ ಬ್ಯುಸಿನೆಸ್ :- ಈಗಿನ ಕಾಲದಲ್ಲಿ ಸಣ್ಣ ಮಕ್ಕಳು ಇರುವ ತಂದೆತಾಯಿಗೆ ಮಕ್ಕಳಿಗಾಗಿ ಬಳಸುವ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ಇರುತ್ತದೆ.

ಮಕ್ಕಳಿಗಾಗಿ ಖರೀದಿ ಮಾಡುವ ಎಲ್ಲಾ ವಸ್ತುಗಳು ಸಹ ಚೆನ್ನಾಗಿರಬೇಕು, ಅದರಿಂದ ತಮ್ಮ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಬಯಸುತ್ತಾರೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ನೀವು ಮಕ್ಕಳಿಗೆ ಬೇಕಾಗುವ ಕೆಲವು ಪದಾರ್ಥಗಳನ್ನು ನೈಸರ್ಗಿಕವಾಗಿ ತಯಾರಿಸುವ ಬ್ಯುಸಿನೆಸ್ ಮಾಡಬಹುದು.

ಕೇವಲ ₹20,000 ದಿಂದ ಈ ಬ್ಯುಸಿನೆಸ್ ಸ್ಟಾರ್ಟ್ ಮಾಡಿ! ಲಕ್ಷಗಟ್ಟಲೇ ಲಾಭ ಬರುವುದು ಗ್ಯಾರಂಟಿ - Kannada News

ಒಳ್ಳೆಯ ಕ್ವಾಲಿಟಿ ಇರುವ ಬಟ್ಟೆ, ಸ್ಕಿನ್ ಗೆ ಬೇಕಾಗುವ ಪ್ರಾಡಕ್ಟ್ ಗಳು, ಆಟ ಆಡುವ ವಸ್ತುಗಳು ಇದೆಲ್ಲವನ್ನು ತಯಾರಿಸಿ ಮಾರಾಟ ಮಾಡಿ, ಒಳ್ಳೆಯ ಲಾಭ ಗಳಿಸಬಹುದು. 2.ನರ್ಸರಿ ಪ್ಲಾಂಟ್ ಆನ್ಲೈನ್ ಬ್ಯುಸಿನೆಸ್ (Nursery Plant Online Business) :- ಈಗಿನ ಕಾಲದಲ್ಲಿ ಜನರು ತಮ್ಮ ಮನೆಯ ಒಳಗೆ ಮತ್ತು ಹೊರಗೆ ಅಲಂಕಾರಕ್ಕಾಗಿ ಗಿಡಗಳನ್ನು ಇಡುತ್ತಾರೆ. ಈ ರೀತಿಯ ಅಲಂಕಾರಿಕಾ ಗಿಡಗಳಿಗೆ ಈಗ ಬೇಡಿಕೆ ಜಾಸ್ತಿ ಇದೆ.

ಹಾಗಾಗಿ ನೀವು ಆನ್ಲೈನ್ ಮೂಲಕ ಈ ಥರದ ಗಿಡಗಳನ್ನು ಮಾರಾಟ ಮಾಡಬಹುದು. ತೋಟಗಾರಿಕೆಯಲ್ಲಿ ಆನ್ಲೈನ್ ಬ್ಯುಸಿನೆಸ್ ಮಾಡುವ ಆಯ್ಕೆ ಇದೆ. ಇದು ಕೂಡ ಒಳ್ಳೆಯ ಲಾಭ ತರುವ ಬ್ಯುಸಿನೆಸ್ ಆಗಿದೆ. ಈ ಬ್ಯುಸಿನೆಸ್ ಶುರು ಮಾಡಲು ಅಪರೂಪದ ಮತ್ತು ವಿಶೇಷವಾದ ಸಸ್ಯಗಳ ಬಗ್ಗೆ ನಿಮಗೆ ಗೊತ್ತಿರಬೇಕು. ₹20,000ದಲ್ಲಿ ಈ ಬ್ಯುಸಿನೆಸ್ ಶುರು ಮಾಡಿ, ಒಳ್ಳೆಯ ಲಾಭ ಗಳಿಸಬಹುದು.

3.ಆರ್ಗ್ಯಾನಿಕ್ ಕೃಷಿ (Organic Farming) :- ಈಗ ಎಲ್ಲರೂ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ತಮ್ಮ ಆರೋಗ್ಯದ ಬಗ್ಗೆ, ಜನರು ಸೇವಿಸುವ ಆಹಾರ ನೈಸರ್ಗಿಕವಾಗಿರಬೇಕು, ಕೆಮಿಕಲ್ ವಸ್ತುಗಳ ಬಳಕೆ ಆಗಿರಬಾರದು ಎಂದು ಬಯಸುತ್ತಾರೆ. ಹಾಗಾಗಿ ನೀವು ಆರ್ಗ್ಯಾನಿಕ್ ಕೃಷಿಯನ್ನು ಶುರು ಮಾಡಬಹುದು. ಕೆಮಿಕಲ್ ಬಳಸದೆ ಮಾಡುವ ಈ ಕೃಷಿಗೆ ಹೆಚ್ಚು ಬೇಡಿಕೆ ಇದೆ.

Successful business ideas with rs 20000

ನೀವಿರುವ ಜಾಗದಲ್ಲಿ ಯಾವ ಬೆಳೆಗೆ ಹೆಚ್ಚು ಬೇಡಿಕೆ ಇದೆ ಎಂದು ತಿಳಿದು ಅದನ್ನು ಶುರು ಮಾಡಬಹುದು. ಈ ಕೆಲಸಕ್ಕೆ ಜಾಗ ತುಂಬಾ ಮುಖ್ಯವಾಗುತ್ತದೆ. ಇದರಲ್ಲಿ ನೀವು ಸಿರಿ ಧಾನ್ಯ, ಔಷಧೀಯ ಸಸ್ಯಗಳು, ಟೀ, ತರಕಾರಿ, ಹಣ್ಣುಗಳು ಇವುಗಳನ್ನು ಬೆಳೆಸಿ.. ಸ್ಥಳೀಯರ ಸಹಾಯ ಪಡೆದು ಉತ್ತಮ ಬೆಲೆ ಮಾರಾಟ ಮಾಡಬಹುದು..

4.ಬ್ಲ್ಯಾಕ್ ರೈಸ್  (Black Rice) :- ಹೊಸದಾಗಿ ಬಂದಿರುವ ಅಕ್ಕಿಯ ತಳಿ ಇದಾಗಿದ್ದು, ಈ ಬ್ಲ್ಯಾಕ್ ರೈಸ್ ಗೆ ಭಾರಿ ಡಿಮ್ಯಾಂಡ್ ಇದೆ. ಈ ಕೃಷಿ ಶುರು ಮಾಡಿ ನೀವು 6 ತಿಂಗಳುಗಳ ಒಳಗೆ ಬರೋಬ್ಬರಿ ₹5ಲಕ್ಷ ಗಳಿಸಬಹುದು. ಈ ಅಕ್ಕಿಯಲ್ಲಿ ಔಷಧೀಯ ಗುಣ ಇರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಜನರು ಇದನ್ನು ಕಪ್ಪು ಚಿನ್ನ (Black Gold) ಎಂದು ಕರೆಯುತ್ತಿದ್ದಾರೆ. ಈ ಅಕ್ಕಿ ಸೇವನೆ ಇಂದ ಮಧುಮೇಹ, ರಕ್ತದೊತ್ತಡ ಇದೆಲ್ಲವೂ ಕಡಿಮೆ ಆಗುತ್ತದೆ. ಈ ಅಕ್ಕಿಯನ್ನು ಬೆಳೆಯುವುದು ಹೇಗೆ ಎಂದು ತಿಳಿದು, ಬ್ಲ್ಯಾಕ್ ರೈಸ್ ಕೃಷಿ ಮಾಡಬಹುದು.

Successful business ideas with rs 20000

Follow us On

FaceBook Google News

Successful business ideas with rs 20000