Business News

ಕಡಿಮೆ ಬಜೆಟ್‌ನಲ್ಲಿ ಜನ ಹೆಚ್ಚಾಗಿ ಖರೀದಿ ಮಾಡ್ತಾಯಿರೋ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇವು

Budget Electric Scooters : ಇಂದಿನ ದಿನಗಳಲ್ಲಿ ಇಂಧನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅನೇಕ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಈಗ ಕಡಿಮೆ ಬಜೆಟ್‌ನಲ್ಲಿ ಸಿಗುತ್ತಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಡೋಣ.

ಹೌದು ಸ್ನೇಹಿತರೆ ಕಡಿಮೆ ನಿರ್ವಹಣೆ, ಹೆಚ್ಚಾದ ಪೆಟ್ರೋಲ್ ಹೊರೆ ತಪ್ಪಿಸಲು ಗ್ರಾಹಕರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ, ಅಂತೆಯೇ ಕಂಪನಿಗಳು ಕೂಡ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ.

The best electric scooters in a low budget, know the price and features

ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಿಂದ ದುಬಾರಿ ಬೆಲೆಯ ತನಕ ಎಲೆಕ್ಟ್ರಿಕ್ ಬೈಕ್ (Electric Bike), ಎಲೆಕ್ಟ್ರಿಕ್ ಸ್ಕೂಟರ್ (Electric Scooter), ಎಲೆಕ್ಟ್ರಿಕ್ ಕಾರುಗಳು (Electric Cars) ಲಭ್ಯವಿವೆ. ಈಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಅತ್ತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನೋಡೋಣ, ಸಾಮಾನ್ಯ ಜನರ ಬಜೆಟ್‌ನಲ್ಲಿ ಬರುವ ಈ ಕೆಲವು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ತಿಳಿಯೋಣ.

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ – Hero Electric Optima

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸ್ಕೂಟರ್ ಎಕ್ಸ್ ಶೋ ರೂಂ ಬೆಲೆ ರೂ. 67190 ರಿಂದ ರೂ. 85190 ರೂ ಇದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 140 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು. ಇದು ಗಂಟೆಗೆ 45 ಕಿಮೀ ವೇಗದಲ್ಲಿ ಚಲಿಸುತ್ತದೆ. ಸಂಪೂರ್ಣವಾಗಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳು ತೆಗೆದುಕೊಳ್ಳುತ್ತದೆ.

ಓಕಿನಾವಾ ಪ್ರೈಜ್ ಪ್ರೊ – Okinawa Prize Pro

ಎಲೆಕ್ಟ್ರಿಕ್ ಸ್ಕೂಟರ್ ಒಕಿನಾವಾ ಪ್ರೈಜ್ ಪ್ರೊ ಕೂಡ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಓಕಿನಾವಾ ಪ್ರೈಜ್ ಪ್ರೊ ಎಕ್ಸ್ ಶೋ ರೂಂ ಬೆಲೆ ರೂ.99645. ಇದು ಒಂದು ಬಾರಿ ಚಾರ್ಜ್ ಮಾಡಿದರೆ 88 ಕಿಲೋಮೀಟರ್ ವರೆಗೆ ಓಡಬಹುದು. ಇದರ ಗರಿಷ್ಠ ವೇಗ ಗಂಟೆಗೆ 58 ಕಿ.ಮೀ.

ಒಕಾಯಾ ಫಾಸ್ಟ್ F2B – Okaya Fast F2B

ಎಲೆಕ್ಟ್ರಿಕ್ ಸ್ಕೂಟರ್ Okaya F2B ಎಕ್ಸ್ ಶೋ ರೂಂ ಬೆಲೆ ರೂ.99950. ಇದು 6 ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 85 ಕಿಲೋಮೀಟರ್ ವರೆಗೆ ಓಡಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 70 ಕಿ.ಮೀ. ಸಂಪೂರ್ಣವಾಗಿ ಚಾರ್ಜ್ ಮಾಡಲು 3 ರಿಂದ 4 ಗಂಟೆ ತೆಗೆದುಕೊಳ್ಳುತ್ತದೆ.

ಲೆಕ್ಟ್ರಿಕ್ಸ್ EV LXS – Lectrix EV LXS

ಎಲೆಕ್ಟ್ರಿಕ್ ಸ್ಕೂಟರ್ ಲೆಕ್ಟ್ರಿಕ್ಸ್ EV LXS ಎಕ್ಸ್ ಶೋ ರೂಂ ಬೆಲೆ ರೂ.91253. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 89 ಕಿಲೋಮೀಟರ್ ಪ್ರಯಾಣಿಸಬಹುದು. ಲೆಕ್ಟ್ರಿಕ್ಸ್ EV LXS 50 kmph ವೇಗದಲ್ಲಿ ಹೋಗುತ್ತದೆ. ಸಂಪೂರ್ಣವಾಗಿ ಚಾರ್ಜ್ ಮಾಡಲು 3 ಗಂಟೆ ತೆಗೆದುಕೊಳ್ಳುತ್ತದೆ.

The best electric scooters in a low budget, know the price and features

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories