ಚಿನ್ನ ಖರೀದಿ ಮತ್ತು ಮಾರಾಟದ ನಿಯಮ ಬದಲಾವಣೆ ಮಾಡಿದ ಸರ್ಕಾರ! ರಾತ್ರೋ ರಾತ್ರಿ ಹೊಸ ರೂಲ್ಸ್ ಜಾರಿ
ಈಗ ಹಾಲ್ ಮಾರ್ಕ್ ಹೊಂದಿರುವ ಚಿನ್ನವನ್ನು ಮಾತ್ರ ಶುದ್ಧ ಚಿನ್ನ ಎಂದು ಪರಿಗಣಿಸಲಾಗುತ್ತದೆ. ಮೊದಲಿದ್ದ 4 ಸಂಖ್ಯೆಗಳ HUID ನಂಬರ್ ಬದಲಾಗುತ್ತದೆ
ನಮ್ಮ ದೇಶದಲ್ಲಿ ಚಿನ್ನದ ಮೇಲೆ ಎಲ್ಲರಿಗೂ ಜಾಸ್ತಿ ಒಲವು. ಚಿನ್ನ ಖರೀದಿ (Buy Gold) ಎಂದರೆ ಅದು ಅಲಂಕಾರದ ಐಷಾರಾಮಿ ಆಭರಣ (Gold Jewellery) ಮಾತ್ರವಲ್ಲ, ಚಿನ್ನವನ್ನು ಹೂಡಿಕೆಯ ರೀತಿಯಲ್ಲಿ ನೋಡುತ್ತಾರೆ.
ಕಷ್ಟ ಬಂದರೆ ಸಹಾಯ ಮಾಡುವ ವಸ್ತು ಕೂಡ ಹೌದು. ಹಬ್ಬಗಳು, ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವುದುಂಟು, ಆದರೆ ಈಗ ಚಿನ್ನ ಖರೀದಿ ಮತ್ತು ಮಾರಾಟ ಎರಡು ವಿಚಾರಕ್ಕೆ (Gold Selling) ಸರ್ಕಾರ ಹೊಸ ನಿಯಮಗಳನ್ನು ತಂದಿದೆ. ಆ ನಿಯಮಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಸರ್ಕಾರ ತಂದಿರುವ ಮೊದಲ ಬದಲಾವಣೆ ಚಿನ್ನದ ಶುದ್ಧತೆಯ ವಿಚಾರದಲ್ಲಿ. ಈಗ ಹಾಲ್ ಮಾರ್ಕ್ (Hall Mark) ಹೊಂದಿರುವ ಚಿನ್ನವನ್ನು ಮಾತ್ರ ಶುದ್ಧ ಚಿನ್ನ ಎಂದು ಪರಿಗಣಿಸಲಾಗುತ್ತದೆ. ಮೊದಲಿದ್ದ 4 ಸಂಖ್ಯೆಗಳ HUID ನಂಬರ್ ಬದಲಾಗುತ್ತದೆ, ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನ ಹೊಸ 6 ಅಂಕೆಗಳ ಹಾಲ್ ಮಾರ್ಕ್ (Gold HallMark) ಇನ್ನುಮುಂದೆ ಕಡ್ಡಾಯವಾಗುತ್ತದೆ.
ವರಮಹಾಲಕ್ಷ್ಮಿ ಹಬ್ಬದ ಎಫೆಕ್ಟ್! ಚಿನ್ನದ ಬೆಲೆ ₹220 ಏರಿಕೆ, ಬೆಳ್ಳಿ ಬೆಲೆ ಬರೋಬ್ಬರಿ ₹1600ರಷ್ಟು ಏರಿಕೆ
ಹಾಲ್ ಮಾರ್ಕ್ ನಂಬರ್ ಇಲ್ಲದೆಯೇ ಯಾರು ಕೂಡ ಚಿನ್ನ ಮಾರಾಟ ಮಾಡುವ ಹಾಗಿಲ್ಲ. ಮೊದಲಿದ್ದ BIS ಹಾಲ್ ಮಾರ್ಕ್ ಅನ್ನು ಈಗ ಬದಲಾಯಿಸಲಾಗಿದ್ದು, ಈ ಹಾಲ್ ಮಾರ್ಕ್ ಇಲ್ಲದೆ ಚಿನ್ನ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೊಸ ಅಭರಣಗಳಲ್ಲಿ ಈ ಹಾಲ್ ಮಾರ್ಕ್ ಇರುವುದು ಕಡ್ಡಾಯ ಆಗಿರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹಳೆಯ ಚಿನ್ನ ಇದ್ದು, ಅದರಲ್ಲಿ ಹೊಸ ಹಾಲ್ ಮಾರ್ಕ್ ಇಲ್ಲ ಎಂದು ನೀವು ಚಿಂತೆ ಮಾಡುವ ಅಗತ್ಯವಿಲ್ಲ. BIS ರಿಜಿಸ್ಟರ್ ಆಗಿರುವ ಆಭರಣ ವ್ಯಾಪಾರಿಗಳ ಹತ್ತಿರ ನಿಮ್ಮ ಹಳೆಯ ಚಿನ್ನದ ಒಡವೆಗಳನ್ನು ಅವರಿಗೆ ನೀಡಿ, ಹೊಸದಾಗಿ ಹಾಲ್ ಮಾರ್ಕ್ ಹಾಕಿಸಿಕೊಳ್ಳಬಹುದು. ಅಥವಾ BIS ರಿಜಿಸ್ಟರ್ ಆಗಿರುವ ಅಸ್ಸೆಯಿಂಗ್, ಹಾಲ್ ಮಾರ್ಕಿಂಗ್ ಕೇಂದ್ರಕ್ಕೆ ಹೋಗಿಯೂ ಹಾಲ್ ಮಾರ್ಕ್ ಹಾಕಿಸಿಕೊಳ್ಳಬಹುದು.
ಗ್ರಾಂಡ್ ಲುಕ್, ಟಾಪ್ ಫೀಚರ್ಸ್! ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಬೈಕ್, ಕಡಿಮೆ ಬೆಲೆ ಅತ್ಯುತ್ತಮ ಮೈಲೇಜ್
ಮೊದಲು 35 ರೂಪಾಯಿ ಇತ್ತು, ಈಗ 10 ರೂಪಾಯಿ ಜಾಸ್ತಿ ಮಾಡಲಾಗಿದೆ. ಈ ಹೊಸ ನಿಯಮದಲ್ಲಿ ಹಾಲ್ ಮಾರ್ಕ್ ಹಾಕುವುದರ ಜೊತೆಗೆ ನಿಮ್ಮ ಚಿನ್ನಕ್ಕೆ ಸರ್ಟಿಫಿಕೇಟ್ ಕೊಡಲಾಗುತ್ತದೆ.
ಈ ಸರ್ಟಿಫಿಕೇಟ್ ಅನ್ನು ತೋರಿಸಿದರೆ ಸಾಕು ನೀವು ಚಿನ್ನವನ್ನು ಸುಲಭವಾಗಿ ಮಾರಾಟ ಮಾಡಬಹುದು ಹಾಗೆಯೇ ಎಕ್ಸ್ಛೇಂಜ್ ಮಾಡುವುದಕ್ಕೂ ಸುಲಭವಾಗುತ್ತದೆ. 2021 ರ ಜೂನ್ 16ರಿಂದ ನಮ್ಮ ದೇಶದಲ್ಲಿ ಹಾಲ್ ಮಾರ್ಕಿಂಗ್ ಜಾರಿಗೆ ತರಲಾಯಿತು.
ಇಲ್ಲಿ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಚಾರ ಏನು ಎಂದರೆ, ಹಾಲ್ ಮಾರ್ಕಿಂಗ್ ಕಡ್ಡಾಯ ಆಗಿದೆ, ಅದರ ಜೊತೆಗೆ ಹಾಗಿದ್ದರೂ 40 ಲಕ್ಷಕ್ಕಿಂತ ಕಡಿಮೆ ಚಿನ್ನ ವ್ಯಾಪಾರ ಮಾಡುವವರಿಗೆ ಈಗ ಒಂದು ರೀತಿಯಲ್ಲಿ ರಿಲೀಫ್ ಸಿಕ್ಕಿದೆ ಎಂದು ಹೇಳಬಹುದು. 2 ಗ್ರಾಮ್ ಗಿಂತ ಕಡಿಮೆ ಚಿನ್ನ ಮಾರಾಟ ಮಾಡುವವರಿಗೆ ಹಾಲ್ ಮಾರ್ಕಿಂಗ್ ನಿಯಮ ಅನ್ವಯಿಸುವುದಿಲ್ಲ.
ಮೊದಲ ಹೈ-ಸ್ಪೀಡ್ ಸ್ಕೂಟರ್! ಟಿವಿಎಸ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, 140 ಕಿ.ಮೀ ಮೈಲೇಜ್
ಹಾಗೆಯೇ ಪ್ರದರ್ಶನಕ್ಕೆ ಇಡುವುದಕ್ಕೆ ಮಾಡುವ ಚಿನ್ನದ ಆಭರಣಗಳ ಮೇಲು ಹಾಲ್ ಮಾರ್ಕಿಂಗ್ ಡಿಸ್ಕೌಂಟ್ ಇರುತ್ತದೆ. ಹಾಗೆಯೇ ಗೋಲ್ಡ್ ವಾಚ್, ಗೋಲ್ಡ್ ಫೌಂಟೇನ್ ಪೆನ್, ಪೊಲ್ಕಿ, ಕುಂದನ್ ಇವುಗಳ ಮೇಲೆ ಕೂಡ ಹಾಲ್ ಮಾರ್ಕ್ ಅಗತ್ಯವಿಲ್ಲ.
ಚಿನ್ನಕ್ಕೆ ಹಾಲ್ ಮಾರ್ಕ್ ಹಾಕಿದರೆ, ಗ್ರಾಹಕರಿಗೆ ಲಾಭ ಕಡಿಮೆಯೇ, ಹಾಲ್ ಮಾರ್ಕ್ ಮೇಲೆ BIS ನ ಪ್ರಕಾರ ಚಿನ್ನ ಎಷ್ಟು ಕ್ಯಾರೆಟ್ ಎಂದು ಕೂಡ ಹಾಕಲಾಗುತ್ತದೆ. ಇದೆಲ್ಲವೂ ನಿಮ್ಮ ಚಿನ್ನಕ್ಕೆ ಸಿಗುವ ಪ್ರಮಾಣ ಪತ್ರದ ರೀತಿ ಆಗಿದ್ದು, ಸುಲಭವಾಗಿ ನೀವು ಅದನ್ನು ಮಾರಾಟ ಮಾಡಬಹುದು.
The government has changed the rules for buying and selling gold
Follow us On
Google News |