ಮಸ್ತ್ ಮೈಲೇಜ್! ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಟಾಪ್ 5 ಬಜೆಟ್ ಬೈಕ್‌ಗಳು ಇವು

ವಾಹನಗಳ ಜಿಎಸ್ಟಿ ಇಳಿಕೆ, ಕಡಿಮೆ ಬೆಲೆ ಹಾಗೂ ಹೆಚ್ಚು ಮೈಲೇಜ್‌ಗಾಗಿ ಹುಡುಕುವ ಮಧ್ಯಮವರ್ಗದ ಗ್ರಾಹಕರಲ್ಲಿ ಈಗ ಟಾಪ್ 5 ಬಜೆಟ್ ಬೈಕ್‌ಗಳಿಗೆ ಭಾರೀ ಬೇಡಿಕೆ ಹೆಚ್ಚುತ್ತಿದೆ.

Top 5 Budget Bikes: ಇತ್ತೀಚೆಗೆ ಜಿಎಸ್ಟಿ ದರ ಕಡಿತದಿಂದ ಬಜೆಟ್ ಬೈಕ್‌ಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ. 350cc ಕ್ಕಿಂತ ಕಡಿಮೆ ಇಂಜಿನ್ ಸಾಮರ್ಥ್ಯದ ಬೈಕ್‌ಗಳ ಮೇಲೆ ಜಿಎಸ್ಟಿಯನ್ನು 28%ರಿಂದ 18%ಕ್ಕೆ ಇಳಿಸಿದ್ದರಿಂದ ಮಧ್ಯಮ ವರ್ಗದ ಜನರಿಗೆ ಖರೀದಿ ಸುಲಭವಾಯಿತು. ಇಂಧನ ದರ ಏರಿಕೆಯ ನಡುವೆ ಹೆಚ್ಚಿನ ಮೈಲೇಜ್ ನೀಡುವ ಬೈಕ್‌ಗಳತ್ತ ಗ್ರಾಹಕರ ಒಲವು ಹೆಚ್ಚಾಗಿದೆ.

ಪ್ರಸ್ತುತ ₹80 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ 100cc–110cc ಸೆಗ್ಮೆಂಟ್‌ನ ಬೈಕ್‌ಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡ ಬೇಡಿಕೆ ಇದೆ. ಹೆಚ್ಚು ಮಾರಾಟವಾಗುತ್ತಿರುವ ಟಾಪ್ 5 ಬೈಕ್‌ಗಳು ಇಲ್ಲಿದೆ ನೋಡಿ.

ಇದನ್ನೂ ಓದಿ: ಎಸ್​ಬಿಐ ನೀಡುತ್ತಿದೆ ಕಡಿಮೆ ಬಡ್ಡಿಯಲ್ಲಿ ₹10 ಲಕ್ಷ ವೈಯಕ್ತಿಕ ಸಾಲ! ಕೆಲ ನಿಮಿಷಗಳಲ್ಲೇ ಮಂಜೂರು

1. Hero Splendor Plus

ಇಂಡಿಯಾದಲ್ಲಿ ಅತಿ ಜನಪ್ರಿಯ 100cc ಬೈಕ್‌ಗಳಲ್ಲಿ ಸ್ಪ್ಲೆಂಡರ್ ಪ್ಲಸ್ ಮುಂದುವರಿದಿದೆ. 97.2cc ಇಂಜಿನ್ ಹೊಂದಿರುವ ಈ ಬೈಕ್ ಸರಾಸರಿ 70 ಕಿಮೀ ಮೈಲೇಜ್ ನೀಡುತ್ತದೆ. ಹೀರೋ ಸಂಸ್ಥೆಯ i3S ತಂತ್ರಜ್ಞಾನ ಟ್ರಾಫಿಕ್‌ನಲ್ಲಿ ಇಂಧನ ಉಳಿಸಲು ಸಹಕಾರಿಯಾಗುತ್ತದೆ. ಇದರ ಎಕ್ಸ್-ಶೋರೂಮ್ ಬೆಲೆ ₹73,764.

2. Hero HF Deluxe

97.2cc ಇಂಜಿನ್ ಹೊಂದಿರುವ ಈ ಬೈಕ್ 70 ಕಿಮೀ ಮೈಲೇಜ್‌ನಿಂದ ಜನಮೆಚ್ಚುಗೆ ಗಳಿಸಿದೆ. ₹58,020 ಎಕ್ಸ್-ಶೋರೂಮ್ ಪ್ರೈಸ್‌ನಿಂದಲೇ ಇದು ಮಧ್ಯಮವರ್ಗದವರ ಮೊದಲ ಆಯ್ಕೆಯಾಗಿ ಉಳಿಯುತ್ತದೆ. ಕಡಿಮೆ ಬೆಲೆ–ಹೆಚ್ಚು ಮೈಲೇಜ್ ಕಾರಣದಿಂದ ಮಾರುಕಟ್ಟೆಯಲ್ಲಿ ಟಾಪ್ ಸೇಲರ್ ಬೈಕ್ ಇದು.

ಇದನ್ನೂ ಓದಿ: ಸ್ವಂತ ಉದ್ಯಮ ಆರಂಭಕ್ಕೆ ₹1 ಲಕ್ಷ ಸಾಲ ಸೌಲಭ್ಯ! ಜೊತೆಗೆ 35% ವರೆಗೆ ಸರ್ಕಾರದ ಸಬ್ಸಿಡಿ, ಬೇಕಾದವರು ಈಗಲೇ ಅಪ್ಲೈ ಮಾಡಿ

3. Honda Shine 100

98.98cc ಇಂಜಿನ್ ಹೊಂದಿರುವ ಶೈನ್ 100 ಸರಾಸರಿ 65 ಕಿಮೀ ಮೈಲೇಜ್ ನೀಡುತ್ತದೆ. ಹೋಂಡಾ ಬ್ರ್ಯಾಂಡ್ ವಿಶ್ವಾಸದಿಂದ ಇದು ₹63,441 ಬೆಲೆಗೆ ಹೆಚ್ಚು ಬೇಡಿಕೆ ಪಡೆದಿದೆ.

Honda Shine 100

4. Bajaj Platina 100

ಒಂದು ಲೀಟರ್‌ಗೆ 75 ಕಿಮೀ ಮೈಲೇಜ್ ನೀಡುವ ಈ ಬೈಕ್ ದೂರ ಪ್ರಯಾಣ ಮಾಡುವವರಿಗೆ ವಿಶೇಷವಾಗಿ ಸೂಕ್ತ. ಪ್ಲಾಟಿನಾ 100 ನ ಆರಂಭಿಕ ಬೆಲೆ ₹67,808 ಆಗಿದೆ ಮತ್ತು ಆರಾಮದಾಯಕ ಸವಾರಿ ಇದಕ್ಕೆ ಹೆಚ್ಚುವರಿ ಪ್ಲಸ್ ಪಾಯಿಂಟ್.

5. Hero Passion Plus

ಸ್ಟೈಲ್ ಹಾಗೂ ಉಪಯುಕ್ತತೆ ಎರಡನ್ನೂ ಬಯಸುವವರಿಗೆ ಪ್ಯಾಷನ್ ಪ್ಲಸ್ ಉತ್ತಮ ಆಯ್ಕೆ. 97.2cc ಇಂಜಿನ್, ಸೆಮಿ-ಡಿಜಿಟಲ್ ಕಾಂಸೋಲ್, USB ಚಾರ್ಜರ್ ಮುಂತಾದ ಫೀಚರ್‌ಗಳೊಂದಿಗೆ ಬರುತ್ತದೆ. ಸುಮಾರು 60 ಕಿಮೀ ಮೈಲೇಜ್ ನೀಡುವ ಈ ಬೈಕ್‌ನ ಬೆಲೆ ₹76,636.

Top 5 Best-Selling Budget Bikes in India

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories