ಇವು 2025ರಲ್ಲಿ ₹10,000 ಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಫೋನ್‌ಗಳು

2025ರಲ್ಲಿ ₹10,000 ಒಳಗಿನ ಬಜೆಟ್‌ನಲ್ಲಿ 108MP ಕ್ಯಾಮೆರಾ, 6000mAh ಬ್ಯಾಟರಿ ಮತ್ತು ಪವರ್‌ಫುಲ್ ಪ್ರೊಸೆಸರ್‌ಗಳಿರುವ 5 ಬೆಸ್ಟ್–ಸೆಲಿಂಗ್ ಸ್ಮಾರ್ಟ್‌ಫೋನ್ಸ್ ಇದೀಗ ಗ್ರಾಹಕರಿಗೆ ರಿಯಾಯಿತಿಯಲ್ಲಿ ಲಭ್ಯ.

Top 5 Best-Selling Smartphones: ಕೇವಲ ಹತ್ತು ಸಾವಿರ ರೂಪಾಯಿ ಒಳಗಿನ ಬಜೆಟ್‌ಲ್ಲಿ ಹೆಚ್ಚು ಫೀಚರ್‌ಗಳಿರುವ ಫೋನ್ ಬೇಕೆಂದರೆ, 2025ರ ಈ ಐದು ಬೆಸ್ಟ್ ಸೆಲಿಂಗ್ ಫೋನ್ಸ್ ಈಗ ಗ್ರಾಹಕರ ಮನಸ್ಸು ಗೆದ್ದಿವೆ.

108MP ಕ್ಯಾಮೆರಾ, 6000mAh ವರಗೆ ಬ್ಯಾಟರಿ ಮತ್ತು ಫಾಸ್ಟ್ ಪ್ರೊಸೆಸರ್‌ಗಳಿರುವ ಈ ಮಾದರಿಗಳು ಈಗ ಆನ್‌ಲೈನ್‌ ಆಫರ್‌ಗಳಲ್ಲಿ ಕಡಿಮೆ ದರಕ್ಕೆ ಲಭ್ಯ.

ಗ್ರಾಹಕರು ಹೆಚ್ಚು “ವ್ಯಾಲ್ಯೂ ಫಾರ್ ಮನಿ” ಆಗಿ ಹುಡುಕುತ್ತಿರುವ ಸಂದರ್ಭದಲ್ಲಿ Realme, POCO, Redmi, Motorola ಮತ್ತು Infinix ಬ್ರಾಂಡ್‌ಗಳ ಬಜೆಟ್ ಫೋನ್ಸ್ ಹೆಚ್ಚು ಬೇಡಿಕೆಯಲ್ಲಿವೆ. ಈ ಲಿಸ್ಟ್ ಇರುವ ಫೋನ್ಸ್‌ಗಳಲ್ಲಿ ಕ್ಯಾಮೆರಾ ಕ್ವಾಲಿಟಿ ಮತ್ತು ಬ್ಯಾಟರಿ ಬ್ಯಾಕಪ್ ಎರಡೂ ಗಮನ ಸೆಳೆಯುವಂತಹವು.

1. Realme Narzo 80 Lite

ಅಮೆಜಾನ್‌ನಲ್ಲಿ ₹7,299 ಕ್ಕೆ ಸಿಗುವ ಈ ಫೋನ್ 6300mAh ಬ್ಯಾಟರಿ ಕಾರಣದಿಂದಲೇ “ಬ್ಯಾಟರಿ ಕಿಂಗ್” ಎಂದು ಕರೆಯಲ್ಪಡುತ್ತಿದೆ. 6.74 ಇಂಚಿನ 90Hz ಡಿಸ್ಪ್ಲೇ ದಿನನಿತ್ಯದ ಬಳಕೆಗೆ ಸ್ಮೂತ್ ಅನುಭವ ನೀಡುತ್ತದೆ. Unisoc T7250 ಚಿಪ್‌ಸೆಟ್‌ ಬಳಕೆದಾರರಿಗೆ ಬೇಸಿಕ್ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ನಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡುತ್ತದೆ. 13MP ರಿಯರ್ ಮತ್ತು 5MP ಫ್ರಂಟ್ ಕ್ಯಾಮೆರಾ ಡೇಲೈಟ್ ಫೋಟೋಗಳಿಗೆ ಸಾಕಷ್ಟು ಚೆನ್ನಾಗಿದೆ.

2. POCO M6 Plus 5G

₹10,080 ದರದಲ್ಲಿ ಸಿಗುವ ಈ ಮಾದರಿ 108MP Samsung HM6 ಸೆನ್ಸರ್‌ನಿಂದಲೇ ಈ ಬಜೆಟ್‌ನಲ್ಲಿ ಟಾಪ್ ಕ್ಯಾಮೆರಾ ಔಟ್‌ಪುಟ್ ನೀಡುತ್ತದೆ. 6.79 ಇಂಚಿನ 120Hz LCD ಡಿಸ್ಪ್ಲೇ ಗೇಮರ್ಸ್‌ಗೆ ಸೂಕ್ತ. Snapdragon 4 Gen 2 AE ಚಿಪ್‌ಸೆಟ್ ವೇಗ, ಪವರ್‌ ಎಫಿಷಿಯನ್ಸಿ ಮತ್ತು ಸ್ಮೂತ್ ಮಲ್ಟಿಟಾಸ್ಕಿಂಗ್‌ ಒದಗಿಸುತ್ತದೆ. 5030mAh ಬ್ಯಾಟರಿ + 33W ಚಾರ್ಜಿಂಗ್ ಇದರ ಪ್ಲಸ್ ಪಾಯಿಂಟ್.

3. Redmi 14C 5G

Amazon ನಲ್ಲಿ ₹8,998 ಗೆ ಸಿಗುವ ಈ ಫೋನ್ 6.88 ಇಂಚಿನ 120Hz HD+ ಡಿಸ್ಪ್ಲೇ ಹೊಂದಿದೆ, ಇದು ಈ ರೇಂಜ್‌ನಲ್ಲಿ ಅಪರೂಪ. MediaTek Helio G ಸೀರೀಸ್ ಚಿಪ್‌ಸೆಟ್ ಸಾಮಾನ್ಯ ಬಳಕೆಗೆ ಚನ್ನಾಗಿದೆ. 50MP ಕ್ಯಾಮೆರಾ ಮತ್ತು 13MP ಸೆಲ್ಫಿ ಕ್ಯಾಮೆರಾ ದಿನದ ಬೆಳಕಿನಲ್ಲಿ ಉತ್ತಮ ಔಟ್‌ಪುಟ್ ನೀಡುತ್ತವೆ. 5160mAh ಬ್ಯಾಟರಿ ಒಂದು ದಿನಕ್ಕೆ ಸಾಕಾಗುತ್ತದೆ.

4. Motorola G35 5G

ಸ್ಪಷ್ಟ ಮತ್ತು ಕ್ಲೀನ್ ಯೂಐ ಬಯಸುವವರಿಗೆ ₹8,999 Motorola G35 5G ಒಳ್ಳೆಯ ಆಯ್ಕೆ. 6.72 ಇಂಚಿನ FHD+ 120Hz ಡಿಸ್ಪ್ಲೇ ವೀಕ್ಷಣಾ ಅನುಭವ ಉತ್ತಮ ಮಾಡುತ್ತದೆ. Unisoc T760 ಚಿಪ್‌ಸೆಟ್ 5G ಸ್ಪೀಡ್ ಮತ್ತು ಸ್ಟೇಬಿಲಿಟಿ ಒದಗಿಸುತ್ತದೆ. 50MP + 8MP ಡ್ಯೂಲ್ ಕ್ಯಾಮೆರಾ, 16MP ಫ್ರಂಟ್ ಕ್ಯಾಮೆರಾ ಇದರ ಮುಖ್ಯ ಆಕರ್ಷಣೆ.

5. Infinix Hot 60i 5G

₹9,299 ದರದಲ್ಲಿ ಸಿಗುವ ಈ ಫೋನ್ 6000mAh ಬ್ಯಾಟರಿ ಮತ್ತು Dimensity 6400 ಚಿಪ್‌ಸೆಟ್‌ನಿಂದಲೇ “ಪವರ್ ಬಜೆಟ್ 5G ಫೋನ್” ಎಂದು ಹೆಸರು ಗಳಿಸಿದೆ. 6.75 ಇಂಚಿನ 120Hz ಡಿಸ್ಪ್ಲೇ, 50MP ಕ್ಯಾಮೆರಾ ಹಾಗೂ IP64 ರೇಟಿಂಗ್ ಇದರ ಮುಖ್ಯ ಫೀಚರ್‌ಗಳು. 128GB ಸ್ಟೋರೇಜ್ ಮತ್ತು ಸೈಡ್ ಫಿಂಗರ್‌ಪ್ರಿಂಟ್ ಕೂಡ ಇದೆ.

Top 5 Best-Selling Phones of 2025 Under ₹10,000

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories