ಐಫೋನ್ 17ಗೂ ಪೈಪೋಟಿ! 2025ರ ಟಾಪ್ 6 ಕ್ಯಾಮೆರಾ ಸ್ಮಾರ್ಟ್ಫೋನ್ಗಳ ಪಟ್ಟಿ
ಮಾರುಕಟ್ಟೆಯಲ್ಲಿ ಹೊಸ ಕ್ಯಾಮೆರಾ ಸ್ಮಾರ್ಟ್ಫೋನ್ಗಳ ಪೈಕಿ ಕೆಲವು ಮಾದರಿಗಳು ಐಫೋನ್ 17ನಿಗೂ ಮೀರಿವೆ. ಅತ್ಯುತ್ತಮ ಫೋಟೋ, 8K ವಿಡಿಯೋ ಹಾಗೂ ನೈಸರ್ಗಿಕ ಚಿತ್ರ ಗುಣಮಟ್ಟ ನೀಡುವ 6 ಫೋನ್ಗಳಿವು.

Best Camera Smartphones: 2025ರಲ್ಲಿ ಮಾರುಕಟ್ಟೆಗೆ ಬಂದಿರುವ ಕ್ಯಾಮೆರಾ ಸ್ಮಾರ್ಟ್ಫೋನ್ಗಳು ಪ್ರೋಫೆಷನಲ್ ಮಟ್ಟದ ಫೋಟೋಗ್ರಫಿ ಅನುಭವ ನೀಡುತ್ತಿವೆ. ಈ ವರ್ಷ ಬಿಡುಗಡೆಯಾದ ಕೆಲವು ಪ್ರಮುಖ ಫೋನ್ಗಳು ಆಪಲ್ನ ಐಫೋನ್ 17ಗಿಂತಲೂ (iPhone 17) ಹೆಚ್ಚಿನ ಕ್ಯಾಮೆರಾ ಸಾಮರ್ಥ್ಯ ತೋರಿಸುತ್ತಿವೆ.
Google Pixel 10: ರೂ.79,999 ದರದ ಈ ಫೋನ್ನಲ್ಲಿ 48MP ವೈಡ್ ಸೆನ್ಸರ್, 10.8MP ಟೆಲಿಫೋಟೋ ಲೆನ್ಸ್ ಮತ್ತು 13MP ಅಲ್ಟ್ರಾ ವೈಡ್ ಶೂಟರ್ ನೀಡಲಾಗಿದೆ. AI ಇಮೇಜಿಂಗ್, ಅಲ್ಟ್ರಾ-HDR ಮತ್ತು 4K ವಿಡಿಯೋ ಬೆಂಬಲದೊಂದಿಗೆ ಇದು ಫೋಟೋ ಗುಣಮಟ್ಟದಲ್ಲಿ ಅಗ್ರ ಸ್ಥಾನದಲ್ಲಿದೆ.
Xiaomi 15 Ultra: ರೂ.1,09,999 ದರದ ಈ ಫೋನ್ ಲೈಕಾ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲ್ಪಟ್ಟಿದೆ. 1 ಇಂಚಿನ 50MP ಪ್ರೈಮರಿ ಸೆನ್ಸರ್ ಮತ್ತು 200MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದ್ದು, 8K ವಿಡಿಯೋ ಹಾಗೂ 32MP 4K ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.
Samsung Galaxy S24 Ultra: 200MP ಮೈನ್ ಲೆನ್ಸ್, 50MP ಪೆರಿಸ್ಕೋಪ್ ಮತ್ತು 12MP ಅಲ್ಟ್ರಾವೈಡ್ ಸೆನ್ಸರ್ಗಳೊಂದಿಗೆ HDR10+, 8K ರೆಕಾರ್ಡಿಂಗ್ ಮತ್ತು ಲೇಸರ್ AF ಬೆಂಬಲವನ್ನು ನೀಡುತ್ತದೆ. ರೂ.79,999 ದರದಲ್ಲಿ ಲಭ್ಯವಿರುವ ಇದು ಫ್ಲಾಗ್ಶಿಪ್ ವಿಭಾಗದಲ್ಲಿ ಉನ್ನತ ಸ್ಥಾನದಲ್ಲಿದೆ.
Vivo X200 ಕೂಡ ಟ್ರಿಪಲ್ 50MP ಕ್ಯಾಮೆರಾ ಸೆಟಪ್, Zeiss ಆಪ್ಟಿಕ್ಸ್ ಮತ್ತು 32MP 4K ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ರೂ.65,999 ದರದ ಈ ಫೋನ್ ಪ್ರೀಮಿಯಂ ಫೋಟೋಗ್ರಫಿ ಅನುಭವ ನೀಡುತ್ತಿದೆ.
Oppo Find X8: ರೂ.68,999 ದರದ ಈ ಮಾದರಿಯಲ್ಲಿ ಹಾಸೆಲ್ಬ್ಲಾಡ್ ಟ್ಯೂನ್ ಮಾಡಿದ ಟ್ರಿಪಲ್ 50MP ಲೆನ್ಸ್ಗಳು ಮತ್ತು ಡಾಲ್ಬಿ ವಿಷನ್ 4K ವಿಡಿಯೋ ರೆಕಾರ್ಡಿಂಗ್ವಿದೆ. ಸಿನೆಮಾಟಿಕ್ ಗುಣಮಟ್ಟದ ಫೋಟೋ ಹಾಗೂ ವಿಡಿಯೋ ಅನುಭವ ನೀಡುತ್ತದೆ.
ಕೊನೆಯದಾಗಿ OnePlus 13: ರೂ.63,998 ದರದ ಈ ಫೋನ್ ಹಾಸೆಲ್ಬ್ಲಾಡ್ ಕ್ಯಾಮೆರಾ ಟ್ಯೂನ್ನೊಂದಿಗೆ, 8K ವಿಡಿಯೋ ಬೆಂಬಲ ಮತ್ತು Snapdragon 8 ಎಲೈಟ್ ಚಿಪ್ನಿಂದ ಶಕ್ತಿಯುತ ಪ್ರದರ್ಶನ ನೀಡುತ್ತದೆ. ಇದು iPhone 17ಗೆ ಬಲವಾದ ಪ್ರತಿಸ್ಪರ್ಧಿಯಾಗಿದೆ.
ಇವೆಲ್ಲಾ ಮಾದರಿಗಳು ಫೋಟೋಗ್ರಫಿ ಪ್ರಿಯರಿಗೆ ಹೊಸ ತಲೆಮಾರಿನ ಅನುಭವ ನೀಡುತ್ತಿದ್ದು, ಐಫೋನ್ 17ಗಿಂತ ಹೆಚ್ಚು ಸ್ಪಷ್ಟತೆ ಹಾಗೂ ನೈಸರ್ಗಿಕ ಬಣ್ಣಗಳಲ್ಲಿ ಚಿತ್ರಗಳನ್ನು ನೀಡುತ್ತಿವೆ.
Top 6 Camera Smartphones That Beat iPhone 17 in 2025







