ವ್ಯವಸಾಯ ಮಾಡುವ ರೈತರಿಗೆ ಹೆಚ್ಚಿನ ಆದಾಯ ಬೇಕು ಎಂದರೆ, ಜಾನುವಾರು ಸಾಕಾಣಿಕೆ ಒಳ್ಳೆಯ ಆಯ್ಕೆ ಆಗಿದೆ. ರೈತರು ಮಾತ್ರವಲ್ಲ ಸಾಮಾನ್ಯ ಜನರು ಕೂಡ ಇವುಗಳ ಸಾಕಾಣಿಕೆ ಮಾಡಬಹುದು. ಕುರಿ ಸಾಕಾಣಿಕೆ ಒಳ್ಳೆಯ ಬ್ಯುಸಿನೆಸ್, ಇದರಿಂದ ಲಾಭ ಕೂಡ ಚೆನ್ನಾಗಿಯೇ ಬರುತ್ತದೆ. ಆದರೆ ಕುರಿ ಸಾಕಾಣಿಕೆಯಲ್ಲಿ ನೀವು ಯಾವ ತಳಿಯ ಕುರಿಯನ್ನು ಸಾಕಾಣಿಕೆ ಮಾಡುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಈ ತಳಿಯ ಕುರಿಯನ್ನು ಸಾಕಾಣಿಕೆ ಮಾಡಿದರೆ, ಅದರಿಂದ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ..
ಕುರಿ ಸಾಕಾಣಿಕೆಗೆ ಒಳ್ಳೆಯ ಆಯ್ಕೆ ನಾಟಿ ತಳಿಯ ಕುರಿಗಳನ್ನು ಸಾಕುವುದು. ಇವುಗಳ ಮಾಂಸಕ್ಕೆ ಹೆಚ್ಚು ಬೇಡಿಕೆ ಇರುತ್ತದೆ. ಒಳ್ಳೆಯ ಹಣ ಕೂಡ ಸಿಗುತ್ತದೆ. ಹಾಗಾಗಿ ನಾಟಿ ಕುರಿಗಳನ್ನು ಸಾಕಾಣಿಕೆ ಮಾಡುವುದರಿಂದ ನೀವು ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಇವುಗಳನ್ನು ಸಾಕುವುದು ನೋಡಿಕೊಳ್ಳುವುದು ಕೂಡ ಬಹಳ ಸುಲಭ ಆಗಿರುತ್ತದೆ. ನೀವು ಹೆಚ್ಚು ಕಷ್ಟಪಡುವ ಹಾಗೆ ಇರುವುದಿಲ್ಲ. ಈ ಕೆಲಸದಲ್ಲಿ ಉತ್ತಮವಾದ ಹಣವನ್ನು ಕೂಡ ನಿರೀಕ್ಷೆ ಮಾಡಬಹುದು.
ಹೌದು, ನಾಟಿ ಕುರಿಗಳ ಸಾಕಾಣಿಕೆಗೆ ನೀವು ಶುರುವಿನಲ್ಲಿ 3 ರಿಂದ 4 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಒಂದು ನಾಟಿ ಕುರಿಯ ಮರಿಯನ್ನು 4 ರಿಂದ 5 ಸಾವಿರಕ್ಕೆ ಖರೀದಿ ಮಾಡಿದರೆ, 3 ತಿಂಗಳುಗಳ ನಂತರ ಅವುಗಳನ್ನು 25 ರಿಂದ 30 ಸಾವಿರಕ್ಕೆ ಮಾರಾಟ ಮಾಡಬಹುದು. ಇವುಗಳಿಗೆ ದಿನಕ್ಕೆ 2 ಸಾರಿ ಸಮೃದ್ಧಿಯಾದ ಮೇವು ಕೊಡಬೇಕು, ಆಗ ಈ ಕುರಿಗಳ ಆರೋಗ್ಯ ಉತ್ತಮವಾಗಿರುತ್ತದೆ. ಒಳ್ಳೆಯ ಲಾಭವನ್ನು ತಂದುಕೊಡುತ್ತದೆ.
ಇಲ್ಲಿ ನೀವು ನೆನಪಿಡಬೇಕಾದ ಮತ್ತೊಂದು ಪ್ರಮುಖವಾದ ವಿಷಯ ಏನು ಎಂದರೆ, ಕುರಿಗಳಿಗೆ ಬರುವ ರೋಗಗಳ ಬಗ್ಗೆ ಕೂಡ ನೀವು ತಿಳಿದುಕೊಂಡಿರಬೇಕು. ಅವುಗಳಿಗೆ ಆಗಾಗ ಚಿಕಿತ್ಸೆ ಕೊಡಿಸಬೇಕು, ಆಗ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕುರಿಗಳಿಗೆ ಚಿಕಿತ್ಸೆ ಕೊಡಿಸಲು ಒಂದು ಸಾರಿಗೆ 3 ರಿಂದ 4 ಸಾವಿರ ಬೇಕಾಗಬಹುದು. ಆದರೆ ನಿರ್ಲಕ್ಷ್ಯ ಮಾಡದೇ, ಚಿಕಿತ್ಸೆಗಳನ್ನು ಕೊಡಿಸಿ, ಇದರಿಂದ ನಿಮಗೆ ಕುರಿ ಮಾರಾಟ ಮಾಡುವ ವೇಳೆ, ಒಳ್ಳೆಯ ಲಾಭ ಸಿಗುತ್ತದೆ..
ಕುರಿಗಳ ಮಾಂಸಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ, ಇದು ಎಲ್ಲಾ ಕಾಲದಲ್ಲೂ ಒಳ್ಳೆಯ ಲಾಭ ತಂದುಕೊಡುವಂಥ ಬ್ಯುಸಿನೆಸ್ ಆಗಿರುತ್ತದೆ. 3 ರಿಂದ 4 ಲಕ್ಷ ಹೂಡಿಕೆ ಮಾಡಿ, ಕುರಿ ಸಾಕಾಣಿಕೆ ಬ್ಯುಸಿನೆಸ್ ಶುರು ಮಾಡಿದರೆ, 7 ರಿಂದ 8 ಲಕ್ಷದವರೆಗು ಲಾಭ ಗಳಿಸಬಹುದು. ಹಾಗಾಗಿ ಬೇಗ ಲಾಭ ಪಡೆಯಬೇಕು ಎಂದರೆ, ಈ ಬ್ಯುಸಿನೆಸ್ ನಿಮಗೆ ಒಳ್ಳೆಯ ಆಯ್ಕೆ ಆಗಿದೆ.
Try breeding this breed of sheep, double return on your investment
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.