ಟಿವಿಎಸ್ನಿಂದ ಹೊಸ ಅಡ್ವೆಂಚರ್ ಬೈಕ್ ಬಿಡುಗಡೆ, ಕಡಿಮೆ ಬೆಲೆಗೆ ಸೂಪರ್ ಫೀಚರ್ಸ್!
ಟಿವಿಎಸ್ ಸಂಸ್ಥೆ ತನ್ನ ಮೊದಲ ಅಡ್ವೆಂಚರ್ ಬೈಕ್ ಆಗಿ ‘ಅಪಾಚೆ RTX 300’ ಅನ್ನು ಬಿಡುಗಡೆ ಮಾಡಿದೆ. ಶಕ್ತಿಶಾಲಿ ಎಂಜಿನ್, ಆಧುನಿಕ ಸಸ್ಪೆನ್ಶನ್ ಮತ್ತು ಸ್ಪರ್ಧಾತ್ಮಕ ಬೆಲೆ ಇದರ ಪ್ರಮುಖ ಆಕರ್ಷಣೆ.

ಟಿವಿಎಸ್ ಕಂಪನಿ ತನ್ನ ಮೊದಲ ಅಡ್ವೆಂಚರ್ ಬೈಕ್ ಅಪಾಚೆ RTX 300 (TVS Apache RTX 300) ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಮಾದರಿ ರಾಯಲ್ ಎನ್ಫೀಲ್ಡ್ ಹಿಮಾಲಯನ್, KTM 250 ಅಡ್ವೆಂಚರ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ಗಳಿಗೆ ಪೈಪೋಟಿ ನೀಡಲಿದೆ.
ಅಪಾಚೆ ಸರಣಿಯ ಬೈಕ್ಗಳು ಈಗಾಗಲೇ ಉತ್ತಮ ಜನಪ್ರಿಯತೆ ಗಳಿಸಿರುವುದರಿಂದ, ಈ ಹೊಸ ಅಡ್ವೆಂಚರ್ ಮಾದರಿ ಬಗ್ಗೆ ಹೆಚ್ಚು ನಿರೀಕ್ಷೆ ಮೂಡಿದೆ. ಕಂಪನಿಯು ಶಕ್ತಿಶಾಲಿ ಎಂಜಿನ್, ಸುಧಾರಿತ ಸಸ್ಪೆನ್ಶನ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಈ ಬೈಕ್ ಅನ್ನು ಅಭಿವೃದ್ಧಿಪಡಿಸಿದೆ.
ಇದರ ಎಂಜಿನ್ 299 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ RT-XD4 ಆಗಿದ್ದು, 35.5 HP ಪವರ್ ಮತ್ತು 28.5 NM ಟಾರ್ಕ್ ನೀಡುತ್ತದೆ.
ಈ ಬೈಕ್ನಲ್ಲಿ 6-ಸ್ಪೀಡ್ ಗೇರ್ ಬಾಕ್ಸ್, ಬಿ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಮತ್ತು ಸ್ಲಿಪ್ಪರ್ ಕ್ಲಚ್ಗಳು ಸೇರಿವೆ. ಹಿಂಭಾಗದಲ್ಲಿ ಮೊಂಡೋ ಟ್ಯೂಬ್ ಸಸ್ಪೆನ್ಶನ್ ನೀಡಲಾಗಿದ್ದು, ಅಡ್ವೆಂಚರ್ ರೈಡಿಂಗ್ಗೆ ಅನುಕೂಲವಾಗುವಂತೆ ಹೈ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಮುಂಭಾಗದಲ್ಲಿ 19 ಇಂಚು ಮತ್ತು ಹಿಂಭಾಗದಲ್ಲಿ 17 ಇಂಚು ಟ್ಯೂಬ್ಲೆಸ್ ಟೈರ್ಗಳು ಅಳವಡಿಸಲಾಗಿದೆ.
ಫೀಚರ್ಗಳ ಪಟ್ಟಿಯು ಕೂಡ ಗಮನಾರ್ಹವಾಗಿದೆ, ABS ಬ್ರೇಕಿಂಗ್ ಸಿಸ್ಟಮ್, ಟ್ರಾಕ್ಷನ್ ಕಂಟ್ರೋಲ್, GoPro ಕಂಟ್ರೋಲ್, ಮ್ಯಾಪ್ ಮಿರರಿಂಗ್ ಮತ್ತು ಕರೆ-ಮೆಸೇಜ್ ಅಲರ್ಟ್ಗಳು ಲಭ್ಯವಿವೆ. ಟೂರ್, ರ್ಯಾಲಿ, ಅರ್ಬನ್ ಮತ್ತು ರೇನ್ ಸೇರಿದಂತೆ ನಾಲ್ಕು ವಿಭಿನ್ನ ರೈಡ್ ಮೋಡ್ಗಳಿವೆ.
ಟಿವಿಎಸ್ ಅಪಾಚೆ RTX 300 ಬೈಕ್ನ ತೂಕ ಸುಮಾರು 180 ಕಿಲೋಗ್ರಾಂ ಆಗಿದ್ದು, ಗ್ರೌಂಡ್ ಕ್ಲಿಯರೆನ್ಸ್ 200 ಮಿಮೀ ಮತ್ತು ಸೀಟ್ ಎತ್ತರ 835 ಮಿಮೀ ಇದೆ.
ಫ್ಯೂಯೆಲ್ ಟ್ಯಾಂಕ್ ಸಾಮರ್ಥ್ಯ 12.5 ಲೀಟರ್ ಆಗಿದೆ ಮತ್ತು ಪ್ರತಿ ಲೀಟರ್ಗೆ ಸರಾಸರಿ 30 ಕಿಮೀ ಮೈಲೇಜ್ ನೀಡುತ್ತದೆ. ಇದರ ಪ್ರಾರಂಭಿಕ ಬೆಲೆ ಸುಮಾರು ರೂ. 2 ಲಕ್ಷ ಎಂದು ಕಂಪನಿ ತಿಳಿಸಿದೆ.
TVS launches new Apache RTX 300 Adventure Bike



