ಫುಲ್ ಟ್ಯಾಂಕ್ ಮಾಡಿದ್ರೆ 700 ಕಿ.ಮೀ ಮೈಲೇಜ್ ಕೊಡುವ ಫ್ಯಾಮಿಲಿ ಬೈಕ್ ಇದು! ಭಾರೀ ಬೇಡಿಕೆ
ಕಡಿಮೆ ಬೆಲೆಯಲ್ಲೇ ಹೆಚ್ಚಿನ ಮೈಲೇಜ್ ನೀಡುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 2025 ಹೊಸ ರೂಪಾಂತರಗಳಲ್ಲಿ ಲಭ್ಯ. ಫುಲ್ ಟ್ಯಾಂಕ್ ಮಾಡಿದ್ರೆ 700 ಕಿ.ಮೀ ಮೈಲೇಜ್ ಕೊಡುವ ಈ ಬೈಕ್ ಸವಾರಿಗೆ ಯೋಗ್ಯವಾದ ಫ್ಯಾಮಿಲಿ ಬೈಕ್.

- 700 ಕಿ.ಮೀ ಮೈಲೇಜ್ ನೀಡುವ ಸ್ಟಾರ್ ಸಿಟಿ ಪ್ಲಸ್
- ಕಡಿಮೆ ಬೆಲೆ ರೂಪಾಂತರಗಳಲ್ಲಿ ಹೊಸ ವೈಶಿಷ್ಟ್ಯಗಳು
- ಫ್ಯಾಮಿಲಿ ಬೈಕ್ ಆಗಿ ಜನಪ್ರಿಯ ಆಯ್ಕೆ
TVS Star City Plus Bike: ದೈನಂದಿನ ಪ್ರಯಾಣಕ್ಕೆ ವಿಶ್ವಾಸಾರ್ಹ ಬೈಕ್ ಹುಡುಕುವವರಿಗೆ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ 2025 ಮತ್ತೊಮ್ಮೆ ಉತ್ತಮ ಆಯ್ಕೆಯಾಗಿ ಪರಿಣಮಿಸಿದೆ. ಕಡಿಮೆ ಬೆಲೆಯಲ್ಲೇ ಹೆಚ್ಚು ಮೈಲೇಜ್ ನೀಡುವ ಕಾರಣದಿಂದಲೂ ಇದು ಕುಟುಂಬ ಬಳಕೆಗೆ (Family Bike) ಸೂಕ್ತವಾದ ದ್ವಿಚಕ್ರ ವಾಹನ ಎನ್ನಿಸಿಕೊಂಡಿದೆ. ಹೊಸ ನವೀಕರಿತ ರೂಪದಲ್ಲಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ರೂಪಾಂತರಗಳನ್ನು ಕಂಪನಿ ಬಿಡುಗಡೆ ಮಾಡಿದೆ.
ಈ ಬೈಕ್ 109.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ನೊಂದಿಗೆ ಬರುತ್ತದೆ. ಎಲೆಕ್ಟ್ರಾನಿಕ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನ ಹೊಂದಿರುವ ಈ ಎಂಜಿನ್ 7,350 RPM ನಲ್ಲಿ 8.08 bhp ಹಾಗೂ 4,500 RPM ನಲ್ಲಿ 8.7 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 4-ಸ್ಪೀಡ್ ಆಲ್-ಅಪ್ ಗೇರ್ಬಾಕ್ಸ್ ಬಳಕೆ ಮಾಡಿರುವ ಕಾರಣ ನಗರ ಟ್ರಾಫಿಕ್ನಲ್ಲಿ ಸಹ ಸುಲಭ ಸವಾರಿ ಸಾಧ್ಯ.
ಇದನ್ನೂ ಓದಿ: ಕೇವಲ ₹5,000 ಕ್ಕೆ ಈ ಬೈಕ್ ಖರೀದಿಸಿ! ಕಡಿಮೆ ಡೌನ್ ಪೇಮೆಂಟ್, ಇಲ್ಲಿದೆ ಇಎಂಐ ಲೆಕ್ಕಾಚಾರ
ಮೈಲೇಜ್ ವಿಷಯದಲ್ಲಿ ಸ್ಟಾರ್ ಸಿಟಿ ಪ್ಲಸ್ ತನ್ನ ಶ್ರೇಣಿಯಲ್ಲಿ ಗಮನ ಸೆಳೆಯುತ್ತದೆ. 10 ಲೀಟರ್ ಫುಲ್ ಟ್ಯಾಂಕ್ನಲ್ಲಿ ಸುಮಾರು 700 ಕಿ.ಮೀ ಸವಾರಿ ಸಾಧ್ಯವೆಂದು ವರದಿ ತಿಳಿಸಿದೆ.
70 kmpl ಇಂಧನ ದಕ್ಷತೆಯ ಕಾರಣ ಈ ಬೈಕ್ ಸಾಮಾನ್ಯ ಬಳಕೆದಾರರ ನಡುವೆ ಹೆಚ್ಚು ಜನಪ್ರಿಯವಾಗಿದೆ. 115–116 ಕೆಜಿ ತೂಕ ಮತ್ತು 172 mm ಗ್ರೌಂಡ್ ಕ್ಲಿಯರೆನ್ಸ್ ದೈನಂದಿನ ಸವಾರಿಗೆ ಅನುಕೂಲಕರ.
ಬೆಲೆ ವಿಚಾರಕ್ಕೆ ಬಂದರೆ, ಬೆಂಗಳೂರಿನ ಆನ್-ರೋಡ್ ಬೆಲೆಗಳು ಹೀಗಿವೆ:
- ಸ್ಟಾರ್ ಸಿಟಿ ಪ್ಲಸ್ ಡ್ರಮ್ – ₹87,120
- ಸ್ಟಾರ್ ಸಿಟಿ ಪ್ಲಸ್ ಡಿಸ್ಕ್ – ₹91,261
ಇದನ್ನೂ ಓದಿ: ಹೊಸ ಕಾರ್ ಖರೀದಿ ಮಾಡ್ತಾ ಇದ್ದೀರಾ? ಈ ಬ್ಯಾಂಕ್ಗಳಲ್ಲಿ ಕಮ್ಮಿ ಬಡ್ಡಿಗೆ ಲೋನ್ ಸಿಗುತ್ತೆ ನೋಡಿ
ವೈಶಿಷ್ಟ್ಯಗಳ ಕಡೆಗೂ ಈ ಬೈಕ್ ಹೆಚ್ಚು ಗಮನ ಸೆಳೆಯುತ್ತದೆ. ಪೂರ್ಣ LED ಹೆಡ್ಲ್ಯಾಂಪ್ ಸೆಟಪ್, USB ಮೊಬೈಲ್ ಚಾರ್ಜಿಂಗ್, ಇಕಾನೊಮೀಟರ್ ಜೊತೆ ಮಲ್ಟಿ-ಫಂಕ್ಷನಲ್ ಕನ್ಸೋಲ್ ಮತ್ತು 5-ಹಂತ ಅಡ್ಜಸ್ಟಬಲ್ ಹಿಂಭಾಗದ ಶಾಕ್ ಅಬ್ಸಾರ್ಬರ್ ಅನ್ನು ನೀಡಲಾಗಿದೆ. ಡ್ಯುಯಲ್-ಟೋನ್ ಸೀಟುಗಳು, ಕನ್ನಡಿಗಳು ಮತ್ತು 3D ಟ್ಯಾಂಕ್ ಬ್ಯಾಡ್ಜಿಂಗ್ ನೋಟವನ್ನೂ ಮತ್ತಷ್ಟು ಆಕರ್ಷಕಗೊಳಿಸುತ್ತದೆ.
ಡ್ರಮ್ ಮಾದರಿಯಲ್ಲಿ 130 mm ಮುಂಭಾಗದ ಡ್ರಮ್ ಮತ್ತು 110 mm ಹಿಂಭಾಗದ ಡ್ರಮ್ ನೀಡಲಾಗಿದ್ದರೆ, ಡಿಸ್ಕ್ ರೂಪಾಂತರದಲ್ಲಿ 240 mm ಮುಂಭಾಗದ ಡಿಸ್ಕ್ ಬ್ರೇಕ್ ನೀಡಲಾಗಿದೆ. 17 ಇಂಚಿನ ಟ್ಯೂಬ್ಲೆಸ್ ಟೈರ್ಗಳು ವಿವಿಧ ರಸ್ತೆ ಪರಿಸ್ಥಿತಿಗಳಿಗೆ ತಕ್ಕಂತೆ ವಿನ್ಯಾಸಗೊಂಡಿವೆ.
TVS Star City Plus Offers 700 KM Mileage



