ಹೊಸ ಕಾರು ಖರೀದಿಸುವವರಿಗೆ ಭಾರೀ ಡಿಸ್ಕೌಂಟ್! ಬರೋಬ್ಬರಿ 4 ಲಕ್ಷದವರೆಗೆ ಆಫರ್!

Car Discount: ನವೆಂಬರ್ ತಿಂಗಳಿಗೆ ಎಂಜಿ ಮೋಟಾರ್ಸ್ ಹಲವು ಕಾರು ಮಾದರಿಗಳ ಮೇಲೆ ರೂ.4 ಲಕ್ಷವರೆಗೆ ವಿಶೇಷ ರಿಯಾಯಿತಿ ಘೋಷಿಸಿದೆ. ಟಾಟಾ ಸೇರಿದಂತೆ ಅನೇಕ ಕಂಪನಿಗಳು ಕೂಡ ಆಕರ್ಷಕ ಆಫರ್‌ಗಳನ್ನು ನೀಡುತ್ತಿವೆ.

Car Offers: ದೇಶದಲ್ಲಿ ಜಿಎಸ್ಟಿ 2.0 ಜಾರಿಗೆ ಬಂದ ಬಳಿಕ ವಾಹನ ಮಾರುಕಟ್ಟೆ ಮತ್ತೆ ಚೈತನ್ಯಗೊಂಡಿದೆ. ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚುತ್ತಿರುವ ಈ ಸಮಯದಲ್ಲಿ ಕಾರು ಬ್ರಾಂಡ್‌ಗಳು ಹೆಚ್ಚಿನ ಸೇಲ್ಸ್ ಗುರಿ ಸಾಧಿಸಲು ಬಲವಾದ ಆಫರ್‌ಗಳನ್ನು ಪ್ರಕಟಿಸುತ್ತಿವೆ.

ಟಾಟಾ ಮೋಟರ್ಸ್ ಈಗಾಗಲೇ ತನ್ನ ಕೆಲವು ಮಾದರಿಗಳಿಗೆ ಡಿಸ್ಕೌಂಟ್ ನೀಡುತ್ತಿದ್ದರೆ, ಈಗ ಎಂಜಿ ಮೋಟಾರ್ಸ್ (MG Motors India) ನವೆಂಬರ್ ತಿಂಗಳಿಗೆ ವಿಶೇಷ ಆಫರ್‌ಗಳನ್ನೇ ಘೋಷಿಸಿದೆ.

ಈ ಆಫರ್‌ಗಳಲ್ಲಿ ಪ್ರಮುಖವಾದುದು MG Gloster. ಟೊಯೋಟಾ ಫಾರ್ಚುನರ್‌ಗೆ ಪೈಪೋಟಿ ನೀಡುವ ಈ ಪ್ರೀಮಿಯಂ SUV ಎಕ್ಸ್‌ಷೋ ರೂಂ ಬೆಲೆ ₹38.33 ಲಕ್ಷದಿಂದ ಪ್ರಾರಂಭವಾಗುತ್ತದೆ. ಆದರೆ ಈ ತಿಂಗಳಲ್ಲಿ ಬುಕ್ ಮಾಡಿದರೆ ಸುಮಾರು ₹34.22 ಲಕ್ಷಕ್ಕೆ ದೊರೆಯುತ್ತದೆ. ಗರಿಷ್ಠ ₹4 ಲಕ್ಷವರೆಗೆ ಬೆನಿಫಿಟ್ ಒಳಗೊಂಡಿದೆ.

MG ಕಂಪನಿಯ ಜನಪ್ರಿಯ SUV ಆಗಿರುವ Hector ಕೂಡ ಆಫರ್ ಪಟ್ಟಿ ಸೇರಿದೆ. 2019ರಲ್ಲಿ ಭಾರತದಲ್ಲಿ ಲಾಂಚ್ ಆದ ನಂತರ ಈ ಕಾರು ಉತ್ತಮ ಬೇಡಿಕೆ ಉಳಿಸಿಕೊಂಡಿದೆ. ನವೆಂಬರ್‌ನಲ್ಲಿ ಹೆಕ್ಟರ್ ಅನ್ನು ಬುಕ್ ಮಾಡಿದರೆ ₹90,000ವರೆಗೆ ಲಾಭ ಸಿಗುತ್ತದೆ. ಕೆಲವು ವೇರಿಯಂಟ್‌ಗಳಲ್ಲಿ ₹65,000ವರೆಗೆ ನೇರ ಡಿಸ್ಕೌಂಟ್ ದೊರೆಯುತ್ತದೆ.

ಇದನ್ನೂ ಓದಿ: ಕೇವಲ ₹29,999ಕ್ಕೆ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಒಮ್ಮೆ ಚಾರ್ಜ್ ಮಾಡಿದ್ರೆ 80 ಕಿಮೀ ಪಕ್ಕ ಮೈಲೇಜ್

ಎಲೆಕ್ಟ್ರಿಕ್ SUV ಖರೀದಿ ಯೋಚನೆಯಲ್ಲಿ ಇರುವವರಿಗೆ MG ZS EV ಒಳ್ಳೆಯ ಅವಕಾಶ. ₹15.50 ಲಕ್ಷದಿಂದ ಆರಂಭವಾಗುವ ಇದರ ಎಕ್ಸ್‌ಷೋ ರೂಂ ಬೆಲೆಗೆ ಈ ತಿಂಗಳಲ್ಲಿ ₹1.25 ಲಕ್ಷವರೆಗೆ ರಿಯಾಯಿತಿ ಲಭ್ಯ.

ಮತ್ತೊಂದು ಜನಪ್ರಿಯ ಕಂಪ್ರೆಕ್ಟ್ SUV MG Astor. ಈ ಕಾರನ್ನು ಈಗ ಬುಕ್ ಮಾಡಿದರೆ ₹35,000ವರೆಗೆ ರಿಯಾಯಿತಿ ಸಿಗುತ್ತದೆ. ₹9.65 ಲಕ್ಷದಿಂದ ₹15.36 ಲಕ್ಷವರೆಗೆ ಬೆಲೆ ಹೊಂದಿರುವ ಈ ಕಾರಿಗೆ ಕಾರ್ಪೊರೇಟ್ ಮತ್ತು ಲಾಯಲ್ಟಿ ಬೋನಸ್ ಸೇರಿದೆ.

ಬಜೆಟ್ ಎಲೆಕ್ಟ್ರಿಕ್ ಕಾರುಗಳಲ್ಲಿ (Electric Cars) ಸ್ಥಾನ ಪಡೆದಿರುವ MG Comet ಮೇಲೂ ವಿಶೇಷ ಡಿಸ್ಕೌಂಟ್ ಇದೆ. ಕ್ಯಾಶ್, ಲಾಯಲ್ಟಿ ಹಾಗೂ ಎಕ್ಸ್‌ಛೇಂಜ್/ಸ್ಕ್ರ್ಯಾಪೇಜ್ ಬೋನಸ್ ಸೇರಿ ಗ್ರಾಹಕರು ₹28,000 ರಿಂದ ₹56,000ವರೆಗೆ ಲಾಭ ಪಡೆಯಬಹುದು.

ಕಾರು ಖರೀದಿಸುವ ಯೋಜನೆ ಇಟ್ಟಿರೋವರು ಈ ತಿಂಗಳ ಆಫರ್‌ಗಳನ್ನು ಬಳಸಿಕೊಂಡರೆ ದಿಟ್ಟ ಮಟ್ಟದ ಉಳಿತಾಯ ಸಾಧ್ಯ. ರಿಯಾಯಿತಿಗಳ ಪ್ರಮಾಣ ಹೆಚ್ಚಿರುವುದರಿಂದ MG ಕಾರುಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

Up to 4 Lakh Discount on New MG Cars

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories