ನಿಮ್ಮ ಆಧಾರ್ ಕಾರ್ಡ್ ಈ ರೀತಿ ಇದ್ದರೆ, ಈಗಲೇ ಸೈಬರ್ ಸೆಂಟರ್ ಗೆ ಹೋಗಿ! ಸರ್ಕಾರದ ಹೊಸ ರೂಲ್ಸ್
ಆಧಾರ್ ಕಾರ್ಡ್ ಬಗ್ಗೆ ಈಗ ಹೊಸ ನಿಯಮ ಬಂದಿದ್ದು, ನೀವು ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಆಗಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು.
ನಮ್ಮ ದೇಶದ ಜನರಿಗೆ ಪ್ರಮುಖ ಗುರುತಿನ ಚೀಟಿ ಆಧಾರ್ ಕಾರ್ಡ್ (Aadhaar Card). ಈಗ ಯಾವುದೇ ಕೆಲಸ ಮಾಡುವುದಕ್ಕಾದರು ಸರಿ ಆಧಾರ್ ಕಾರ್ಡ್ ಬೇಕೇ ಬೇಕು. ಸರ್ಕಾರದ ಯೋಜನೆಗಳ ಫಲ ಪಡೆಯಲು ಕೂಡ ಆಧಾರ್ ಕಾರ್ಡ್ ಅಗತ್ಯವಾಗಿದೆ.
ಒಂದು ವೇಳೆ ಮಹಿಳೆಯರು ಫ್ರೀ ಬಸ್ ನಲ್ಲಿ (Free Bus) ಪ್ರಯಾಣ ಮಾಡಬೇಕು ಎಂದರೆ ಅವರ ಬಳಿ ಕೂಡ ಆಧಾರ್ ಕಾರ್ಡ್ ಇರಲೇಬೇಕು. ಈ ಆಧಾರ್ ಕಾರ್ಡ್ ಬಗ್ಗೆ ಈಗ ಹೊಸ ನಿಯಮ ಬಂದಿದ್ದು, ನೀವು ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಆಗಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ (Update Aadhaar Card) ಮಾಡಿಸಬೇಕು.
ನಿಮ್ಮ ಮಾಹಿತಿ ಅಪ್ಡೇಟ್ ಮಾಡುವುದು ಅಗತ್ಯವಾಗಿದೆ, ಇದರಿಂದ ಆಧಾರ್ ಕಾರ್ಡ್ ಸ್ಕ್ಯಾಮ್ ಆಗುವುದನ್ನು ತಪ್ಪಿಸಬಹುದಾಗಿದೆ. ಸರ್ಕಾರ ಈಗಾಗಲೇ ಸೂಚಿಸಿರುವ ಹಾಗೆ, ಒಂದು ವೇಳೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದರೆ ನಿಮ್ಮ ಹತ್ತಿರ ಇರುವ UIDAI ಕೇಂದ್ರಕ್ಕೆ ಭೇಟಿ ನೀಡಿ, ಈಗ ಹೊಸ ಅಭಿವೃದ್ಧಿ ಆಗಿರುವ ತಂತ್ರಜ್ಞಾನದ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು.
ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಅವರ ಆಧಾರ್ ಕಾರ್ಡ್ ಗು ಸಹ ಬಯೋಮೆಟ್ರಿಕ್ ಮಾಡಿಸಿ, ಮೊಬೈಲ್ ನಂಬರ್ ಲಿಂಕ್ ಮಾಡಿಸಬೇಕು. ಈಗ ಸರ್ಕಾರದ ಯೋಜನೆಗಳ ಫಲ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಆಗಿರುವುದರಿಂದ, ಈಗ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕು. 10 ವರ್ಷಕ್ಕೆ ಒಂದು ಸಾರಿ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸುವುದು ಅಗತ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ಒಂದು ವೇಳೆ ನೀವು ಕೂಡ ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಕಳೆದಿದ್ದರೆ, ಶೀಘ್ರವೇ ಹತ್ರಿರದ UIDAI ಕೇಂದ್ರಕ್ಕೆ ಹೋಗಿ ಆಧಾರ್ ಅಪ್ಡೇಟ್ ಹಾಗೂ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿ. 10 ವರ್ಷಕ್ಕೆ ಒಂದು ಸಾರಿ ನಿಮ್ಮ ಮಾಹಿತಿಗಳನ್ನು ಅಪ್ಡೇಟ್ ಮಾಡುವುದು ಉತ್ತಮವಾಗಿದೆ.
ನಿಮ್ಮ ಆಧಾರ್ ಕಾರ್ಡ್ ಅನ್ನು ಮತ್ತೊಬ್ಬರು ಮಿಸ್ ಯೂಸ್ ಮಾಡಿಕೊಳ್ಳುವುದನ್ನು ಇದು ತಪ್ಪಿಸಬಹುದು. ಈ ಕಾರಣಕ್ಕೆ ಸರ್ಕಾರ ಕೂಡ ನಿಮಗೆ ಆಧಾರ್ ಅಪ್ಡೇಟ್ ಮಾಡಿಸಲು ಸೂಚನೆ ಕೊಡುತ್ತಿದೆ.
ಸರ್ಕಾರವೇ ಕೊಡುತ್ತೆ ದುಡ್ಡು! ಅಡುಗೆ ಮನೆಯಿಂದಲೇ ಲಕ್ಷ ಲಕ್ಷ ಸಂಪಾದಿಸಿ.. ಮಹಿಳೆಯರಿಗಾಗಿ ಬೆಸ್ಟ್ ಬಿಸಿನೆಸ್ ಐಡಿಯಾ
ಆಧಾರ್ ಅಪ್ಡೇಟ್ ಮಾಡಿಸಲು ಹೋಗುವವರು ಒಂದೆರಡು ವಿಷಯವನ್ನು ನೆನಪಿನಲ್ಲಿ ಇಡಬೇಕು, ಆಧಾರ್ ಅಪ್ಡೇಟ್ ಗೆ 5 ವರ್ಷದಿಂದ 7 ವರ್ಷದ ಮಕ್ಕಳವರೆಗು ಆಧಾರ್ ಅಪ್ಡೇಟ್ ಉಚಿತವಾಗಿ ಮಾಡಿಸಬಹುದು.
ಅಪ್ಡೇಟ್ ನಲ್ಲಿ ಹೆಸರು, ಅಡ್ರೆಸ್, ಮೊಬೈಲ್ ನಂಬರ್, ಹುಟ್ಟಿದ ದಿನಾಂಕ, ಲಿಂಗ, ಬಯೋಮೆಟ್ರಿಕ್, ಕಣ್ಣು, ಮುಖ, ಕೈಬೆರಳುಗಳ ಗುರುತನ್ನು ಅಪ್ಡೇಟ್ ಮಾಡಿಸಬಹುದು. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಈಗಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ.
Update your 10 year old Aadhaar card now