ಅದ್ಬುತ ಕ್ಯಾಮೆರಾ ಸೆಟಪ್ ಹೊಂದಿರುವ ವಿವೋದ ಹೊಸ ಫೋನ್ ಬಿಡುಗಡೆ

ವಿವೋ ಕಂಪನಿಯು ಹೊಸ ಫ್ಲ್ಯಾಗ್‌ಶಿಪ್ Vivo X300 ಮತ್ತು X300 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. 200MP Zeiss ಕ್ಯಾಮೆರಾ, ಶಕ್ತಿಯುತ ಪ್ರೊಸೆಸರ್ ಮತ್ತು ವೇಗದ ಚಾರ್ಜಿಂಗ್ ತಂತ್ರಜ್ಞಾನವಿದೆ.

Vivo X300 Smartphone : ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಹೆಸರಾಂತ ಬ್ರಾಂಡ್ ವಿವೋ (Vivo) ತನ್ನ ಹೊಸ ಫ್ಲ್ಯಾಗ್‌ಶಿಪ್ ಸರಣಿ Vivo X300 ಮತ್ತು X300 Pro ಅನ್ನು ಬಿಡುಗಡೆ ಮಾಡಿದೆ. ಅತ್ಯಾಧುನಿಕ ಫೋಟೋಗ್ರಫಿ ವೈಶಿಷ್ಟ್ಯಗಳು, ಶಕ್ತಿಯುತ ಪ್ರೊಸೆಸರ್ ಮತ್ತು ಅದ್ಭುತ ಡಿಸ್‌ಪ್ಲೇ ಸಹಿತ ಈ ಫೋನ್ಗಳು ತಂತ್ರಜ್ಞಾನ ಪ್ರಿಯರನ್ನು ಸೆಳೆದಿವೆ.

Vivo X300 ಮಾದರಿಯಲ್ಲಿ 6.3 ಇಂಚಿನ LTPO ಡಿಸ್‌ಪ್ಲೇ, HDR10+ ಸಪೋರ್ಟ್ ಮತ್ತು 2K ರೆಸಲ್ಯೂಷನ್ ಇರುವ ಸ್ಕ್ರೀನ್ ಇದೆ. ಇದು 120Hz ರಿಫ್ರೆಶ್ ರೇಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 9500 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಈ ಫೋನ್‌ನಲ್ಲಿ ಪ್ರಮುಖ ಆಕರ್ಷಣೆ ಕ್ಯಾಮೆರಾ ವಿಭಾಗವಾಗಿದೆ.

ಇದರಲ್ಲಿ Zeiss ಬ್ರಾಂಡ್‌ನ ಟ್ರಿಪಲ್ ಕ್ಯಾಮೆರಾ ಸೆಟಪ್ (200MP + 50MP + 50MP) ಇದೆ. 50MP ಸೆಲ್ಫಿ ಕ್ಯಾಮೆರಾ, 40W ವೈರ್‌ಲೆಸ್ ಹಾಗೂ 90W ಫ್ಲ್ಯಾಶ್ ಚಾರ್ಜಿಂಗ್ ಸಪೋರ್ಟ್ ಸಹ ಇದೆ. ಬ್ಯಾಟರಿ ಸಾಮರ್ಥ್ಯ 6040mAh.

ಇದಕ್ಕೆ ಪೂರಕವಾಗಿ Vivo X300 Pro ಮಾದರಿಯಲ್ಲಿ 6.78 ಇಂಚಿನ AMOLED ಸ್ಕ್ರೀನ್ ಇದೆ. 120Hz ರಿಫ್ರೆಶ್ ರೇಟ್, ಡಾಲ್ಬಿ ವೀಜನ್ ಸಪೋರ್ಟ್ ಹಾಗೂ 4500 ನಿಟ್ಸ್ ಪೀಕ್ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಈ ಫೋನ್‌ನಲ್ಲಿಯೂ ಅದೇ ಮೀಡಿಯಾಟೆಕ್ ಡೈಮೆನ್ಸಿಟಿ 9500 ಪ್ರೊಸೆಸರ್ ಹಾಗೂ Zeiss ಟ್ರಿಪಲ್ ಕ್ಯಾಮೆರಾ ಸೆಟಪ್ ದೊರೆಯುತ್ತದೆ. ಪ್ರೋ ಮಾದರಿಯಲ್ಲಿ ಹೆಚ್ಚುವರಿ ಲೆನ್ಸ್ ಅಟ್ಯಾಚ್ ಮಾಡುವ ಸೌಲಭ್ಯ ಸಹ ನೀಡಲಾಗಿದೆ.

ವಿವೋ ಈ ಎರಡೂ ಫೋನ್‌ಗಳನ್ನು ಪ್ರಾಥಮಿಕವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಶೀಘ್ರದಲ್ಲೇ ಲಾಂಚ್ ಆಗುವ ನಿರೀಕ್ಷೆ ಇದೆ.

ಬೆಲೆ ವಿಚಾರಕ್ಕೆ ಬಂದರೆ, Vivo X300 (12GB + 256GB) ಮಾದರಿ ಸುಮಾರು ₹60,000 ಇರಬಹುದಾದರೆ, X300 Pro ಮಾದರಿ ₹99,999 ದ ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

Vivo X300 Smartphone Series Launch, Stunning Zeiss Camera with Powerful Features

Related Stories