Business News

ಚೆಕ್ ಮೇಲೆ ಕಪ್ಪು ಇಂಕ್ ನಲ್ಲಿ ಬರೆದರೆ ಏನಾಗುತ್ತೆ ಗೊತ್ತಾ? ಮಾರ್ಗಸೂಚಿ ಇಲ್ಲಿದೆ!

Cheque Rules: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಅವುಗಳಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎಂಬುದನ್ನು ನಾವು ಚೆಕ್ ಮಾಡಿ ನಂತರವಷ್ಟೇ ಮಾಹಿತಿಯನ್ನು ನಂಬಬೇಕು. ಇಲ್ಲವಾದರೆ, ಮುಂದೆ ಸಮಸ್ಯೆ ಆಗಬಹುದು.

ಅದರಲ್ಲೂ ಬ್ಯಾಂಕ್ಗೆ (Bank) ಸಂಬಂಧಪಟ್ಟ ವಿಷಯದಲ್ಲಂತೂ ನಾವು ಎಷ್ಟು ಜಾಗರೂಕರಾಗಿ ಇದ್ದರೂ ಸಾಲದು. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಚೆಕ್ ಬಗ್ಗೆ ಒಂದು ವದಂತಿ ಹಬ್ಬಿತ್ತು. ಅದರ ಸತ್ಯಾಸತ್ಯತೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಚೆಕ್ ಮೇಲೆ ಕಪ್ಪು ಇಂಕ್ ನಲ್ಲಿ ಬರೆದರೆ ಏನಾಗುತ್ತೆ ಗೊತ್ತಾ? ಮಾರ್ಗಸೂಚಿ ಇಲ್ಲಿದೆ!

ಚೆಕ್ ಮೇಲೆ ಕಪ್ಪು ಇಂಕ್ ನಲ್ಲಿ ಬರೆಯಬಾರದು!

ನಾವು ಎಷ್ಟೇ ಆನ್ ಲೈನ್ ಮೂಲಕ ವ್ಯವಹಾರ ಮಾಡುತ್ತೇವೆ ಎಂದಾದರೂ ಬ್ಯಾಂಕ್ ನಲ್ಲಿ ಚೆಕ್ ಬುಕ್ ವ್ಯವಹಾರವನ್ನು ಕೂಡ ಮಾಡುತ್ತೇವೆ. ಹಾಗಾಗಿ ಚೆಕ್ ಬರೆಯುವ ವಿಷಯದಲ್ಲಿ ನಾವು ಹೆಚ್ಚು ಜಾಗರೂಕತೆಯಿಂದ ಇರಬೇಕಾಗುತ್ತದೆ.

ಚೆಕ್ ಬರೆಯುವಾಗ ಅದರದ್ದೇ ಆದ ನಿಯಮಗಳು ಇರುತ್ತವೆ. ಆ ನಿಯಮಗಳನ್ನು ಮೀರಿ ತಪ್ಪಾಗಿ ಚೆಕ್ ಬರೆದರೆ ಅದರಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸ ಬೇಕಾಗುತ್ತದೆ. ಅಕೌಂಟ್ ನಲ್ಲಿರುವ ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಗಬಹುದು.

ಚೆಕ್ ಬರೆಯಲು ಈ ಇಂಕ್ ಬಳಸಬೇಡಿ!

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರುವ ಈ ಸುದ್ದಿಯನ್ನು ನೀವೂ ನೋಡಿರಬಹುದು, ಕೇಳಿರಬಹುದು. ಚೆಕ್ ಮೇಲೆ ಕಪ್ಪು ಇಂಕ್ ನಲ್ಲಿ ಬರೆಯಬಾರದು ಎಂದು ಆರ್ ಬಿಲ್ ಐ ಹೊಸ ಮಾರ್ಗಸೂಚಿ ಹೊರಡಿಸಿದೆ ಎನ್ನುವ ಸುದ್ದಿ ಹಬ್ಬಿತ್ತು.

ಆದರೆ ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದಾಗ ನಿಜಾಂಶ ಹೊರಬಿದ್ದಿದೆ. ಚೆಕ್ ಗೆ ಸಂಬಂಧಪಟ್ಟ ಹಾಗೆ ಆರ್ ಬಿ ಐ ಯಾವುದೇ ಹೊಸ ನಿಯಮವನ್ನು ಮಾಡಿಲ್ಲ. ಕಪ್ಪು ಬಣ್ಣದ ಶಾಯಿಯಲ್ಲಿ ಬರೆಯಬಾರದು ಎಂದು ಎಲ್ಲಿಯೂ ಹೇಳಿಲ್ಲ. ಅಂತಹ ಚೆಕ್ ರಿಜೆಕ್ಟ್ ಆಗುವುದೂ ಇಲ್ಲ ಎಂದು ತಿಳಿದುಬಂದಿದೆ.

ಚೆಕ್ ನ ನಿಯಮಗಳು!

ಚೆಕ್ ಮೇಲೆ ಕಪ್ಪು ಬಣ್ಣದ ಇಂಕ್ ನಲ್ಲಿ ಸಹಿ ಮಾಡಬಾರದು ಎನ್ನುವ ನಿಯಮ ಇಲ್ಲ. ಇನ್ನು ಚೆಕ್ ಮೇಲೆ ಸರಿಯಾಗಿ ಕಾಣುವ ಹಾಗೆ, ಪರ್ಮನೆಂಟ್ ಇಂಕ್ ನಲ್ಲಿ ಸಹಿ ಹಾಕಬೇಕು. ಇದರಿಂದ ಯಾರು ಚೆಕ್ ನ್ನು ಕಾಪಿ ಮಾಡಲು ಸಾಧ್ಯವಿಲ್ಲ ಎಂದು ಆರ್ ಬಿ ಐ ಹೇಳಿದೆ.

ಹಾಗೆಯೇ, ಚೆಕ್ ನಲ್ಲಿ ಹೆಸರು ಮತ್ತು ಮೊತ್ತವನ್ನು ಸ್ಪಷ್ಟವಾಗಿ ಬರೆಯಬೇಕು. ಅಲ್ಲದೇ, ಚೆಕ್ ಒಮ್ಮೆ ಬರೆದ ನಂತರ ಅದರಲ್ಲಿ ಯಾವುದೇ ತಿದ್ದುಪಡಿ ಮಾಡುವಂತಿಲ್ಲ. ತಿದ್ದುಪಡಿ ಮಾಡಿದ ಚೆಕ್ ರಿಜೆಕ್ಟ್ ಆಗುತ್ತದೆ. ಒಟ್ಟಿನಲ್ಲಿ ಯಾವುದೇ ವೈರಲ್ ನ್ಯೂಸ್ ನಂಬುವ ಮೊದಲು ಕ್ರಾಸ್ ಚೆಕ್ ಮಾಡಿ, ಸತ್ಯವೋ ಸುಳ್ಳೋ ತಿಳಿದುಕೊಳ್ಳಿ!

What Happens If You Write on a Cheque with Black Ink

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories