ಮಗಳಿಗೆ ಮದುವೆ ಆದಮೇಲೆ ತಂದೆ ಆಸ್ತಿಯಲ್ಲಿ ಹಕ್ಕು ಸಿಗುತ್ತಾ? ತಂದೆ ಆಸ್ತಿಯಲ್ಲಿ ಮಗಳಿಗೆ ಸಿಗುವ ಪಾಲು ಎಷ್ಟು?

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಆಸ್ತಿ ವಿಷಯದಲ್ಲಿ ಹೆಣ್ಣುಮಕ್ಕಳಿಗೆ ಎಷ್ಟು ಹಕ್ಕು (Women Property Rights), ಗಂಡುಮಕ್ಕಳಿಗೆ ಎಷ್ಟು ಹಕ್ಕು ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಹೆಣ್ಣುಮಕ್ಕಳ ತಂದೆ ತಾಯಿಯ ಆಸ್ತಿಯಲ್ಲಿ ಇರುವ ಹಕ್ಕಿನ ಬಗ್ಗೆ ಮಾತನಾಡುವುದಾರೆ, ತಂದೆಯ ಸ್ವಯಾರ್ಜಿತ ಆಸ್ತಿ, ಪಿತ್ರಾರ್ಜಿತ ಆಸ್ತಿ, ತಾಯಿಯ ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿ, ಇದೆಲ್ಲದರ ಮೇಲು ಕೂಡ ಹೆಣ್ಣುಮಕ್ಕಳಿಗೆ ಹಕ್ಕು ಇರುತ್ತದೆ.
ಆದರೆ ಮದುವೆಯಾದ ನಂತರ ಹೆಣ್ಣುಮಕ್ಕಳಿಗೆ ಆಸ್ತಿ ಮೇಲೆ ಹಕ್ಕು (Property Rights), ಮತ್ತು ಎಷ್ಟು ಪಾಲು ಸಿಗಬೇಕು ಎನ್ನುವ ಬಗ್ಗೆ ಕಾನೂನಿನಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಕಾಯ್ದೆಯನ್ನು ಉತ್ತರಾಧಿಕಾರಿ ಹಕ್ಕು ಕಾಯ್ದೆ ಎಂದು ಕರೆಯುತ್ತಾರೆ, ಈ ಕಾಯ್ದೆಯ ಮೂಲಕ ಮನೆಯ ಹೆಣ್ಣು ಮಗಳಿಗೆ ಆಸ್ತಿಯಲ್ಲಿ ಪಾಲು ಕೊಡುವ ಬಗ್ಗೆ ಕಾನೂನಿನಲ್ಲಿ ಹಲವು ತಿದ್ದುಪಡಿಗಳನ್ನು ತರಲಾಗಿದೆ.
ಅದರಲ್ಲಿ 2005ರಲ್ಲಿ ತಂದ ತಿದ್ದುಪಡಿಯ ಅನುಸಾರ, ಆಸ್ತಿ ವಿಷಯದಲ್ಲಿ ಗಂಡು ಮಕ್ಕಳಷ್ಟೇ ಸಮಾನವಾದ ಹಕ್ಕು ಹೆಣ್ಣುಮಕ್ಳಳಿಗೂ ಇದೇ ಎಂದು ತೀರ್ಮಾನವಾಯಿತು. ತಂದೆ ತಾಯಿಯ ಆಸ್ತಿಯಲ್ಲಿ ಗಂಡು ಮಗನಷ್ಟೇ ಹಕ್ಕು ಹೆಣ್ಣುಮಗಳಿಗೆ ಇರುತ್ತದೆ, ಮದುವೆ ಅದ ತಕ್ಷಣ ಹೆಣ್ಣು ಆಸ್ತಿಯಲ್ಲಿ ಹಕ್ಕು ಕಳೆದುಕೊಳ್ಳುವುದಿಲ್ಲ.
ನಮ್ಮ ದೇಶದ ಕಾನೂನು (Property Laws) ವ್ಯವಸ್ಥೆಯಲ್ಲಿ ತಿಳಿಸಿರುವ ಹಾಗೆ ಮದುವೆಯಾದ ಮೇಲು ಕೂಡ, ಹೆಣ್ಣುಮಕ್ಕಳಿಗೆ ತಂದೆ ಆಸ್ತಿಯ ಮೇಲೆ ಸಮಾನವಾದ ಹಕ್ಕು ಇರುತ್ತದೆ. ಕಾನೂನಿನ ಪ್ರಕಾರ ಎಲ್ಲಾ ಥರದ ಆಸ್ತಿ ಮೇಲು ಹೆಣ್ಣುಮಕ್ಕಳಿಗೆ ಸಮಾನವಾದ ಹಕ್ಕು ಇರುತ್ತದೆ, ತಂದೆ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿ ಎರಡನ್ನು ಹೆಣ್ಣುಮಗಳು ಪಡೆಯಬಹುದು.
ಆದರೆ ಒಂದು ವೇಳೆ ತಂದೆಯಾದವರು ತಮ್ಮ ಸ್ವಯಾರ್ಜಿತ ಆಸ್ತಿ ಗಂಡು ಮಕ್ಕಳಿಗೆ ಮಾತ್ರ ಸೇರಬೇಕು ಎಂದು ವಿಲ್ ಬರೆದು ಇಟ್ಟಿದ್ದರೆ, ಆಗ ಮಾತ್ರ ಹೆಣ್ಣುಮಕ್ಕಳಿಗೆ ತಂದೆಯ ಸ್ವಯಾರ್ಜಿತ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ.. ತವರು ಮನೆಯಲ್ಲಿ ತಂದೆ ತಾಯಿ ಆಸ್ತಿಯ ವಿಷಯಕ್ಕೆ, ಹೆಣ್ಣಿಗೆ ತನ್ನ ಸಹೋದರನಿಗೆ ಇರುವಷ್ಟೇ ಹಕ್ಕು ಇರುತ್ತದೆ.
ಆದರೆ ಹೆಣ್ಣು ಮದುವೆಯಾಗಿ ಹೋಗುವ ಗಂಡನ ಮನೆಯಲ್ಲಿ ಇದೇ ರೀತಿ ಇರುವುದಿಲ್ಲ.. ಗಂಡನ ಮನೆಯ ಆಸ್ತಿ ಪಿತ್ರಾರ್ಜಿತವಾಗಿದ್ದರೆ, ಆ ಆಸ್ತಿಯ ಮೇಲೆ ಹೆಣ್ಣಿಗೆ ಹಕ್ಕು ಇರುವುದಿಲ್ಲ. ಗಂಡನಿಗೆ ಮಾವ ಅತ್ತೆ ಕಡೆಯಿಂದ ಎಷ್ಟು ಆಸ್ತಿ ಸಿಗುತ್ತದೆಯೋ ಅಷ್ಟು ಮಾತ್ರ ಆಗಿರುತ್ತದೆ. ಗಂಡನ ಮನೆಗೆ ಸೊಸೆಯಾಗಿ ಹೋಗುವ ಹೆಣ್ಣಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ.
ಆದರೆ ಗಂಡ ಏನಾದರೂ ವಿಧಿವಶವಾದರೆ ಆಗ ಹೆಣ್ಣಿಗೆ ಗಂಡನ ಮನೆಯ ಆಸಸ್ತಿಯಲ್ಲಿ ಪಾಲು ಸಿಗುತ್ತದೆ. ಗಂಡ ಸ್ವಂತವಾಗಿ ಸಂಪಾದನೆ ಮಾಡಿದ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣಿಗೆ ಪಾಲು ಸಿಗುತ್ತದೆ, ಮಾವನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ.
What is the rights of daughter on fathers property
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story




