ವಾಟ್ಸಾಪ್ ಮೆಸೇಜ್ ಲಿಮಿಟ್ ಫೀಚರ್! ಈಗ ಹೆಚ್ಚು ಮೆಸೇಜ್ ಕಳಿಸಲು ಸಾಧ್ಯವಿಲ್ಲ
ಸ್ಪ್ಯಾಮ್ ಮತ್ತು ಪ್ರಚಾರ ಮೆಸೇಜ್‌ಗಳಿಂದ ಬಳಕೆದಾರರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ವಾಟ್ಸಾಪ್ ಹೊಸ “ಮೆಸೇಜ್ ಲಿಮಿಟ್” ಫೀಚರ್ ತರಲಿದೆ. ಇದರ ಮೂಲಕ ಅಪರಿಚಿತರಿಂದ ಬರುವ ಮೆಸೇಜ್‌ಗಳಿಗೆ ನಿಯಂತ್ರಣ ಸಿಗಲಿದೆ.

WhatsApp Feature : ವಾಟ್ಸಾಪ್ ದಿನದಿಂದ ದಿನಕ್ಕೆ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದ್ದು, ಬಳಕೆದಾರರ ಅನುಭವವನ್ನು ಸುಧಾರಿಸಲು ಹೊಸ “ಮೆಸೇಜ್ ಲಿಮಿಟ್ ಫೀಚರ್” ಅನ್ನು ಶೀಘ್ರದಲ್ಲೇ ತರಲು ಯೋಜಿಸಿದೆ. ಈ ಹೊಸ ವ್ಯವಸ್ಥೆಯಿಂದ ಅನಗತ್ಯ ಅಥವಾ ಅತಿಯಾಗಿ ಬರುವ ಸಂದೇಶಗಳಿಗೆ ನಿಯಂತ್ರಣ ಸಿಗಲಿದೆ.
ದಿನನಿತ್ಯ ಅನೇಕರು ವಾಟ್ಸಾಪ್ ಅನ್ನು ತಮ್ಮ ಸಂವಹನದ ಭಾಗವನ್ನಾಗಿಸಿಕೊಂಡಿದ್ದಾರೆ. ಆದರೆ ಕೆಲವು ಅಪ್ರಸಕ್ತ ಮತ್ತು ಸ್ಪ್ಯಾಮ್ ಮೆಸೇಜ್‌ಗಳು ಬಳಕೆದಾರರನ್ನು ಕಂಗೆಡಿಸುತ್ತವೆ.
ಮಾರುಕಟ್ಟೆ ಪ್ರಚಾರಕ್ಕಾಗಿ ಕೆಲವು ಕಂಪನಿಗಳು ನಿರಂತರವಾಗಿ ಮೆಸೇಜ್‌ಗಳನ್ನು ಕಳುಹಿಸುತ್ತಿರುವುದರಿಂದ, ಬಳಕೆದಾರರ ಗೌಪ್ಯತೆ ಹಾನಿಯಾಗುತ್ತಿದೆ. ಇದೇ ಹಿನ್ನೆಲೆ ವಾಟ್ಸಾಪ್ ಈ ಹೊಸ ಕ್ರಮ ಕೈಗೊಂಡಿದೆ.
ಈ “ಮೆಸೇಜ್ ಲಿಮಿಟ್” ಫೀಚರ್ ಸಕ್ರಿಯವಾದ ನಂತರ, ನೀವು ಪರಿಚಯವಿಲ್ಲದ ವ್ಯಕ್ತಿಗೆ ಮೆಸೇಜ್ ಕಳುಹಿಸಿದರೆ ಮತ್ತು ಅವರು ಒಂದು ತಿಂಗಳೊಳಗೆ ಪ್ರತಿಕ್ರಿಯೆ ನೀಡದಿದ್ದರೆ, ಮತ್ತೆ ಆ ವ್ಯಕ್ತಿಗೆ ಮೆಸೇಜ್ ಕಳುಹಿಸಲು ಸಾಧ್ಯವಾಗುವುದಿಲ್ಲ. ಲಿಮಿಟ್ ಮೀರಿದಾಗ ಪಾಪ್‌ಅಪ್ ಮೂಲಕ ಎಚ್ಚರಿಕೆ ಸಂದೇಶ ತೋರಿಸಲಾಗುತ್ತದೆ.
ಈ ಕ್ರಮದಿಂದ ಎರಡು ಪ್ರಮುಖ ಪ್ರಯೋಜನಗಳಿವೆ, ಮೊದಲನೆಯದಾಗಿ ಪ್ರಚಾರಾತ್ಮಕ ಹಾಗೂ ಬಿಸಿನೆಸ್ ಮೆಸೇಜ್‌ಗಳ ಸಂಖ್ಯೆ ಕಡಿಮೆಯಾಗಲಿದೆ. ಎರಡನೆಯದಾಗಿ, ನಿರಂತರವಾಗಿ ಮೆಸೇಜ್ ಕಳುಹಿಸಿ ಕಿರಿಕಿರಿಗೊಳಿಸುವವರಿಗೆ ತಡೆಯೊಡ್ಡಲಾಗುತ್ತದೆ. ಇದೇ ವೇಳೆ ಬಳಕೆದಾರರೂ ಪ್ರತಿಕ್ರಿಯೆ ಬಾರದ ನಂಬರ್‌ಗಳಿಗೆ ಅನಗತ್ಯ ಮೆಸೇಜ್‌ಗಳನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ.
ವಾಟ್ಸಾಪ್‌ನಲ್ಲಿ ಈಗಾಗಲೇ ಫಾರ್ವರ್ಡ್ ಮೆಸೇಜ್‌ಗಳ ಮೇಲೆ ನಿಯಂತ್ರಣ ಇರುವಂತೆಯೇ, ಈ ಹೊಸ ಫೀಚರ್ ಕೂಡ ಅದೇ ರೀತಿಯ ನಿಯಮವನ್ನು ಅನುಸರಿಸುತ್ತದೆ. ಪ್ರಸ್ತುತ ಇದು ಬೀಟಾ ಟೆಸ್ಟಿಂಗ್ ಹಂತದಲ್ಲಿ ಇದೆ ಮತ್ತು ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಬರಬಹುದು.
ಮೆಟಾ ಕಂಪನಿ ವಾಟ್ಸಾಪ್‌ನಲ್ಲಿ ಇನ್‌ಸ್ಟಾಗ್ರಾಂ ಇಂಟಿಗ್ರೇಶನ್ ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ಹೊಸ ಫೀಚರ್‌ಗಳನ್ನೂ ಪರೀಕ್ಷಿಸುತ್ತಿದೆ. ಹೀಗಾಗಿ ವಾಟ್ಸಾಪ್‌ನಲ್ಲಿ ಮುಂದಿನ ತಿಂಗಳುಗಳಲ್ಲಿ ಹಲವು ಹೊಸ ತಂತ್ರಜ್ಞಾನ ಬದಲಾವಣೆಗಳು ಎದುರಾಗಲಿವೆ.
WhatsApp New Feature, Message Limit Introduced to Stop Spam



