ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಯಾವ ಬ್ಯಾಂಕ್ನಲ್ಲಿ ಸಿಗುತ್ತೆ ಗೊತ್ತಾ? ಇಲ್ಲಿದೆ ವಿವರ
Personal Loan: ಪರ್ಸನಲ್ ಲೋನ್ ಪಡೆಯುವ ಮುನ್ನ ವಿವಿಧ ಬ್ಯಾಂಕುಗಳ ಬಡ್ಡಿದರಗಳನ್ನು ಹೋಲಿಕೆ ಮಾಡುವುದು ಅತ್ಯಂತ ಮುಖ್ಯ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿದರ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Personal Loan: ವೈದ್ಯಕೀಯ ತುರ್ತು ಪರಿಸ್ಥಿತಿ, ಮದುವೆ ಅಥವಾ ಪ್ರಯಾಣಕ್ಕಾಗಿ ಹಣದ ಅಗತ್ಯ ಉಂಟಾದಾಗ ಪರ್ಸನಲ್ ಲೋನ್ ಉತ್ತಮ ಆಯ್ಕೆಯಾಗಿದೆ. ಇವುಗಳಿಗೆ ಪಾವತಿ ಅವಧಿ ಮತ್ತು ಬಡ್ಡಿದರವು ಬ್ಯಾಂಕ್ಗಿಂತ ಬ್ಯಾಂಕ್ಗೆ ಬದಲಾಗುತ್ತದೆ. ಕ್ರೆಡಿಟ್ ಸ್ಕೋರ್ (Credit Scoreಉತ್ತಮವಿದ್ದವರು ಕಡಿಮೆ ಬಡ್ಡಿದರದಲ್ಲಿ ಲೋನ್ ಪಡೆಯುವ ಸಾಧ್ಯತೆ ಹೊಂದಿರುತ್ತಾರೆ.
ಅಲ್ಪ ಬಡ್ಡಿದರದ ವ್ಯತ್ಯಾಸವೂ (ಉದಾ: 1%) ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಬಡ್ಡಿಯಾಗಿ ಬದಲಾಗುತ್ತದೆ. ಆದ್ದರಿಂದ ಸಾಲ ಪಡೆಯುವ ಮುನ್ನ ಎರಡು-ಮೂರು ಬ್ಯಾಂಕುಗಳ ಬಡ್ಡಿದರ ಹೋಲಿಕೆ ಮಾಡುವುದು ಜಾಣ್ಮೆಯ ಕ್ರಮ. ಪರ್ಸನಲ್ ಲೋನ್ಗಳಿಗೆ ಪಾವತಿಸಬೇಕಾದ ಬಡ್ಡಿದರ ಸಾಮಾನ್ಯವಾಗಿ 12% ರಿಂದ 18% ನಡುವೆ ಇರುತ್ತದೆ.
ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ (SBI) ವಾರ್ಷಿಕ 10.05% ರಿಂದ 15.05% ವರೆಗೆ ಬಡ್ಡಿದರ ವಿಧಿಸುತ್ತದೆ. ಪ್ರೊಸೆಸಿಂಗ್ ಶುಲ್ಕ ₹1,000 ರಿಂದ ₹15,000 ರವರೆಗೆ ಇರಬಹುದು. ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ (ICICI Bank) 10.45% ರಿಂದ 16.50% ವರೆಗೆ ಬಡ್ಡಿ ವಿಧಿಸುತ್ತದೆ ಮತ್ತು 2% ವರೆಗೆ ಪ್ರೊಸೆಸಿಂಗ್ ಫೀ ಇರುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್ (HDFC Bank) 9.99% ರಿಂದ 24% ವರೆಗೆ ಬಡ್ಡಿದರ ಹೊಂದಿದೆ. ಇದರ ಪ್ರೊಸೆಸಿಂಗ್ ಶುಲ್ಕ ₹6,500 (GST ಸೇರಿದಂತೆ). ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) 9.98% ದಿಂದ ಆರಂಭಿಸಿ 5% ವರೆಗೆ ಪ್ರೊಸೆಸಿಂಗ್ ಶುಲ್ಕ ವಿಧಿಸುತ್ತದೆ.
ಸರ್ಕಾರಿ ವಲಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) 10.75% ರಿಂದ 14.45% ವರೆಗೆ ಬಡ್ಡಿದರ ನೀಡುತ್ತದೆ. ಕೆನರಾ ಬ್ಯಾಂಕ್ (Canara Bank) 13.75% ರಿಂದ 16% ವರೆಗೆ ಫ್ಲೋಟಿಂಗ್ ಮತ್ತು ಫಿಕ್ಸ್ಡ್ ರೇಟ್ ಎರಡನ್ನೂ ನೀಡುತ್ತದೆ. ಬ್ಯಾಂಕ್ ಆಫ್ ಬರೋಡಾ (Bank of Baroda) 10.4% ರಿಂದ 15.75% ವರೆಗೆ ಬಡ್ಡಿದರ ನಿಗದಿಪಡಿಸಿದೆ.
ಪರ್ಸನಲ್ ಲೋನ್ಗೆ ಯಾವುದೇ ಪಾವತಿ ಖಾತರಿ ಅಥವಾ ತಾತ್ಕಾಲಿಕ ಆಸ್ತಿ ಪಾವತಿ ಅಗತ್ಯವಿಲ್ಲದ ಕಾರಣ, ಈ ಸಾಲಗಳು ಗೃಹ (Home Loan) ಅಥವಾ ವಾಹನ ಸಾಲಗಳಿಗಿಂತ (Vehicle Loan) ಸ್ವಲ್ಪ ಹೆಚ್ಚು ಬಡ್ಡಿದರದವರಾಗಿರುತ್ತವೆ. ಆದ್ದರಿಂದ ಸಾಲ ಪಡೆಯುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುವುದು ಅತ್ಯವಶ್ಯಕ.
Which Bank Offers the Lowest Personal Loan Interest Rate







