ಈ ರೀತಿಯ 500 ರೂಪಾಯಿ ನೋಟು ನಿಮ್ಮತ್ರ ಇದ್ಯಾ? ಹಾಗಾದ್ರೆ ಲಕ್ಷಾಂತರ ಗಳಿಸೋ ಅವಕಾಶ
786 ಸಂಖ್ಯೆಯಿರುವ 100 ಮತ್ತು 500 ರೂಪಾಯಿ ನೋಟುಗಳು ಅತಿ ಅಪರೂಪವಾಗಿ ಪರಿಗಣಿಸಲ್ಪಡುತ್ತಿದ್ದು, ಈಗ ಆನ್ಲೈನ್ ಮಾರುಕಟ್ಟೆಯಲ್ಲಿ ಲಕ್ಷಗಳಿಗೆ ಮಾರಾಟವಾಗುತ್ತಿವೆ. ನಿಮ್ಮ ಬಳಿ ಇದ್ದರೆ ನಿಮ್ಮ ಅದೃಷ್ಟ ಖುಲಾಯಿಸಿದಂತೆ.

786 currency notes: ಒಂದು ಸಾಮಾನ್ಯ 100 ಅಥವಾ 500 ರೂಪಾಯಿ ನೋಟು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಕೇಳಿದರೆ ಅಚ್ಚರಿ ಎನಿಸಬಹುದು. ಆದರೆ ಈಗಾಗಲೇ ಹಲವರು ತಮ್ಮ ಪರ್ಸ್ನಲ್ಲಿ 786 ಸಂಖ್ಯೆಯ ನೋಟನ್ನು ಹುಡುಕುತ್ತಿದ್ದಾರೆ. ಆನ್ಲೈನ್ ಮಾರುಕಟ್ಟೆಯಲ್ಲಿ ಈ ನೋಟುಗಳಿಗೆ ಲಕ್ಷಾಂತರ ಮೌಲ್ಯ ಕಟ್ಟಲಾಗುತ್ತಿದೆ.
ಏಕೆ ಈ 786 ನೋಟಿಗೆ ಇಷ್ಟು ಡಿಮ್ಯಾಂಡ್?
786 ಅನ್ನು ಹಲವರು ಅದೃಷ್ಟ, ಆಶೀರ್ವಾದ, ಆಧ್ಯಾತ್ಮಿಕ ಶ್ರೇಯಸ್ಸಿನ ಸಂಕೇತವಾಗಿ ಕಾಣುತ್ತಾರೆ. ವಿಶೇಷವಾಗಿ ಇಸ್ಲಾಂ ಧರ್ಮದಲ್ಲಿ ಈ ಸಂಖ್ಯೆಗೆ ಹೆಚ್ಚಿನ ಮಹತ್ವವಿದೆ. ಸಂಗ್ರಹಗಾರರು ಈ ನೋಟುಗಳನ್ನು ಯಾವ ಬೆಲೆಯಾದರೂ ಕೊಟ್ಟು ಕೊಂಡುಕೊಳ್ಳಲು ಸಿದ್ಧರಾಗಿರುವುದೇ ಇದರ ದೊಡ್ಡ ಕಾರಣ.
ಈ ನೋಟು ದೊರಕುವುದು ಸುಲಭವಲ್ಲದರಿಂದ ಬೆಲೆ ದಿನೇ ದಿನೇ ಏರುತ್ತಿದೆ. ₹100 ಅಥವಾ ₹500 ಮುಖಬೆಲೆಯ ನೋಟುಗಳಿಗಿಂತ ಅದರ ಸಂಖ್ಯೆಯೇ ಮೌಲ್ಯವನ್ನು ನಿರ್ಧರಿಸುತ್ತಿದೆ.
ಇದನ್ನೂ ಓದಿ: ಈಗ ಕಮ್ಮಿ ಡೌನ್ ಪೇಮೆಂಟ್ನಲ್ಲಿ ಮಾರುತಿ ಕಾರು! ಇಲ್ಲಿದೆ ಫುಲ್ ಇಎಂಐ ಲೆಕ್ಕಾಚಾರ
500 ರೂಪಾಯಿ 786 ನೋಟು ಎಲ್ಲಿ ಲಕ್ಷಗಳಿಗೆ ಮಾರಾಟವಾಗುತ್ತಿದೆ?
ಅಂತರರಾಷ್ಟ್ರೀಯ ಮತ್ತು ಭಾರತೀಯ ಆನ್ಲೈನ್ ಮಾರುಕಟ್ಟೆಗಳಲ್ಲಿ ಈ ನೋಟುಗಳು ಭಾರೀ ಡಿಮ್ಯಾಂಡ್ ಹೊಂದಿವೆ. eBay ಹಾಗು ಇತರ ವೇದಿಕೆಗಳಲ್ಲಿರುವ ಕೆಲವು ಲಿಸ್ಟಿಂಗ್ಗಳಲ್ಲಿ 786 ಸಂಖ್ಯೆಯ 500 ರೂ. ನೋಟು ₹3 ಲಕ್ಷದಿಂದ ₹6 ಲಕ್ಷವರೆಗೆ ಮಾರಾಟವಾಗಿದೆ. ಕೆಲವು ಸಂದರ್ಭಗಳಲ್ಲಿ ₹15 ಲಕ್ಷವರೆಗೂ ಬಿಡ್ಡಿಂಗ್ ಏರಿದೆ ಎನ್ನಲಾಗುತ್ತಿದೆ.
ಅಪರೂಪ, ನಂಬಿಕೆ ಮತ್ತು ಮೌಲ್ಯ, ಎಲ್ಲಾ ಸೇರಿ ಈ ನೋಟನ್ನು ‘ಲಕ್ಷಾಂತರದ ನೋಟು’ ಮಾಡಿಕೊಂಡಿವೆ.
- ಇಂತಹ ನೋಟು ನಿಮ್ಮ ಬಳಿ ಇದ್ದರೆ ಮಾರಾಟ ಮಾಡುವ ವಿಧಾನ
- eBay ವೇದಿಕೆಯಲ್ಲಿ ನಿಮ್ಮ ಹೆಸರಿನಲ್ಲಿ seller account ತೆರೆದುಕೊಳ್ಳಿ
- ನೋಟಿನ ಸ್ಪಷ್ಟ, High-quality ಫೋಟೋ ಅಪ್ಲೋಡ್ ಮಾಡಿ
- 786 ಸಂಖ್ಯೆ ಸ್ಪಷ್ಟವಾಗಿ ಕಾಣುವಂತೆ ಚಿತ್ರ ತೆಗೆದುಕೊಳ್ಳುವುದು ಮುಖ್ಯ
- ಆಸಕ್ತರಾದ ಖರೀದಿದಾರರು ನೇರವಾಗಿ ಸಂಪರ್ಕಿಸುತ್ತಾರೆ
- ಬಿಡ್ಡಿಂಗ್ ಹೆಚ್ಚು ಇದ್ರೆ ಬೆಲೆ ಕೂಡ ಹೆಚ್ಚಿನ ಮಟ್ಟಕ್ಕೇರುವುದು
ಜಾಗ್ರತೆ ಅಗತ್ಯ!
ನಕಲಿ ಮಾರಾಟಾಗಾರರು, ನಕಲಿ ಖರೀದಿದಾರರು ಕೂಡ ಇರಬಹುದಾದ್ದರಿಂದ ಎಚ್ಚರ ಕೂಡ ಅಗತ್ಯ. eBay ಕೂಡ ಅನುಮಾನಾಸ್ಪದ ಅಕೌಂಟ್ಗಳ ಬಗ್ಗೆ ಜಾಗ್ರತೆ ವಹಿಸಲು ಸೂಚಿಸಿದೆ.
ಡಿಮ್ಯಾಂಡ್ ನಿಜ. ಆದರೆ ಎಚ್ಚರಿಕೆಯಿಂದ ಮಾರಾಟ ಮಾಡುವುದು ಅತ್ಯಂತ ಮುಖ್ಯ.



