ಉತ್ತಮ ಸಿಬಿಲ್ ಸ್ಕೋರ್ ಇದ್ದರೂ ಇಂತವರಿಗೆ ಬ್ಯಾಂಕ್ ಲೋನ್ ಸಿಗಲ್ಲ! ಯಾಕೆ ಗೊತ್ತಾ
ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೂ ಹಲವರಿಗೆ ಬ್ಯಾಂಕ್ ಲೋನ್ ನಿರಾಕರಣೆ ಎದುರಾಗುತ್ತಿದೆ. ಆದಾಯ ಸ್ಥಿರತೆ, ಉದ್ಯೋಗ ಹಿನ್ನೆಲೆ, ಖರ್ಚು ಅಭ್ಯಾಸ ಸೇರಿದಂತೆ ಈ ಸಣ್ಣ ತಪ್ಪುಗಳೇ ಮುಖ್ಯ ಕಾರಣವಾಗುತ್ತಿವೆ.
Bank Loan: ಸ್ವಂತ ಮನೆ ಕಟ್ಟಿಕೊಳ್ಳುವುದು ಮಧ್ಯಮ ವರ್ಗದ ಬಹುತೇಕರ ಕನಸು. ಆದರೆ ಇಂದಿನ ದಿನಗಳಲ್ಲಿ ನಿರ್ಮಾಣ ಸಾಮಗ್ರಿ ಬೆಲೆ, ಕೂಲಿ ವೆಚ್ಚಗಳು ಏರಿಕೆಯಾಗಿರುವುದರಿಂದ ಸ್ವಂತ ಹಣ ಮಾತ್ರ ಸಾಕಾಗುವುದಿಲ್ಲ. ಈ ಕಾರಣದಿಂದ ಬ್ಯಾಂಕ್ ಹೋಮ್ ಲೋನ್ (Home Loan) ಮೇಲೆ ಜನರು ಹೆಚ್ಚು ಅವಲಂಬಿತರಾಗುತ್ತಿದ್ದಾರೆ.
ಬ್ಯಾಂಕ್ಗಳು ಕಡಿಮೆ ಬಡ್ಡಿದರದಲ್ಲಿ 20–30 ವರ್ಷಗಳ ಅವಧಿಗೆ ಹೋಮ್ ಲೋನ್ ನೀಡುತ್ತಿವೆ. ಆದರೆ ಕೇವಲ ಉತ್ತಮ ಸಿಬಿಲ್ ಸ್ಕೋರ್ ಇದ್ದರೆ ಸಾಕು ಎನ್ನುವ ಭ್ರಮೆಯಲ್ಲಿ ಹಲವರು ಇದ್ದಾರೆ. ವಾಸ್ತವದಲ್ಲಿ ಲೋನ್ ಮಂಜೂರಿಗೆ ಇನ್ನೂ ಹಲವು ಅಂಶಗಳು ಪ್ರಭಾವ ಬೀರುತ್ತವೆ.
ಸಿಬಿಲ್ ಸ್ಕೋರ್ ಮಾತ್ರ ಸಾಕಾಗುವುದಿಲ್ಲ
ಸಾಮಾನ್ಯವಾಗಿ 700ಕ್ಕೂ ಹೆಚ್ಚಿನ ಸಿಬಿಲ್ ಸ್ಕೋರ್ (CIBIL Score) ಇದ್ದರೆ ಲೋನ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಅದೊಂದೇ ಮಾನದಂಡವಲ್ಲ. ಕ್ರೆಡಿಟ್ ಇತಿಹಾಸ ಚೆನ್ನಾಗಿದ್ದರೂ ಬ್ಯಾಂಕ್ ನಿಮ್ಮ ಹಣಕಾಸು ಶಿಸ್ತು, ಹಳೆಯ ಸಾಲಗಳ ಸ್ಥಿತಿ ಮತ್ತು EMI ಪಾವತಿ ನಿಯಮಿತತೆಯನ್ನು ಪರಿಶೀಲಿಸುತ್ತದೆ.
ಆದಾಯ ಸ್ಥಿರತೆ ಮುಖ್ಯ
ನಿಮ್ಮ ಆದಾಯ ಯಾವ ಮೂಲದಿಂದ ಬರುತ್ತದೆ, ಅದು ನಿಯಮಿತವಾಗಿದೆಯೇ, ವರ್ಷಕ್ಕೆ ಎಷ್ಟು ಆದಾಯವಿದೆ ಎಂಬುದನ್ನು ಬ್ಯಾಂಕ್ ಗಮನಿಸುತ್ತದೆ. ಆದಾಯ ಅಸ್ಥಿರವಾಗಿದ್ದರೆ ಅಥವಾ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ, ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೂ ಲೋನ್ ತಿರಸ್ಕಾರವಾಗಬಹುದು.
ಉದ್ಯೋಗ ಬದಲಾವಣೆ ನಕಾರಾತ್ಮಕ ಪರಿಣಾಮ
ಕಡಿಮೆ ಅವಧಿಯಲ್ಲಿ ಕಂಪನಿಗಳನ್ನು ಬದಲಾಯಿಸುವವರು ಅಥವಾ ಪ್ರೊಬೇಷನ್ ಅವಧಿಯಲ್ಲಿರುವ ಉದ್ಯೋಗಿಗಳಿಗೆ ಬ್ಯಾಂಕ್ಗಳು ಹೆಚ್ಚು ರಿಸ್ಕ್ ಎಂದು ಪರಿಗಣಿಸುತ್ತವೆ. ಕೆಲವು ಕ್ಷೇತ್ರಗಳಲ್ಲಿ ಆದಾಯ ನಿರಂತರತೆ ಇಲ್ಲದಿದ್ದರೆ ಸಹ ಲೋನ್ ಮಂಜೂರಿಗೆ ಅಡ್ಡಿಯಾಗುತ್ತದೆ.
ಐಟಿ ರಿಟರ್ನ್ಸ್ ಮತ್ತು ಖರ್ಚಿನ ಅಭ್ಯಾಸ
ನಿಜವಾದ ಆದಾಯಕ್ಕಿಂತ ಕಡಿಮೆ ಆದಾಯವನ್ನು ಐಟಿ ರಿಟರ್ನ್ಸ್ನಲ್ಲಿ ತೋರಿಸಿದರೆ ಬ್ಯಾಂಕ್ ವಿಶ್ವಾಸ ಕಳೆದುಕೊಳ್ಳುತ್ತದೆ. ಜೊತೆಗೆ ಹೆಚ್ಚು ಕ್ರೆಡಿಟ್ ಕಾರ್ಡ್ ಬಳಕೆ, ಅನ್ಸೆಕ್ಯೂರಡ್ ಲೋನ್ಗಳ ಪ್ರಮಾಣ ಹೆಚ್ಚಿದ್ದರೆ ಲೋನ್ ಸಿಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಲೋನ್ ಅವಕಾಶ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?
ಪ್ರಸ್ತುತ EMIಗಳನ್ನು ಸಮಯಕ್ಕೆ ಪಾವತಿಸುವುದು, ಆದಾಯಕ್ಕೆ ಮೀರಿದ ಖರ್ಚು ತಪ್ಪಿಸುವುದು, ಕ್ರೆಡಿಟ್ ರಿಪೋರ್ಟ್ನ್ನು ನಿಯಮಿತವಾಗಿ ಪರಿಶೀಲಿಸುವುದು ಅಗತ್ಯ. ಈ ಸರಳ ಕ್ರಮಗಳು ಬ್ಯಾಂಕ್ ಲೋನ್ ಮಂಜೂರಿಗೆ ನಿಮ್ಮ ಅವಕಾಶವನ್ನು ಹೆಚ್ಚಿಸುತ್ತವೆ.



