Business News

ರಾಜ್ಯದ ಗೃಹಲಕ್ಷ್ಮಿ ಯೋಜನೆ ಬಿಟ್ಟು ಕೇಂದ್ರ ಸರ್ಕಾರದ ಇನ್ನೊಂದು ಯೋಜನೆಗೆ ಮುಗಿಬಿದ್ದ ಜನರು! ಅಷ್ಟಕ್ಕೂ ಏನದು ಹೊಸ ಯೋಜನೆ

ಎಲ್ಲಾ ಹೆಣ್ಣುಮಕ್ಕಳ ಭವಿಷ್ಯ ಚೆನ್ನಾಗಿರಬೇಕು, ಅವರಿಗೆ ಅರ್ಥಿಕವಾಗಿ ಅಥವಾ ಇನ್ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂದು ಕೇಂದ್ರ ಸರ್ಕಾರವು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಾಕಷ್ಟು (Scheme for Women) ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಹಣ ಹೂಡಿಕೆ (Money Investment) ಮಾಡುತ್ತಾ ಬಂದರೆ, ಮಹಿಳೆಯರಿಗೆ ಉತ್ತಮವಾದ ಬಡ್ಡಿ ಸಿಗುವುದರ ಜೊತೆಗೆ ಭವಿಷ್ಯದಲ್ಲಿ ಮಹಿಳೆಯರಿಗೆ ಅನುಕೂಲವಾಗುತ್ತದೆ..

ಕೇಂದ್ರ ಸರ್ಕಾರದ ಇಂಥದ್ದೊಂದು ಯೋಜನೆ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ (Mahila Samman Ulitaya Patra Yojane) ಆಗಿದೆ. ಈ ಯೋಜನೆಯಲ್ಲಿ ಈಗಿನಿಂದಲೇ ಸ್ವಲ್ಪ ಮಟ್ಟಿಗೆ ಹಣ ಉಳಿತಾಯ ಮಾಡುತ್ತಾ (Savings Scheme) ಬಂದರೆ, ಮುಂದೆ ದೊಡ್ಡ ಮಟ್ಟಿಗೆ ಆದಾಯ ಪಡೆಯುತ್ತೀರಿ. ಇದು ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಶುರುವಾಗಿರುವ ಯೋಜನೆ.

2 lakh deposit for such, another important scheme of the Centre

ಇದರಲ್ಲಿ ಹೆಂಗಸರು ಮತ್ತು ಹುಡುಗಿಯರು ಯಾರೇ ಇದ್ದರು ಖಾತೆ ತೆರೆಯಬಹುದು.  ನಿಮಗೆ ಹತ್ತಿರ ಇರುವ ಪೋಸ್ಟ್ ಆಫೀಸ್ ನಲ್ಲಿ ಯೋಜನೆಯು ಲಭ್ಯವಿದ್ದು ಇದಕ್ಕಾಗಿ ಅಪ್ಲೈ ಮಾಡಬಹುದು. ಈ ಯೋಜನೆಯಲ್ಲಿ ನಿಮಗೆ FD ಗೆ ಕೊಡುವುದಕ್ಕಿಂತ ಜಾಸ್ತಿ ಬಡ್ಡಿ ಸಿಗುತ್ತದೆ. ಈ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆಯ ಅಡಿಯಲ್ಲಿ ಉಳಿತಾಯ ಮಾಡುವುದಕ್ಕೆ ಮಿತಿಯನ್ನು ಇಡಲಾಗಿದೆ.

ಇಲ್ಲಿ ನೀವು ಮಿನಿಮಮ್ 1000 ರೂಪಾಯಿ ಮತ್ತು ಮ್ಯಾಕ್ಸಿಮಮ್ 2,00,000 ರೂಪಾಯಿ ಹೂಡಿಕೆ ಮಾಡಬಹುದು, 2 ವರ್ಷಗಳ ನಂತರ ಮೆಚ್ಯುರ್ ಆಗುವ ಯೋಜನೆ ಇದಾಗಿದೆ. ಹಾಗೆಯೇ ಈ ಯೋಜನೆಗೆ 7.50% ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ  2 ವರ್ಷಗಳ ಬಳಿಕ ಒಳ್ಳೆಯ ಆದಾಯ ಉತ್ತಮ ಬಡ್ಡಿ ಮೊತ್ತ ನಿಮ್ಮದಾಗುತ್ತದೆ.

ಈ ಯೋಜನೆಯಲ್ಲಿ ನೀವು 2025ರ ಮಾರ್ಚ್ ವರೆಗು ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಹಣಕಟ್ಟುವ ಅಗತ್ಯವಿಲ್ಲ, 1000 ಹೂಡಿಕೆ ಮಾಡಿದರು ಅಥವಾ 2,00,000 ಹೂಡಿಕೆ ಮಾಡಿದರು ಅದು 2 ವರ್ಷಗಳವರೆಗೆ ಹಾಗೆಯೇ ಇರುತ್ತದೆ (One Time Investment). 2 ವರ್ಷಗಳ ಬಳಿಕ ಉತ್ತಮ ಬಡ್ಡಿ ಜೊತೆಗೆ ನಿಮಗೆ ಸಿಗುತ್ತದೆ.

ಈ ಯೋಜನೆಯಲ್ಲಿ ನಿಮಗೆ ಸಿಗುವ ಬಹುಮುಖ್ಯವಾದ ಉಪಯೋಗ, ಇಲ್ಲಿ ನಿಮಗೆ ತೆರಿಗೆ ವಿನಾಯಿತಿ (Tax Free) ಸಿಗುತ್ತದೆ. ಬಡ್ಡಿ ಸಿಗುವುದು ಹೇಗೆ ಎಂದು ನೋಡಿದರೆ, ಇಲ್ಲಿ 3 ತಿಂಗಳಿಗೆ ಒಂದು ಸಾರಿ ಬಡ್ಡಿ ಹಣವನ್ನು ಸೇರಿಸಲಾಗುತ್ತದೆ. ಒಂದು ವೇಳೆ ನೀವು ₹1000 ಹೂಡಿಕೆ ಮಾಡಿದರೆ 2 ವರ್ಷಗಳ ನಂತರ ₹1,160 ರೂಪಾಯಿ ಬಡ್ಡಿ ಜೊತೆಗೆ ನಿಮಗೆ ಸಿಗುತ್ತದೆ.

Women applying for new scheme from central government

ಗರಿಷ್ಠ ಮೊತ್ತ, ₹2,00,000 ಹೂಡಿಕೆ ಮಾಡಿದರೆ ₹2,32,044 ರೂಪಾಯಿ ನಿಮಗೆ ಸಿಗುತ್ತದೆ. ಈ ಯೋಜನೆಯಲ್ಲಿ ಖಾತೆ ತೆರೆಯಲು ನೀವು ಪೋಸ್ಟ್ ಆಫೀಸ್ (Post Office) ಗೆ ಭೇಟಿ ನೀಡಬೇಕು. ಅಲ್ಲಿ ಫಾರ್ಮ್ ಪಡೆದು, ಫಿಲ್ ಮಾಡಿ, ಅಗತ್ಯ ದಾಖಲೆಗಳ ಜೊತೆಗೆ ನಿಮ್ಮದೊಂದು ಪಾಸ್ ಪೋರ್ಟ್ ಸೈಜ್ ಫೋಟೋ ಸಹ ಕೊಡಬೇಕಾಗುತ್ತದೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಕೂಡ ಬೇಕಾಗುತ್ತದೆ.

ಒಂದು ವೇಳೆ ನಿಮಗೆ ತುರ್ತು ಪರಿಸ್ಥಿತಿ ಎದುರಾದರೆ ಹೂಡಿಕೆಯ ಹಣದಲ್ಲಿ 40% ವಾಪಸ್ ಪಡೆಯಬಹುದು. ಪರಿಸ್ಥಿತಿಗಳ ಅನುಸಾರ ಖಾತೆ ಕ್ಲೋಸ್ ಮಾಡಬೇಕು ಎಂದರು ಮಾಡಬಹುದು. ಕ್ಲೋಸ್ ಮಾಡಿದರು ನಿಮಗೆ ಪೂರ್ತಿ ಬಡ್ಡಿ ಸಿಗುತ್ತದೆ. ಖಾತೆ ಶುರು ಮಾಡಿ 6 ತಿಂಗಳ ನಂತರ ಕ್ಲೋಸ್ ಮಾಡುವುದಾದರೆ ಪೂರ್ತಿ ಬಡ್ಡಿ ಅಥವಾ 2% ಬಡ್ಡಿ ಕಟ್ ಮಾಡಿ ಇನ್ನುಳಿದ ಹಣ ನೀಡಲಾಗುತ್ತದೆ..

Women applying for new scheme from central government

Our Whatsapp Channel is Live Now 👇

Whatsapp Channel

Related Stories