ಪ್ಯಾನ್ ಕಾರ್ಡ್ ಹೊಂದಿರುವ ಹೆಂಗಸರಿಗೆ ಸಿಗಲಿದೆ ₹10,000! ಅಷ್ಟಕ್ಕೂ ಏನಿದು ಸ್ಕೀಮ್, ಏನಿದರ ಅಸಲಿಯತ್ತು?

Story Highlights

ಯಾವೆಲ್ಲಾ ಮಹಿಳೆಯರ ಬಳಿ ಪ್ಯಾನ್ ಕಾರ್ಡ್ ಇದೆಯೋ ಅವರಿಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ಸಹಾಯ ಸಿಗುತ್ತದೆ

ಆಧಾರ್ ಕಾರ್ಡ್ (Aadhar Card) ರೀತಿಯಲ್ಲೇ ಪ್ಯಾನ್ ಕಾರ್ಡ್ (Pan Card) ಕೂಡ ನಮಗೆ ಅಗತ್ಯವಾಗಿ ಬೇಕಿರುವ ಒಂದು ಡಾಕ್ಯುಮೆಂಟ್ ಆಗಿದೆ. ಪ್ಯಾನ್ ಕಾರ್ಡ್ ಹೊಂದಿರುವವರು ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು. ಇದು ತೆರಿಗೆ ಇಲಾಖೆಯಿಂದ ಎಲ್ಲರಿಗೂ ಸಿಗುವ ದಾಖಲೆ ಆಗಿದೆ. ಈಗ ಹಲವಾರು ಕೆಲಸಗಳಿಗೆ ಪ್ಯಾನ್ ಕಾರ್ಡ್ ಖಡಾಖಂಡಿತವಾಗಿ ಬೇಕಾಗುತ್ತದೆ.

ದೇಶದ ಎಲ್ಲಾ ನಾಗರೀಕರು ಪ್ಯಾನ್ ಕಾರ್ಡ್ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಸರ್ಕಾರವೇ ಹೇಳಿದೆ. ಇತ್ತೀಚೆಗೆ ಎಲ್ಲಾ ನಾಗರೀಕರು ಕೂಡ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ (Pan Card Aadhar Card Link) ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ನೀಡಿತ್ತು, ಹಾಗೆಯೇ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಸಮಯದ ಮಿತಿಯನ್ನು ಸಹ ನೀಡಿತ್ತು.

ಈಗ ಆ ಸಮಯ ಮುಗಿದು ಹೋಯಿತು. ಈಗ ಆ ಸಮಯ ಮುಗಿದು ಹೋಗಿದೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಲ್ಲದೆ ಇರುವವರ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯವಾಗುತ್ತದೆ.. ಆದರೆ ಈಗ ಪ್ಯಾನ್ ಕಾರ್ಡ್ ಸಂಬಂಧಿಸಿದ ಹಾಗೆ ಹೊಸದೊಂದು ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದೇನು ಎಂದರೆ, ಯಾವೆಲ್ಲಾ ಮಹಿಳೆಯರ ಬಳಿ ಪ್ಯಾನ್ ಕಾರ್ಡ್ ಇದೆಯೋ ಅವರಿಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ಸಹಾಯ (Financial Help to Women) ಸಿಗುತ್ತದೆ ಎಂದು ಹೇಳಲಾಗುತ್ತಿದೆ..

ಈ ಬಗ್ಗೆ ಒಂದು ಯೂಟ್ಯೂಬ್ ಚಾನಲ್ ನಲ್ಲಿ ಮಾಹಿತಿ ನೀಡಲಾಗಿದ್ದು, ಯೋಜನೆ 4U ಹೆಸರಿನ ಯೂಟ್ಯೂಬ್ ಚಾನೆಲ್, ಪ್ಯಾನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರದ ವತಿಯಿಂದ 10,000 ರೂಪಾಯಿ ಆರ್ಥಿಕ ಸಹಾಯ ಸಿಗುತ್ತದೆ ಎಂದು ತಿಳಿಸಿದೆ.ಇದೇ ವಿಚಾರವನ್ನಜ್ PIB ಕೂಡ ಟ್ವೀಟ್ ಮಾಡಿದೆ. ಆದರೆ ಅಸಲಿ ವಿಚಾರ ಏನು ಎಂದು ನೋಡಿದರೆ, ಇದೊಂದು ಶುದ್ಧ ಸುಳ್ಳು ಸುದ್ದಿ (Fake News) ಆಗಿದೆ.

ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ, ಸರ್ಕಾರ ಇಂಥ ಯಾವುದೇ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ತಿಳಿದುಬಂದದೆ. ಈ ರೀತಿ ಸುಳ್ಳು ಸುದ್ದಿಗಳನ್ನು ಜನರಿಗೆ ನೀಡಿ, ಮೋಸ ಮಾಡುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಲೇ ಇದೆ. ಹಾಗಾಗಿ ಸರ್ಕಾರ ಕೂಡ ಇದರ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ.

ಇಂಥ ಸುಳ್ಳು ಸುದ್ದಿಗಳನ್ನು ಜನರು ನಂಬಬಾರದು, ಸರ್ಕಾರಿ ವೆಬ್ಸೈಟ್ ಗಳಲ್ಲಿ ಅಧಿಕೃತವಾಗಿ ಮಾಹಿತಿ ಸಿಕ್ಕರೆ, ಅದನ್ನು ಮಾತ್ರ ನಂಬಬೇಕು ಎಂದು ತಿಳಿಸಿದೆ. ಈ ರೀತಿ ಸರ್ಕಾರಿ ಯೋಜನೆಗಳು ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳು ವೈರಲ್ ಆದರೆ, ಸತ್ಯ ಏನು ಎಂದು ತಿಳಿಯುವವರೆಗು ಅದನ್ನು ನಂಬಬಾರದು.

Women with pan card will get rs 10000 from central government

ಇಂಥ ಫೇಕ್ ಸುದ್ದಿಗಳನ್ನು ಬೇರೆಯವರ ಜೊತೆಗೂ ಹಂಚಿಕೊಳ್ಳಬಾರದು. ಒಂದು ವೇಳೆ ಇಂಥ ಸುದ್ದಿಗಳು ಬಂದರೆ ಅದು ನಿಜವೋ ಸುಳ್ಳೋ ಎಂದು ನೀವೇ ಪರೀಕ್ಷೆ ಮಾಡಬಹುದು. ಅದಕ್ಕಾಗಿ https://factcheck.pib.gov.in/ ಈ ವೆಬ್ಸೈಟ್ ಗೆ ಭೇಟಿ ನೀಡಿ, ಅಥವಾ ನಿಮಗೆ ಸಿಗುವ ಇಂಥ ಸುಳ್ಳು ಸುದ್ದಿಗಳ ವಿಡಿಯೋವನ್ನು +918799711259 ಈ ನಂಬರ್ ಗೆ ವಾಟ್ಸಾಪ್ ಮಾಡಬಹುದು. ಅಥವಾ pibfactcheck@gmail.com ಈ ಇಮೇಲ್ ಐಡಿಗೆ ಕಳಿಸಬಹುದು.

Women with pan card will get rs 10000 from central government

Related Stories